ಎಆರ್​ ರೆಹಮಾನ್​ ಪುತ್ರಿ ನಿಶ್ಚಿತಾರ್ಥ; ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಕೈ ಹಿಡಿಯಲಿರುವ ಖತೀಜಾ

AR Rahman Daughter Engagement: ಎ.ಆರ್​. ರೆಹಮಾನ್​ ಅವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳ ಪೈಕಿ ಹಿರಿಯ ಪುತ್ರಿ ಖತೀಜಾ ರೆಹಮಾನ್​ ಅವರ​ ನಿಶ್ಚಿತಾರ್ಥ ನಡೆದಿದೆ.

ಎಆರ್​ ರೆಹಮಾನ್​ ಪುತ್ರಿ ನಿಶ್ಚಿತಾರ್ಥ; ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಕೈ ಹಿಡಿಯಲಿರುವ ಖತೀಜಾ
ರಿಯಾಸ್ದೀನ್​ ಶೇಖ್​ ಮೊಹಮ್ಮದ್​ - ಖತೀಜಾ ರೆಹಮಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 03, 2022 | 9:02 AM

ಹೊಸ ವರ್ಷದಲ್ಲಿ ಚಿತ್ರರಂಗದಿಂದ ಮದುವೆ ಮತ್ತು ನಿಶ್ಚಿತಾರ್ಥದ ಸುದ್ದಿಗಳು ಬ್ಯಾಕ್​ ಟು ಬ್ಯಾಕ್​ ಕೇಳಿಬರುತ್ತಿವೆ. ಕಿರುತೆರೆಯ ಖ್ಯಾತ ನಟ ಮೋಹಿತ್​ ರೈನಾ ಅವರು ಗೆಳತಿ ಅದಿತಿ ಜೊತೆ ಸಪ್ತಪದಿ ಸುಳಿದ ಸುದ್ದಿ ಇತ್ತೀಚೆಗಷ್ಟೇ ಬಹಿರಂಗ ಆಗಿತ್ತು. ಈಗ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ (AR Rahman) ಅವರ ಮಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರೆಹಮಾನ್​ ಪುತ್ರಿ ಖತೀಜಾ ರೆಹಮಾನ್​ (Khatija Rahman) ಅವರನ್ನು ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರು ಮದುವೆ ಆಗಲಿದ್ದಾರೆ. ಎಂಗೇಜ್​ಮೆಂಟ್​ (Engagement) ಬಳಿಕ ಈ ವಿಷಯವನ್ನು ಸೋಶಿಯಲ್​ ಮೀಡಿಯಾ ಮೂಲಕ ಖತೀಜಾ ಅವರು ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭ ಕೋರಿದ್ದಾರೆ.

ಎಆರ್​ ರೆಹಮಾನ್​ ಅವರಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣುಮಕ್ಕಳ ಪೈಕಿ ಹಿರಿಯ ಪುತ್ರಿ ಖತೀಜಾ ರೆಹಮಾನ್​. ಡಿ.29ರಂದು ಖತೀಜಾ ರೆಹಮಾನ್​ ಮತ್ತು ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ನಿಶ್ಚಿತಾರ್ಥ ನಡೆದಿದೆ. ‘ದೇವರ ಆಶೀರ್ವಾದದಿಂದ ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಜೊತೆ ನನ್ನ ನಿಶ್ಚಿತಾರ್ಥ ನೆರವೇರಿತು ಅಂತ ತಿಳಿಸಲು ಖುಷಿ ಆಗುತ್ತಿದೆ. ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರು ಓರ್ವ ಉದ್ಯಮಿ ಮತ್ತು ಆಡಿಯೋ ಇಂಜಿನಿಯರ್​ ಆಗಿದ್ದಾರೆ. ನನ್ನ ಹುಟ್ಟುಹಬ್ಬದ ದಿನವೇ (ಡಿ.29) ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಿತು’ ಎಂದು ಖತೀಜಾ ರೆಹಮಾನ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಸಮೇತ ಪೋಸ್ಟ್​ ಮಾಡಿದ್ದಾರೆ.

ಎಂಗೇಜ್​ಮೆಂಟ್​ ಸಂದರ್ಭದಲ್ಲಿ ತಾವು ಧರಿಸಿದ್ದ ಡ್ರೆಸ್​ನಲ್ಲಿಯೇ ಖತೀಜಾ ಪೋಟೋ ಪೋಸ್ಟ್​ ಮಾಡಿದ್ದಾರೆ. ಆದರೆ ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರ ಫೋಟೋ ಬೇರೆ ಸಂದರ್ಭದ್ದಾಗಿದೆ. ಸಾವಿರಾರು ಜನರು ಈ ಫೋಟೋಗೆ ಕಮೆಂಟ್​ ಮಾಡಿದ್ದಾರೆ. ಗಾಯಕಿಯರಾದ ನೀತಿ ಮೋಹನ್​, ನಿಸಾ ಶೆಟ್ಟಿ, ಹರ್ಷದೀಪ್​ ಕೌರ್​, ಶ್ವೇತಾ ಪಂಡಿತ್​, ಗಾಯಕ ಶ್ರೀಕಾಂತ್​ ಹರಿಹರನ್​​ ಮುಂತಾದವರು ಅಭಿನಂದನೆ ತಿಳಿಸಿದ್ದಾರೆ. ಎ.ಆರ್​. ರೆಹಮಾನ್ ಅವರ​ ಅಭಿಮಾನಿಗಳು ಕೂಡ ಖತೀಯಾ ಮತ್ತು ರಿಯಾಸ್ದೀನ್​ ಶೇಖ್​ ಮೊಹಮ್ಮದ್ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ತಂದೆಯ ರೀತಿಯೇ ಖತೀಜಾ ಕೂಡ ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ. ಗಾಯಕಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾದ ‘ಮಿಮಿ’ ಸಿನಿಮಾದಲ್ಲಿ ಅವರೊಂದು ಗೀತೆ ಹಾಡಿದ್ದರು. ತಮಿಳು ಸಿನಿಮಾಗಳ ಅನೇಕ ಗೀತೆಗಳಿಗೆ ಅವರು ಧ್ವನಿ ನೀಡಿದ್ದಾರೆ.

ಇದನ್ನೂ ಓದಿ:

ಮನೆಯಲ್ಲಿದ್ದ ಆಸ್ಕರ್​ ಟ್ರೋಫಿ ಕಳೆದುಹಾಕಿದ್ದ ಎ.ಆರ್​. ರೆಹಮಾನ್​; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ

ಗುಟ್ಟಾಗಿ ಮದುವೆ ಆದ ಸೀರಿಯಲ್​ ನಟ; ಫೋಟೋ ವೈರಲ್​ ಆದ ಬಳಿಕ ಅಚ್ಚರಿಪಟ್ಟ ಫ್ಯಾನ್ಸ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ