‘ಹಾಗಾಗಿದ್ದರೆ ಹೆಲಿಕಾಪ್ಟರ್ನಲ್ಲಿ ಬಂದು ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತಿದ್ದೆ’; ಧನಂಜಯ
‘ಬಡವ ರಾಸ್ಕಲ್’ ಸಿನಿಮಾ ಗೆಲುವು ಕಂಡಿದೆ. ಡಾಲಿ ಧನಂಜಯ ಅವರು ಮೊದಲ ನಿರ್ಮಾಣದಲ್ಲೇ ಯಶಸ್ಸು ಪಡೆದಿದ್ದಾರೆ. ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ
‘ಬಡವ ರಾಸ್ಕಲ್’ ಗೆದ್ದ ಸಂಭ್ರಮದಲ್ಲಿ ರಾಜ್ಯದ ಕೆಲ ಜಿಲ್ಲೆಗಳಿಗೆ ಧನಂಜಯ ಅವರು ಭೇಟಿ ನೀಡಿದ್ದಾರೆ. ಹಾಸನ, ಬಳ್ಳಾರಿ ಮೊದಲಾದ ಜಿಲ್ಲೆಗಳಿಗೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ರಾಯಚೂರು, ಬೆಳಗಾವಿ ಮೊದಲಾದ ಕಡೆಗೆ ತೆರಳೋಕೆ ಸಾಧ್ಯವಾಗಿಲ್ಲ. ಬೆಳಗಾವಿಯಲ್ಲಿ ಒಂದು ವಿಜಯೋತ್ಸವ ಆಚರಿಸಬೇಕು ಎನ್ನುವ ಉದ್ದೇಶ ತಂಡದ್ದಾಗಿತ್ತು. ಅದಕ್ಕೆ ಕೊರೊನಾ ಮೂರನೇ ಅಲೆ ಅಡ್ಡಗಾಲು ಹಾಕಿದೆ. ಈ ಮಧ್ಯೆ ಕಲೆಕ್ಷನ್ ಬಗ್ಗೆ ಧನಂಜಯ ಅವರು ಮಾತನಾಡಿದ್ದಾರೆ. ‘ಬಡವ ರಾಸ್ಕಲ್’ ಶ್ರೀಮಂತನಾಗಿದ್ದಾನಾ ಎನ್ನುವ ಪ್ರಶ್ನೆ ಧನಂಜಯ ಅವರಿಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನಮ್ಮ ‘ಬಡವ ರಾಸ್ಕಲ್’ ಶ್ರೀಮಂತನಾಗಿಲ್ಲ. ಆದರೆ ಸೇಫ್ ಅಂತೂ ಆಗಿದ್ದಾನೆ’ ಎಂದಿದ್ದಾರೆ. ಹಾಗಾದರೆ ಸಿನಿಮಾದ ಗಳಿಕೆ 15 ಕೋಟಿ ರೂಪಾಯಿ ದಾಟಿದೆಯಾ? ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ಎಷ್ಟು ಕಲೆಕ್ಷನ್ ಆಗಿದೆ ಎಂಬುದರ ಪಕ್ಕಾ ಲೆಕ್ಕ ನನಗೆ ಇಲ್ಲ. ಈ ಬಗ್ಗೆ ಡಿಸ್ಟ್ರಿಬ್ಯೂಟರ್ಗಳನ್ನು ಕೇಳಬೇಕು. ನನಗೆ ಅನ್ನಿಸಿದ ಹಾಗೆ ಸಿನಿಮಾ ಅಷ್ಟೊಂದು ಗಳಿಕೆ ಮಾಡಿಲ್ಲ. ಸಿನಿಮಾ ಆ ಮಟ್ಟಿಗೆ ಗಳಿಕೆ ಮಾಡಿದ್ದರೆ ಹೆಲಿಕಾಪ್ಟರ್ನಲ್ಲಿ ಬಂದು ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತಿದ್ದೆ’ ಎಂದಿದ್ದಾರೆ ಧನಂಜಯ. ಇಷ್ಟೆಲ್ಲ ಮಾತನಾಡಿದ ಹೊರತಾಗಿಯೂ ಅವರು ಅಸಲಿ ಕಲೆಕ್ಷನ್ ಎಷ್ಟು ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: Badava Rascal: ಜನಮನ ಗೆದ್ದ ‘ಬಡವ ರಾಸ್ಕಲ್’; ನಾಡಿನೆಲ್ಲೆಡೆ ಧನಂಜಯ್ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?