ಕಡಲ ಮಧ್ಯದಲ್ಲಿ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಸ್ ಹೊಸ ವರ್ಷದ ಸಂಭ್ರಮಾಚರಣೆ; ಫೋಟೋ ವೈರಲ್

ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅಮೆರಿಕದಲ್ಲೇ ಸೆಟ್ಲ್ ಆಗಿದ್ದಾರೆ. ಹಿಂದಿ ಚಿತ್ರಗಳಿಗಿಂತಲೂ ಹೆಚ್ಚಾಗಿ ಹಾಲಿವುಡ್ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ಪತಿ ನಿಕ್ ಜೊತೆ ಸೇರಿಕೊಂಡು ಅವರು ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.

1/5
ಕಡಲ ತೀರದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಹೊಸ ವರ್ಷವನ್ನು ಆಚರಿಸಿದ್ದಾರೆ. ಇಬ್ಬರೂ ಆತ್ಮೀಯವಾಗಿ ಕಾಲ ಕಳೆದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2/5
ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಭಿಮಾನಿಗಳು ಭರಪೂರ ಮೆಚ್ಚುಗೆ ಸೂಚಿಸುತ್ತಿದ್ದಾರೆ. ನೆಟ್ಟಿಗರು ಈ ಜೋಡಿಗೆ ಕಮೆಂಟ್ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.

3/5
ಕೆಲವೇ ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಜೋನಸ್ ಎಂಬ ಸರ್ ನೇಮ್ ತೆಗೆದುಹಾಕಿದ್ದರು. ಅದು ದೊಡ್ಡ ಚರ್ಚೆಗೆ ಕಾರಣ ಆಗಿತ್ತು. ನಂತರ ಅದಕ್ಕೆ ಪ್ರಿಯಾಂಕಾ ಸ್ಪಷ್ಟನೆ ನೀಡಿದ್ದರು.

4/5
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ನಡುವೆ ವಯಸ್ಸಿನ ಅಂತರ ಇದೆ. ಪ್ರಿಯಾಂಕಾಗಿಂತ ನಿಕ್ ಜೋನಸ್ ಹತ್ತು ವರ್ಷ ಚಿಕ್ಕವರು. ಆದರೂ ಇಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ಆ ಗುಣ ಎಲ್ಲರಿಗೂ ಮಾದರಿ ಆಗಿದೆ.

5/5
ಪ್ರಿಯಾಂಕಾ ಅವರು ಮತ್ತೆ ಬಾಲಿವುಡ್ ಸಿನಿಮಾಗಳಲ್ಲಿ ಸಕ್ರಿಯರಾಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ಸದ್ಯಕ್ಕೆ ಅವರು ಯಾವುದೇ ಹಿಂದಿ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಹಾಲಿವುಡ್‌ ಪ್ರಾಜೆಕ್ಟ್‌ಗಳ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ.

Click on your DTH Provider to Add TV9 Kannada