Nysa Devgan: ಇನ್ನೂ ಬಾಲಿವುಡ್​ಗೆ ಕಾಲಿಡದ ಅಜಯ್- ಕಾಜೊಲ್ ಪುತ್ರಿಯ ಚಿತ್ರಗಳು ವೈರಲ್; ಇದಕ್ಕಿದೆ ವಿಶೇಷ ಕಾರಣ

Nysa Devgan: ಇನ್ನೂ ಬಾಲಿವುಡ್​ಗೆ ಕಾಲಿಡದ ಅಜಯ್- ಕಾಜೊಲ್ ಪುತ್ರಿಯ ಚಿತ್ರಗಳು ವೈರಲ್; ಇದಕ್ಕಿದೆ ವಿಶೇಷ ಕಾರಣ
ನ್ಯಾಸಾ ದೇವಗನ್

Ajay Devgan | Kajol: ಬಾಲಿವುಡ್ ತಾರಾ ಜೋಡಿ ಅಜಯ್ ದೇವಗನ್ ಹಾಗೂ ಕಾಜೊಲ್ ಪುತ್ರಿಯ ಚಿತ್ರಗಳು ಸಖತ್ ವೈರಲ್ ಆಗಿದೆ. ಇದಕ್ಕೆ ಒಂದು ಕಾರಣ ಅಭಿಮಾನಿಗಳು ಕಂಡುಹಿಡಿದ ಒಂದು ಸಾಮ್ಯತೆ!

TV9kannada Web Team

| Edited By: shivaprasad.hs

Jan 04, 2022 | 9:48 AM

ಅಜಯ್ ದೇವಗನ್ (Ajay Devgan) ಹಾಗೂ ಕಾಜೊಲ್ (Kajol) ಚಿತ್ರರಂಗದ ತಾರಾ ಜೋಡಿಗಳಲ್ಲೊಂದು. ಅವರ ಪುತ್ರಿ ನ್ಯಾಸಾ ದೇವಗನ್ (Nysa Devgan) ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲವಾದರೂ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿ ಖಾತೆಗಳೇ ಬಹಳಷ್ಟಿವೆ. ಅಲ್ಲದೇ ತಾರಾ ಪುತ್ರಿಯನ್ನು ಗಮನಿಸುವ ಜನರು ಹೆಚ್ಚಿದ್ದಾರೆ. ಆದ್ದರಿಂದಲೇ ಅವರ ಚಲನ-ವಲನಗಳು ದೊಡ್ಡ ಸುದ್ದಿಯಾಗುತ್ತದೆ. ಇತ್ತೀಚೆಗೆ ನ್ಯಾಸಾ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಅಭಿಮಾನಿಗಳು ವಿಶೇಷ ಕಾರಣವನ್ನೂ ಕಂಡುಹಿಡಿದಿದ್ದಾರೆ.

ನ್ಯಾಸಾ ಇತ್ತೀಚೆಗೆ ಸೆಲ್ಫಿಯೊಂದನ್ನು ಹಂಚಿಕೊಂಡಿದ್ದರು. ಕಡು ಕಪ್ಪು ಬಣ್ಣದ ದಿರಿಸು ಧರಿಸಿ ಸರಳ ಉಡುಗೆಯಲ್ಲಿ ಅವರು ಮಿಂಚಿದ್ದರು. ಇದನ್ನು ಅವರ ಅಭಿಮಾನಿಗಳು ಇಷ್ಟಪಟ್ಟಿದ್ದರು. ಇದೀಗ ಆ ಚಿತ್ರ ವೈರಲ್ ಆಗಿದೆ. ಇದಕ್ಕೆ ಕಾರಣ ಅವರ ತಾಯಿ ಕಾಜೊಲ್ ಧರಿಸಿದ್ದ ಉಡುಗೆಗೂ, ನ್ಯಾಸಾ ಧರಿಸಿದ್ದ ಉಡುಗೆಗೂ ಇದ್ದ ಸಾಮ್ಯತೆ!

2017ರಲ್ಲಿ ಕಾಜೊಲ್ ಇದೇ ಮಾದರಿಯ ದಿರಿಸನ್ನು ಧರಿಸಿ ಫೋಟೋಗೆ ಭರ್ಜರಿ ಪೋಸ್ ಕೊಟ್ಟಿದ್ದರು. ಇದೀಗ ಕಾಕತಾಳೀಯವೆಂಬಂತೆ 2022ರಲ್ಲಿ ನ್ಯಾಸಾ ಕೂಡ ಅದೇ ಮಾದರಿಯ ದಿರಿಸನ್ನು ಧರಿಸಿ ಪೋಸ್ ನೀಡಿದ್ದಾರೆ. ಅವರ ಅಭಿಮಾನಿಗಳು ಎರಡನ್ನೂ ಅಕ್ಕಪಕ್ಕ ಇಟ್ಟು ಚಿತ್ರ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ನ್ಯಾಸಾ ಹಾಗೂ ಕಾಜೊಲ್ ವೈರಲ್ ಆದ ಚಿತ್ರಗಳು ಇಲ್ಲಿವೆ:

ನ್ಯಾಸಾಗೆ ಯುಗ್ ಎನ್ನುವ ತಮ್ಮನಿದ್ದಾನೆ. ಪ್ರಸ್ತುತ ಅವರು ಸ್ವಿಟ್ಜರ್​ಲ್ಯಾಂಡ್​ನಲ್ಲಿ ಇಂಟರ್​ನ್ಯಾಷನಲ್ ಹಾಸ್ಪಿಟಾಲಿಟಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಸಿಂಗಾಪುರದಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಇದನ್ನೂ ಓದಿ:

‘ಈ ಪರಿಸ್ಥಿತಿ ಶಾಶ್ವತವಾಗಿ ಮುಂದುವರೆಯಬಾರದು’; ಕೊರೊನಾ ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸಿದ ರಾಕುಲ್

Radhe Shyam: ಓಟಿಟಿ ರಿಲೀಸ್ ಮಾಡುವಂತೆ ‘ರಾಧೆ ಶ್ಯಾಮ್’ಗೆ ಬರೋಬ್ಬರಿ 350 ಕೋಟಿ ಆಫರ್; ಚಿತ್ರತಂಡದ ಪ್ಲಾನ್ ಏನು?

Follow us on

Related Stories

Most Read Stories

Click on your DTH Provider to Add TV9 Kannada