ಆನರ್ ಮ್ಯಾಜಿಕ್ ವಿ ಫೋಲ್ಡೇಬಲ್ ಸ್ಮಾರ್ಟ್ಫೋನ್ ಜನವರಿ 10ರಂದು ಚೀನಾನಲ್ಲಿ ಲಾಂಚ್ ಆಗುತ್ತಿದೆ, ಭಾರತದಲ್ಲಿ ಇನ್ನೂ ತಡ!
ಆನರ್ ಮ್ಯಾಜಿಕ್ ವಿ ಸ್ಮಾರ್ಟ್ ಫೋನ್ ಪ್ರೋಮೋ ಇಮೇಜ್ ನೋಡಿದ್ದೇಯಾದರೆ, ಫೋನಿನ ಕವರ್ ಡಿಸ್ಪ್ಲೇ ಸೆಲ್ಫೀ ಕೆಮೆರಾಗಾಗಿ ಪಂಚ್ ಹೋಲ್ ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿರುವ ಮೇನ್ ಕೆಮೆರಾ ಸೆಟಪ್ ಮೂರು ಯುನಿಟ್ಗಳನ್ನು ಹೊಂದಿದೆ.
ಆನರ್ ಹೊಸ ವರ್ಷವನ್ನು ಅದ್ಭುತವಾದ ನೋಟ್ನೊಂದಿಗೆ ಆರಂಭಿಸಲು ನಿರ್ಧರಿಸಿದಂತಿದೆ. ಯಾಕೆ ಅಂತ ಹೇಳ್ತೀವಿ ಮಾರಾಯ್ರೇ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆನರ್ ಮ್ಯಾಜಿಕ್ ವಿ ಸ್ಮಾರ್ಟ್ ಫೋನ್ ಜನೆವರಿ 10 ರಂದು ಚೀನಾನಲ್ಲಿ ಲಾಂಚ್ ಆಗಲಿದೆ. ಅದೇ ಮಾಹಿತಿಯ ಪ್ರಕಾರ ಸ್ಮಾರ್ಟ್ಪೋನ್ ಲಾಂಚ್ ಕಾರ್ಯಕ್ರಮವು ಲೈವ್ ಸ್ಟ್ರೀಮ್ ಆಗಲಿದೆ. ಗಲಾಜಿ ಜೆಡ್ ಫೋಲ್ಡ್3 ಪೋನಿನ ಹಾಗೆಯೇ ಆನರ್ ಮ್ಯಾಜಿಕ್ ವಿ ಸ್ಮಾರ್ಟ್ ಫೋನ್ ಫೋಲ್ಡೇಬಲ್ ಆಗಿದೆ. ಅದನ್ನು ನೇರಕ್ಕೆ ಫೋಲ್ಡ್ ಮಾಡಬಹುದು.
ಆನರ್ ಮ್ಯಾಜಿಕ್ ವಿ ಸ್ಮಾರ್ಟ್ ಫೋನ್ ಪ್ರೋಮೋ ಇಮೇಜ್ ನೋಡಿದ್ದೇಯಾದರೆ, ಫೋನಿನ ಕವರ್ ಡಿಸ್ಪ್ಲೇ ಸೆಲ್ಫೀ ಕೆಮೆರಾಗಾಗಿ ಪಂಚ್ ಹೋಲ್ ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿರುವ ಮೇನ್ ಕೆಮೆರಾ ಸೆಟಪ್ ಮೂರು ಯುನಿಟ್ಗಳನ್ನು ಹೊಂದಿದೆ. ಕೆಮೆರಾ ಸೆಟಪ್ ಡುಯಲ್-ಎಲ್ ಈ ಡಿ ಫ್ಲ್ಯಾಶ್ ಮತ್ತು ಕೊಂಚ ಬೆಳಕು ಹಾಗೂ ಪಿಡಿಎಎಫ್ ಸೆನ್ಸರ್ ಗಳನ್ನು ಒಳಗೊಂಡಿದೆ.
ಆನರ್ ಮ್ಯಾಜಿಕ್ ವಿ ಫೋನ್ ಅಧಿಕೃತವಾಗಿ ಸ್ನಾಪ್‌ಡ್ರಾಗನ್ 8 ಜನ್ 1 ನೊಂದಿಗೆ ಮೊದಲ ಫೋಲ್ಡೇಬಲ್ ಫೋನ್ ಅಂತ ದೃಢೀಕರಿಸಲ್ಪಟ್ಟಿದೆ ಮತ್ತು 2022 ರಲ್ಲಿ ಇದು ಸ್ವತಂತ್ರ ಬ್ರ್ಯಾಂಡ್ ಒಂದರ ಫ್ಲ್ಯಾಗ್ ಶಿಪ್ ಫೋನ್ ಆಗಿದೆ. ಸದರಿ ಸ್ಪಾರ್ಟ್ ಫೋನ್ 66ಡಬ್ಲ್ಯೂ ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.
ಲಾಂಚ್ ಈವೆಂಟ್ ಚೀನಾದಲ್ಲಿರುವುದರಿಂದ ಆನರ್ ಜಿಎಮ್ಎಸ್ ಬಗ್ಗೆ ಏನನ್ನೂ ಹೇಳಲು ಇಚ್ಛಿಸದು ಅಂತ ಕಾಣುತ್ತದೆ. ಆದರೆ, ಮ್ಯಾಜಿಕ್ ವಿ ಫೋನನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಲಾಂಚ್ ಆದರೆ ಅದು ನಿಸ್ಸಂದೇಹವಾಗಿ ಗೂಗಲ್ ಸೇವೆಗಳನ್ನು ಬೆಂಬಲಿಸುತ್ತದೆ.