AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid 19: ಬಾಲಿವುಡ್​​ ತಾರೆಯರನ್ನು ಬೆಂಬಿಡದ ಕೊರೊನಾ; ಇದೀಗ ಮತ್ತೆ ಮೂವರಿಗೆ ಪಾಸಿಟಿವ್

Ekta Kapoor | John Abraham | Priya Runchal: ಮುಂಬೈನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ನಡುವೆ ಹಲವು ಖ್ಯಾತ ಬಾಲಿವುಡ್ ತಾರೆಯರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಂದು ಮೂವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

Covid 19: ಬಾಲಿವುಡ್​​ ತಾರೆಯರನ್ನು ಬೆಂಬಿಡದ ಕೊರೊನಾ; ಇದೀಗ ಮತ್ತೆ ಮೂವರಿಗೆ ಪಾಸಿಟಿವ್
ಜಾನ್ ಅಬ್ರಹಾಂ, ಪ್ರಿಯಾ ರುಂಚಾಲ್ (ಎಡ ಚಿತ್ರ), ಏಕ್ತಾ ಕಪೂರ್ (ಬಲ ಚಿತ್ರ)
TV9 Web
| Updated By: shivaprasad.hs|

Updated on: Jan 03, 2022 | 4:59 PM

Share

ಮುಂಬೈನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ಬಾಲಿವುಡ್ ತಾರೆಯರೂ ಇದರಿಂದ ಹೊರತಾಗಿಲ್ಲ. ಇತ್ತೀಚೆಗಷ್ಟೇ ಕರೀನಾ ಕಪೂರ್ (Kareena Kapoor) ಸೇರಿದಂತೆ ಹಲವರಿಗೆ ಕೊವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಇಂದು ಮತ್ತೆ ಮೂವರಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಪದ್ಮಶ್ರೀ ಪುರಸ್ಕೃತ ಕಿರುತೆರೆ ಹಾಗೂ ಹಿರಿತೆರೆ ನಿರ್ಮಾಪಕಿ, ಏಕ್ತಾ ಕಪೂರ್​​ಗೆ (Ekta kapoor) ಸೋಂಕು ತಗುಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರು ಅದನ್ನು ಖಚಿತಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ‘‘ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡಾಗ್ಯೂ ಕೊವಿಡ್ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿ, ಎಚ್ಚರಿಕೆಯಿಂದಿರಿ’’ ಎಂದಿದ್ದಾರೆ. ಈ ಪೋಸ್ಟ್​​ಗೆ ಹೀನಾ ಖಾನ್, ವಿಕ್ರಾಂತ್ ಮಸ್ಸಿ, ಮೌನಿ ರಾಯ್ (Mouni Roy) ಸೇರಿದಂತೆ ಬಾಲಿವುಡ್ ತಾರೆಯರು ಪ್ರತಿಕ್ರಿಯಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಏಕ್ತಾ ಕಪೂರ್ ಹಂಚಿಕೊಂಡ ಪೋಸ್ಟ್:

View this post on Instagram

A post shared by Erk❤️rek (@ektarkapoor)

ಜಾನ್ ಅಬ್ರಹಾಂ ಹಾಗೂ ಪ್ರಿಯಾ ರುಂಚಾಲ್​ಗೆ ಪಾಸಿಟಿವ್: ಇಂದು ಮುಂಜಾನೆ ಖ್ಯಾತ ನಟ ಜಾನ್ ಅಬ್ರಹಾಂ (John Abraham) ಹಾಗೂ ಅಬವರ ಪತ್ನಿ ಪ್ರಿಯಾ ರುಂಚಾಲ್​ಗೆ (Priya Runchal) ಕೊರೊನಾ ಪಾಸಿಟಿವ್ ಆಗಿತ್ತು. ಈ ಕುರಿತು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದ ನಟ, ‘‘ಕಳೆದ ಮೂರು ದಿನದ ಹಿಂದೆ ಕೊವಿಡ್ ಇದ್ದ ವ್ಯಕ್ತಿಯೋರ್ವರು ಭೇಟಿಯಾಗಿದ್ದರು. ನಂತರದಲ್ಲಿ ಅವರಿಗೆ ಸೋಂಕು ಇದ್ದಿದ್ದು ತಿಳಿಯಿತು. ಇದೀಗ ನನಗೆ ಹಾಗೂ ಪತ್ನಿ ಪ್ರಿಯಾಗೆ ಪಾಸಿಟಿವ್ ಬಂದಿದೆ. ಈರ್ವರಿಗೂ ಸೌಮ್ಯ ಲಕ್ಷಣಗಳಿದ್ದು, ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದೇವೆ. ಎಲ್ಲರೂ ಎಚ್ಚರಿಕೆಯಿಂದಿರಿ’’ ಎಂದು ತಿಳಿಸಿದ್ದರು.

ಈ ನಡುವೆ ಮುಂಬೈನಲ್ಲಿ ಸೋಂಕಿನ ಪ್ರಮಾಣ ಏರುತ್ತಲೇ ಇದೆ. ಇಂದು 8,063 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಬಾಲಿವುಡ್​​ ತಾರೆಯರೂ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ ನೋರಾ ಫತೇಹಿ (Nora Fatehi), ಮೃಣಾಲ್ ಠಾಕೂರ್, ಶಿಲ್ಪಾ ಶಿರೋಡ್ಕರ್ ಅವರಿಗೆ ಪಾಸಿಟಿವ್ ಬಂದಿತ್ತು. ಕಳೆದ ತಿಂಗಳು ರಿಯಾ ಕಪೂರ್, ಕರಣ್ ಬೂಲಾನಿ, ಕರೀನಾ ಕಪೂರ್ ಸೇರಿದಂತೆ ಹಲವರಿಗೆ ಸೋಂಕು ತಗುಲಿತ್ತು.

ಇದನ್ನೂ ಓದಿ:

Kareena Kapoor: ಬರೀ ಮೂರೇ ದಿನಕ್ಕೆ ಹೊಸ ವರ್ಷದ ರೂಲ್ ಬ್ರೇಕ್ ಮಾಡಿದ ಕರೀನಾ; ಫ್ಯಾನ್ಸ್​​ಗೆ ನೀಡಿದ ಸಂದೇಶವೇನು?

ಕಡಲ ಮಧ್ಯದಲ್ಲಿ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಸ್ ಹೊಸ ವರ್ಷದ ಸಂಭ್ರಮಾಚರಣೆ; ಫೋಟೋ ವೈರಲ್