‘ಪುನೀತ್ ಬಹಳ ಶ್ರಮಜೀವಿ, ಅವರೊಂದಿಗೆ ಡಾನ್ಸ್ ಮಾಡಬೇಕು ಎಂಬ ಕನಸಿತ್ತು’; ಅಪ್ಪು ಸ್ಮರಿಸಿದ ನಟಿ ಪ್ರೇಮಾ

ಸ್ಯಾಂಡಲ್​ವುಡ್ ಹಿರಿಯ ನಟಿ ಪ್ರೇಮಾ ನಟ ಪುನೀತ್ ರಾಜ್​ಕುಮಾರ್ ಕುರಿತು ಮಾತನಾಡಿದ್ದಾರೆ. ಪುನೀತ್ ಜತೆಗೆ ನೃತ್ಯ ಮಾಡಬೇಕು ಎಂಬ ಕನಸು ಕೊನೆಗೂ ಈಡೇರಲಿಲ್ಲ ಎಂದು ಅವರು ಭಾವುಕರಾಗಿದ್ದಾರೆ.

TV9kannada Web Team

| Edited By: shivaprasad.hs

Jan 04, 2022 | 10:04 AM

ಸ್ಯಾಂಡಲ್​ವುಡ್ ಹಿರಿಯ ನಟಿ ಪ್ರೇಮಾ ಟಿವಿ9ನೊಂದಿಗೆ ಮಾತನಾಡುತ್ತಾ ನಟ ಪುನೀತ್ ರಾಜ್​ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ‘‘ಓಂ ಚಿತ್ರದ ಸಂದರ್ಭದಲ್ಲಿ ಅವರು ಚಿತ್ರೀಕರಣದ ಸ್ಥಳಕ್ಕೆ ಬರುತ್ತಿದ್ದರು. ಅವರದ್ದೇ ಬ್ಯಾನರ್. ಚಿತ್ರೀಕರಣವನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದರು. ಬಹಳ ಶ್ರಮಜೀವಿ ಪುನೀತ್’’ ಎಂದಿದ್ದಾರೆ ಪ್ರೇಮಾ. ಪುನೀತ್ ಅವರೊಂದಿಗೆ ಚಿತ್ರಗಳ ಕುರಿತು ಪ್ರಶ್ನಿಸಿದಾಗ, ‘‘ಅಪ್ಪು ಜತೆ ಡಾನ್ಸ್ ಮಾಡಬೇಕು ಎಂದು ಬಹಳ ಕನಸಿತ್ತು. ಆದರೆ ಸಾಧ್ಯವಾಗಲಿಲ್ಲ. ಆದರೆ ಅವರು ನಮ್ಮೊಂದಿಗಿದ್ದಾರೆ’’ ಎಂದಿದ್ದಾರೆ ನಟಿ.

ಇದನ್ನೂ ಓದಿ:

Puneeth Rajkumar: ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ ‘ರಾಜಕುಮಾರ’; ಚಿತ್ರಕ್ಕೆ ಲಭ್ಯವಾಯ್ತು ವಿಶೇಷ ಗರಿಮೆ

Nysa Devgan: ಇನ್ನೂ ಬಾಲಿವುಡ್​ಗೆ ಕಾಲಿಡದ ಅಜಯ್- ಕಾಜೊಲ್ ಪುತ್ರಿಯ ಚಿತ್ರಗಳು ವೈರಲ್; ಇದಕ್ಕಿದೆ ವಿಶೇಷ ಕಾರಣ

Follow us on

Click on your DTH Provider to Add TV9 Kannada