ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನಂತರದಲ್ಲಿ ಚಿತ್ರರಂಗ ಸಾಕಷ್ಟು ಬಡವಾಗಿದೆ. ಅವರಿಲ್ಲದೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅವರನ್ನು ನೆನಪಿಸಿಕೊಳ್ಳುವ ಕೆಲಸ ಎಲ್ಲ ಕಡೆಗಳಲ್ಲೂ ನಡೆಯುತ್ತಿದೆ. ಪುನೀತ್ ರಾಜ್ಕುಮಾರ್ ಇಲ್ಲದೆ ಶಿವರಾಜ್ಕುಮಾರ್ ತುಂಬಾನೇ ಬೇಸರಗೊಂಡಿದ್ದಾರೆ. ಈಗ ನಿಧಾನವಾಗಿ ಅವರು ಮತ್ತೆ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದಾರೆ. ಧನಂಜಯ ನಟನೆಯ ‘ಬಡವ ರಾಸ್ಕಲ್’ ಸಿನಿಮಾ ಡಿಸೆಂಬರ್ 24ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ಗೆ ಸಿನಿ ಪ್ರೇಮಿಗಳಿಂದ ಮೆಚ್ಚುಗೆ ಬಂದಿದೆ. ಇಂದು (ಡಿಸೆಂಬರ್ 19) ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಇದಕ್ಕೆ ಶಿವಣ್ಣ ಕೂಡ ಆಗಮಿಸಿದ್ದರು. ಈ ವೇಳೆ ಪುನೀತ್ ಅವರನ್ನು ನೆನೆಯುವ ಕಾರ್ಯ ನಡೆಯಿತು. ಅಲ್ಲದೆ, ಶಿವರಾಜ್ಕುಮಾರ್ ಚಿತ್ರರಂಗದ ಕಾರ್ಯಕ್ರಮಕ್ಕೆ ಮರಳಿರುವುದಕ್ಕೆ ಧನ್ಯವಾದ ತಿಳಿಸಿದರು ತಾರಾ.
ಇದನ್ನೂ ಓದಿ: ಧನಂಜಯ ನಟನೆಯ ‘ಬಡವ ರಾಸ್ಕಲ್’ ಪ್ರೀ-ರಿಲೀಸ್ ಕಾರ್ಯಕ್ರಮ ಲೈವ್ ನೋಡಿ