‘ವಿಕ್ರಾಂತ್​ ರೋಣ’ ಪ್ಲ್ಯಾನ್​ನಲ್ಲಿ ದೊಡ್ಡ ಬದಲಾವಣೆ; ಒಟಿಟಿ ಆಫರ್​ ಬೆನ್ನಲ್ಲೇ ಟೀಸರ್​ ರಿಲೀಸ್​ ಮುಂದೂಡಿಕೆ?

‘ವಿಕ್ರಾಂತ್​ ರೋಣ’ ಪ್ಲ್ಯಾನ್​ನಲ್ಲಿ ದೊಡ್ಡ ಬದಲಾವಣೆ; ಒಟಿಟಿ ಆಫರ್​ ಬೆನ್ನಲ್ಲೇ ಟೀಸರ್​ ರಿಲೀಸ್​ ಮುಂದೂಡಿಕೆ?
‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಕಿಚ್ಚ ಸುದೀಪ್​, ಜಾಕ್ವೆಲಿನ್​ ಫರ್ನಾಂಡಿಸ್​

Vikrant Rona Movie: ಮೊದಲಿನ ಪ್ಲ್ಯಾನ್​ ಪ್ರಕಾರವೇ ನಡೆದರೆ ಫೆ.24ರಂದು ‘ವಿಕ್ರಾಂತ್​ ರೋಣ’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಈ ನಡುವೆ ಚಿತ್ರದ ಬಗ್ಗೆ ಹೊಸ ಹೊಸ ಮಾಹಿತಿ ಕೇಳಿಬಂದಿದೆ.

TV9kannada Web Team

| Edited By: Madan Kumar

Jan 06, 2022 | 2:43 PM

ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್​ ಪ್ರಕರಣಗಳ (Omicron Cases in India) ಕಾರಣದಿಂದ ಎಲ್ಲ ಉದ್ಯಮಗಳು ಆತಂಕಕ್ಕೆ ಒಳಗಾಗಿವೆ. ಚಿತ್ರರಂಗ ಕೂಡ ಅನಿಶ್ಚಿತತೆಯಲ್ಲಿ ಕಾಲ ಕಳೆಯುವಂತಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ತೆಲುಗಿನಲ್ಲಿ ‘ಆರ್​ಆರ್​ಆರ್​’ ಹಾಗೂ ‘ರಾಧೆ ಶ್ಯಾಮ್​’ ಚಿತ್ರಗಳ ರಿಲೀಸ್​ ಡೇಟ್​ ಈಗಾಗಲೇ ಪೋಸ್ಟ್​ಪೋನ್​ ಆಗಿದೆ. ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ವಿಕ್ರಾಂತ್​ ರೋಣ’ (Vikrant Rona Movie) ಮೇಲೆ ಎಲ್ಲರ ಗಮನ ನೆಟ್ಟಿದೆ. ಸುದೀಪ್​ (Kichcha Sudeep) ಅಭಿನಯದ ಈ ಸಿನಿಮಾ ಬಗ್ಗೆ ಕೆಲವು ಇಂಟರೆಸ್ಟಿಂಗ್​ ವಿಚಾರಗಳು ಕೇಳಿಬರುತ್ತಿವೆ. ಈ ಚಿತ್ರತಂಡ ಕೂಡ ಕೆಲವು ಪ್ಲ್ಯಾನ್​ಗಳನ್ನು ಬದಲಾಯಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಒಟಿಟಿ ಪ್ಲಾಟ್​ಫಾರ್ಮ್​ಗಳಿಂದ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಭರ್ಜರಿ ಬೇಡಿಕೆ ಬಂದಿದೆ ಎಂಬ ಮಾತು ಕೇಳಿಬಂದಿದೆ.

‘ರಂಗಿತರಂಗ’ ಖ್ಯಾತಿಯ ಅನೂಪ್​ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾಲಿನಿ ಮಂಜುನಾಥ್​ ಮತ್ತು ಅಲಂಕಾರ್​ ಪಾಂಡಿಯನ್​ ಬಂಡವಾಳ ಹೂಡಿದ್ದಾರೆ. ಮುಖ್ಯಪಾತ್ರದಲ್ಲಿ ಕಿಚ್ಚ ಸುದೀಪ್​, ನೀತಾ ಅಶೋಕ್​, ನಿರೂಪ್​ ಭಂಡಾರಿ, ಜಾಕ್ವೆಲಿನ್​ ಫರ್ನಾಂಡಿಸ್​ ಮುಂತಾದವರು ನಟಿಸಿದ್ದಾರೆ. ಫೆ.3ರಂದು ವಿಶ್ವಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿತ್ತು. ಆದರೆ ಕೊವಿಡ್​ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದರಿಂದ ತಂಡದ ಪ್ಲ್ಯಾನ್​ ಬದಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

ಸದ್ಯಕ್ಕೆ ‘ವಿಕ್ರಾಂತ್​ ರೋಣ’ ಟೀಸರ್​ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾದ ಪ್ರಸಾರ ಹಕ್ಕುಗಳನ್ನು ಖರೀದಿಸಲು ದೊಡ್ಡ ದೊಡ್ಡ ಒಟಿಟಿ ಸಂಸ್ಥೆಗಳು ಮುಂದೆ ಬಂದಿವೆ. ಒಳ್ಳೆಯ ಮೊತ್ತಕ್ಕೆ ಆಫರ್​ ಮಾಡಲಾಗುತ್ತಿದೆಯಂತೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಮೊದಲಿನ ಪ್ಲ್ಯಾನ್​ ಪ್ರಕಾರವೇ ನಡೆದರೆ ಫೆ.24ರಂದು ‘ವಿಕ್ರಾಂತ್​ ರೋಣ’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಬೃಹತ್​ ಸೆಟ್​ಗಳನ್ನು ನಿರ್ಮಿಸಿ ‘ವಿಕ್ರಾಂತ್​ ರೋಣ’ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರ 3ಡಿ ವರ್ಷನ್​ನಲ್ಲಿಯೂ ಮೂಡಿಬರುತ್ತಿದೆ. ಹಾಗಾಗಿ ಥಿಯೇಟರ್​ನಲ್ಲಿ ರಿಲೀಸ್​ ಮಾಡುವುದೇ ಚಿತ್ರತಂಡದ ಮೊದಲ ಆದ್ಯತೆ ಆಗಿರಲಿದೆ. ಸುದೀಪ್​ ಕೂಡ ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್​ಗಳು ಗಮನ ಸೆಳೆದಿವೆ. ಬುರ್ಜ್​ ಖಲೀಫಾ ಕಟ್ಟಡದ ಮೇಲೆ ಟೈಟಲ್​ ಲಾಂಚ್​ ಮಾಡಿದ್ದು ಈ ಸಿನಿಮಾದ ವಿಶೇಷವಾಗಿತ್ತು.

ಇದನ್ನೂ ಓದಿ:

ಸುದೀಪ್​ ಬಾಡಿಗಾರ್ಡ್​ಗೆ ವಿಡಿಯೋ ಕಾಲ್​ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ

ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್​ ನೀಡಬೇಕು ಆರ್​ಆರ್​ಆರ್​ ನಿರ್ಮಾಪಕರು; ಹೀಗಾದ್ರೆ ಚಿತ್ರದ ಭವಿಷ್ಯ ಏನು?

Follow us on

Related Stories

Most Read Stories

Click on your DTH Provider to Add TV9 Kannada