ಕಪ್ಪು ವೆಲ್ವೆಟ್ ಮತ್ತು ಲೆದರ್ ಗೌನಲ್ಲಿ 48ರ ಮಲೈಕಾ ಅರೋರಾ 25ರ ತರುಣಿಯರನ್ನು ನಾಚಿಸುವಂತಿದ್ದಾರೆ, ವಿಡಿಯೋ ನೋಡಿದವರು ಕ್ಲೀನ್ ಬೌಲ್ಡ್!!
ತೊಡೆಯವರೆಗೆ ಸೀಳು ಇರುವ ಈ ಗೌನಿನ ಒಂದು ಭಾಗವನ್ನು ವೆಲ್ವೆಟ್ ನಿಂದ ವಿನ್ಯಾಸಗೊಳಿಸಿದ್ದರೆ ಮತ್ತೊಂದು ಭಾಗದಲ್ಲಿ ಲೆದರ್ ಇದೆ. ಆಗಲೇ ಹೇಳಿದಂತೆ ಅವರ ಸುಂದರವಾದ ದೇಹಕ್ಕೆ ಈ ಗೌನ್ ಬಹಳ ಅದ್ಭುತವಾಗಿ ಒಗ್ಗುತ್ತದೆ.
ವಯಸ್ಸು 48 ಆಗಿದ್ದರೂ ತನಗಿಂತ 25 ವರ್ಷ ಚಿಕ್ಕವರಾಗಿರುವ ಬಾಲಿವುಡ್ ನಟಿಯರಗಿಂತ ಸೊಗಸಾಗಿ ಮತ್ತು ಮಾದಕವಾಗಿ ಕಾಣುವ ಬೆಡಗಿ ಮಲೈಕಾ ಅರೋರಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಖ್ಯಾತ ಫ್ಯಾಶನ್ ಡಿಸೈನರ್ ಜಾನ್ ಪೌಲ್ ಅಟೇಕರ್ ವಿನ್ಯಾಸಗೊಳಿದ ಕಪ್ಪು ವೆಲ್ವೆಟ್ ಮತ್ತು ಲೆದರ್ ಗೌನ್ ಧರಿಸಿ ತೆಗೆಸಿಕೊಂಡಿರುವ ಫೋಟೋಗಳನ್ನು ಪೋಸ್ಟ್ ಮಾಡಿ ನೋಡುಗರ ಎದೆಗಳಲ್ಲಿ ಕಿಚ್ಚು ಹೊತ್ತಿಸಿದ್ದಾರೆ. ಈ ಚಿರಯೌವನೆಗೆ ವಯಸ್ಸು ಕೇವಲ ಒಂದು ನಂಬರ್ ಮಾತ್ರ ಅಂತ ಹೇಳಿದರೆ ಅತಿಶಯೋಕ್ತಿಯಾಗಲಾರದು ಮಾರಾಯ್ರೇ. ಈ ವಿಡಿಯೋನಲ್ಲಿರುವ ಮಲೈಕಾರ ಫೊಟೋಗಳನ್ನು ನೋಡಿ. 36 ವರ್ಷ ವಯಸ್ಸಿನ ಅರ್ಜುನ್ ಕಪೂರ್ ಏನು ಅವರ 86 ವರ್ಷದ ತಾತನೂ ಮರುಳಾಗುತ್ತಾರೆ! ಮಲೈಕಾಗೆ ವಿಚ್ಛೇದಿತ ಪತಿ ಅರ್ಬಾಜ್ ಖಾನ್ ಅವರಿಂದ 19 ವರ್ಷ ವಯಸ್ಸಿನ ಮಗ ಇದ್ದಾನೆ.
ನಮಗೆ ಗೊತ್ತಿದೆ, ಮಲೈಕಾಳ ಫೋಟೋಗಳ ಮೇಲಿಂದ ನಿಮಗೆ ಕಣ್ಣು ಕೀಳಲಾಗುತ್ತಿಲ್ಲ, ‘ಮನ್ ಮೆ ಲಡ್ಡು ಫೂಟ್ ರಹೆ ಹೈ!’, ಹೌದು ತಾನೆ? ಅವರನ್ನು ನೋಡುವ ಎಲ್ಲರ ಪಾಡು ಅದೇ ಮಾರಾಯ್ರೇ. ಮಲೈಕಾ ಧರಿಸಿರುವ ಕಪ್ಪು ಲೆದರ್ ಮತ್ತು ವೆಲ್ವೆಟ್ ಗೌನಲ್ಲಿ ಶಿಲ್ಪಿಯೊಬ್ಬ ಅತ್ಯಂತ ಪ್ರಮಾಣಬದ್ಧವಾಗಿ ಕಟೆದಂತಿರುವ ಮಟ್ಟಸು ದೇಹ ಪಡ್ಡೆಗಳ ನಿದ್ರೆ ಹಾರಿಸುವುದು ನಿಶ್ಚಿತ.
ತೊಡೆಯವರೆಗೆ ಸೀಳು ಇರುವ ಈ ಗೌನಿನ ಒಂದು ಭಾಗವನ್ನು ವೆಲ್ವೆಟ್ ನಿಂದ ವಿನ್ಯಾಸಗೊಳಿಸಿದ್ದರೆ ಮತ್ತೊಂದು ಭಾಗದಲ್ಲಿ ಲೆದರ್ ಇದೆ. ಆಗಲೇ ಹೇಳಿದಂತೆ ಅವರ ಸುಂದರವಾದ ದೇಹಕ್ಕೆ ಈ ಗೌನ್ ಬಹಳ ಅದ್ಭುತವಾಗಿ ಒಗ್ಗುತ್ತದೆ.
ತೊಟ್ಟಿರುವ ಗೌನಿಗೆ ಮ್ಯಾಚ್ ಆಗುವ ಎಮೆರಾಲ್ಡ್ ಲಾಕೆಟ್ ಹೊಂದಿರುವ ಚಿನ್ನದ ನೆಕ್ಲೇಸ್ ಧರಿಸಿದ್ದಾರೆ. ಬೆರಳಿಗೆ ಒಂದು ಸೊಗಸಾದ ಉಂಗುರ ಮತ್ತು ಮಣಿಕಟ್ಟಿಗೆ ಬ್ರೇಸ್ಲೆಟ್ ಹಾಕಿಕೊಂಡಿದ್ದಾರೆ.
ಮಲೈಕಾ ಮುಖಕ್ಕೆ ಜಾಸ್ತಿ ಅಲಂಕಾರ ಮಾಡಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ತುಟಿಗಳಿಗೆ ಹಗುರವಾದ ಲಿಪ್ ಸ್ಟಿಕ್ ಬಳಿದುಕೊಂಡಿದ್ದಾರೆ. ಈ ದಿವಾ ಬೇರೆ ಡ್ರೆಸ್ಗಳನ್ನು ಧರಿಸಿರುವ ಇಮೇಜ್ ಸಹ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ಬೃಹತ್ ಗಾತ್ರದ ಏಡಿ ಗಾಲ್ಫ್ ಬ್ಯಾಟ್ ಮುರಿದು ಹಾಕಿದೆ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು