AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kareena Kapoor: ಬರೀ ಮೂರೇ ದಿನಕ್ಕೆ ಹೊಸ ವರ್ಷದ ರೂಲ್ ಬ್ರೇಕ್ ಮಾಡಿದ ಕರೀನಾ; ಫ್ಯಾನ್ಸ್​​ಗೆ ನೀಡಿದ ಸಂದೇಶವೇನು?

Saif Ali Khan: ಬಾಲಿವುಡ್ ನಟಿ ಕರೀನಾ ಕಪೂರ್ ತಾವೇ ಹಾಕಿಕೊಂಡಿದ್ದ ನಿಯಮಗಳನ್ನು ಗಾಳಿಗೆ ತೂರಿ, ಹೃದಯದ ಮಾತು ಕೇಳಿದ್ದಾರೆ. 2022ನ್ನು ದೊಡ್ಡ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳಿ ಎಂದೂ ಅವರು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

Kareena Kapoor: ಬರೀ ಮೂರೇ ದಿನಕ್ಕೆ ಹೊಸ ವರ್ಷದ ರೂಲ್ ಬ್ರೇಕ್ ಮಾಡಿದ ಕರೀನಾ; ಫ್ಯಾನ್ಸ್​​ಗೆ ನೀಡಿದ ಸಂದೇಶವೇನು?
ಕರೀನಾ ಕಪೂರ್ (Credits: Kareena Kapoor/ Instagram)
TV9 Web
| Updated By: shivaprasad.hs|

Updated on:Jan 03, 2022 | 3:59 PM

Share

ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್. ಅದರಲ್ಲೂ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ನಟಿ ಇನ್ಸ್ಟಾಗ್ರಾಂ (Instagram) ಖಾತೆ ತೆರೆದಿದ್ದರು. ಇದೀಗ ಅವರಿಗೆ 85 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಪೋಸ್ಟ್​ಗಳನ್ನು, ಸ್ಟೋರಿಗಳನ್ನು ಹಂಚಿಕೊಳ್ಳುತ್ತಾ ನಟಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಆ ಸಂದರ್ಭದಲ್ಲೂ ದಿನದ ಅಪ್ಡೇಟ್​ಗಳನ್ನು ನಟಿ ನೀಡುತ್ತಿದ್ದರು. ಅಲ್ಲದೇ ತಮ್ಮ ಹಾಸ್ಯಪ್ರಜ್ಞೆಯಿಂದ ಎಲ್ಲರ ಮುಖದಲ್ಲಿ ನಗು ಮೂಡಿಸಲೂ ಅವರು ಯಶಸ್ವಿಯಾಗುತ್ತಿದ್ದರು. ಇದೀಗ ಕರೀನಾ ಮತ್ತೆ ಅಭಿಮಾನಿಗಳ ಮನಗೆದ್ದಿದ್ದಾರೆ; ಅದೂ ರೂಲ್ಸ್ ಬ್ರೇಕ್ ಮಾಡಿ! ಹೌದು. ಹೊಸ ವರ್ಷಕ್ಕೆ ತಾವೇ ಹಾಕಿಕೊಂಡ ರೂಲ್ಸ್ ಮುರಿದು ಎಲ್ಲರಿಗೂ ಸಂದೇಶವನ್ನೂ ಬೆಬೋ (Bebo) ನೀಡಿದ್ದಾರೆ. ಏನದು? ಮುಂದೆ ಓದಿ.

ಇಂದು (ಸೋಮವಾರ) ಕರೀನಾ ಇನ್ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಫ್ರೆಂಚ್​ ರೋಲ್ (croissant- ಕ್ವಾಸಾಂಗ್) ತಿನ್ನುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯ ವಿಷಯವೆಂದರೆ ಹೊಸ ವರ್ಷದಲ್ಲಿ ಒಳ್ಳೆಯದನ್ನು ಮಾತ್ರ ತಿನ್ನಬೇಕು ಎಂದು ತಮಗೆ ತಾವೇ ರೂಲ್ ಹಾಕಿಕೊಂಡಿದ್ದ ಕರೀನಾ ಮೂರೇ ದಿನಕ್ಕೆ ಅದನ್ನು ಮುರಿದಿದ್ದಾರೆ!

ಈ ಕುರಿತು ಕ್ಯಾಪ್ಶನ್​ನಲ್ಲಿ ಕರೀನಾ, ‘‘ವಾಸ್ತವವಾಗಿ ಹೊಸ ವರ್ಷದ ಮೊದಲ ಸೋಮವಾರ ಒಳ್ಳೆಯ ಆಹಾರ ತಿನ್ನಬೇಕು.. ಬ್ಲಾ ಬ್ಲಾ.. ಇದು ಫ್ರೆಂಚ್ ರೋಲ್! ಹಿಂದೆ ಮುಂದೆ ಯೋಚಿಸದೇ ತಿನ್ನು’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳಿಗೆ ಹೊಸ ಸಂದೇಶವನ್ನೂ ನೀಡಿದ್ದಾರೆ. ‘‘ನಿಮ್ಮ ಹೃದಯದ ಮಾತು ಕೇಳಿ, ಅದನ್ನು ಅನುಸರಿಸಿ. 2022 ಇದು, ದೊಡ್ಡ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳಿ!’’ ಎಂದು ಕರೀನಾ ಹೇಳಿದ್ದಾರೆ. ಕರೀನಾ ಹಂಚಿಕೊಂಡಿರುವ ಪೋಸ್ಟ್​​ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕರೀನಾ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಚಿತ್ರಗಳ ವಿಷಯಕ್ಕೆ ಬಂದರೆ ಕರೀನಾ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಚಿತ್ರ ಏಪ್ರಿಲ್ 14ರಂದು ತೆರೆಗೆ ಬರಲು ಸಜ್ಜಾಗಿದೆ. ಆ ಚಿತ್ರದಲ್ಲಿ ಅಮೀರ್ ಖಾನ್, ನಾಗ ಚೈತನ್ಯ ಸೇರಿದಂತೆ ಖ್ಯಾತ ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ. ಹಾಲಿವುಡ್ ಚಿತ್ರ ’ಫಾರೆಸ್ಟ್​​ ಗಂಪ್​’ನ ಅಧಿಕೃತ ರಿಮೇಕ್ ಇದಾಗಿದೆ. ಈ ಚಿತ್ರದ ಹೊರತಾಗಿ ಕರೀನಾ ಅಧಿಕೃತವಾಗಿ ಯಾವ ಚಿತ್ರಗಳನ್ನೂ ಘೋಷಿಸಿಲ್ಲ.

ಇದನ್ನೂ ಓದಿ:

ವಿಕ್ಕಿ ಕೌಶಲ್ ಬೈಕ್ ನಂಬರ್ ಪ್ಲೇಟ್ ಪ್ರಕರಣ; ಎಲ್ಲಕ್ಕೂ ಕಾರಣ ಒಂದೇ ಒಂದು ಬೋಲ್ಟ್ ಎಂದರೆ ನೀವು ನಂಬಲೇಬೇಕು!

ಕಡಲ ಮಧ್ಯದಲ್ಲಿ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಸ್ ಹೊಸ ವರ್ಷದ ಸಂಭ್ರಮಾಚರಣೆ; ಫೋಟೋ ವೈರಲ್

Published On - 3:54 pm, Mon, 3 January 22

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ