AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ಶಾರುಖ್​ ಫ್ಯಾನ್​ ಅಂತ ಹೇಳಿಕೊಂಡ್ರೆ ಸಿಗುತ್ತೆ ವಿಶೇಷ ಗೌರವ; ಸಾಕ್ಷಿ ಸಮೇತ ವಿವರಿಸಿದ ಪ್ರೊಫೆಸರ್​

Shah Rukh Khan: ಪ್ರೊಫೆಸರ್​ ಅಶ್ವಿನಿ ದೇಶಪಾಂಡೆ ಮಾಡಿದ ಟ್ವೀಟ್​ ಕಂಡು ಶಾರುಖ್​ ಖಾನ್​ ಅಭಿಮಾನಿಗಳು ಖುಷಿ ಆಗಿದ್ದಾರೆ. ವಿದೇಶದಲ್ಲಿ ತಮಗಾದ ಅನುಭವಗಳನ್ನೆಲ್ಲ ಶಾರುಖ್​ ಫ್ಯಾನ್ಸ್​ ಹಂಚಿಕೊಳ್ಳುತ್ತಿದ್ದಾರೆ.

ವಿದೇಶದಲ್ಲಿ ಶಾರುಖ್​ ಫ್ಯಾನ್​ ಅಂತ ಹೇಳಿಕೊಂಡ್ರೆ ಸಿಗುತ್ತೆ ವಿಶೇಷ ಗೌರವ; ಸಾಕ್ಷಿ ಸಮೇತ ವಿವರಿಸಿದ ಪ್ರೊಫೆಸರ್​
ಆರ್ಯನ್​ ಖಾನ್​, ಶಾರುಖ್​ ಖಾನ್​
TV9 Web
| Edited By: |

Updated on: Jan 03, 2022 | 7:10 AM

Share

ಭಾರತದ ಸಿನಿಮಾಗಳು ವಿಶ್ವಾದ್ಯಂತ ಮನರಂಜನೆ ನೀಡುತ್ತವೆ. ಅದರಲ್ಲೂ ಬಾಲಿವುಡ್​ (Bollywood) ಚಿತ್ರಗಳಿಗೆ ಮಾರುಕಟ್ಟೆ ದೊಡ್ಡದಿದೆ. ಅನೇಕ ದೇಶಗಳಲ್ಲಿ ಹಿಂದಿ ಸಿನಿಮಾಗಳನ್ನು ಜನರು ನೋಡುತ್ತಾರೆ. ವಿಶ್ವಾದ್ಯಂತ ರಿಲೀಸ್​ ಆಗುವ ಮೂಲಕ ಬಾಲಿವುಡ್​ ಚಿತ್ರಗಳು ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡಿವೆ. ಹಾಗಾಗಿ ಬಾಲಿವುಡ್​ ನಟರಿಗೆ ಪ್ರಪಂಚದೆಲ್ಲೆಡೆ ಫ್ಯಾನ್ಸ್​ ಇದ್ದಾರೆ. ಅದರಲ್ಲೂ ಶಾರುಖ್​ ಖಾನ್​ (Shah Rukh Khan) ಅವರನ್ನು ಅನೇಕ ವಿದೇಶಿಗರು ಇಷ್ಟಪಡುತ್ತಾರೆ. ಅದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ಈ ಕುರಿತು ಪ್ರೊಫೆಸರ್​ ಒಬ್ಬರು ಟ್ವೀಟ್​ ಮಾಡಿದ್ದಾರೆ. ಈಜಿಪ್ಟ್​ನಲ್ಲಿ (Egypt) ತಮಗೆ ಆದ ಅನುಭವವನ್ನು ಅವರು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಅನೇಕರು ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಕೂಡ ಮೆಲುಕು ಹಾಕಿದ್ದಾರೆ.

ಹರಿಯಾಣದ ಅಶೋಕ ಯೂನಿವರ್ಸಿಟಿಯ ಅರ್ಥಶಾಸ್ತ್ರದ ಪ್ರೊಫೆಸರ್​ ಅಶ್ವಿನಿ ದೇಶಪಾಂಡೆ ಅವರು ಇತ್ತೀಚಗೆ ಈಜಿಪ್ಟ್​ಗೆ ತೆರಳಿದ್ದರು. ಆಗ ಅವರಿಗೆ ಒಂದು ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಆಗ ಆ ವಿದೇಶಿ ನೆಲದಲ್ಲಿ ಅವರ ಸಹಾಯಕ್ಕೆ ಬಂದಿದ್ದು ಒಬ್ಬ ಶಾರುಖ್​ ಅಭಿಮಾನಿ! ಅದನ್ನು ಅಶ್ವಿನಿ ದೇಶಪಾಂಡೆ ಅವರು ಎಳೆಎಳೆಯಾಗಿ ವಿವರಿಸಿದ್ದಾರೆ.

ಈಜಿಪ್ಟ್​ನಲ್ಲಿ ಒಬ್ಬ ಟ್ರಾವೆಲ್​ ಏಜೆಂಟ್​ಗೆ ಅಶ್ವಿನಿ ದೇಶಪಾಂಡೆ ಹಣ ವರ್ಗಾವಣೆ ಮಾಡಬೇಕಿತ್ತು. ಆದರೆ ಅದಕ್ಕೆ ಕೆಲವು ಸಮಸ್ಯೆಗಳು ಎದುರಾಗಿದ್ದವು. ಆದರೆ ಆ ಟ್ರಾವೆಲ್​ ಏಜೆಂಟ್​ ಕೂಡ ಶಾರುಖ್​ ಖಾನ್​ ಅಭಿಮಾನಿ ಆಗಿದ್ದರಿಂದ ಆತ ಸಹಾಯ ಮಾಡಿದ. ‘ನೀವು ಶಾರುಖ್​ ಖಾನ್​ ಅವರ ದೇಶದವರು. ಹಾಗಾಗಿ ನಿಮ್ಮನ್ನು ನಾನು ನಂಬುತ್ತೇನೆ. ಮೊದಲು ನಿಮಗೆ ಬುಕಿಂಗ್​ ಮಾಡುತ್ತೇನೆ. ನಂತರ ಯಾವಾಗ ಬೇಕಿದ್ದರೂ ನೀವು ಹಣ ನೀಡಿ. ಶಾರುಖ್​ ಖಾನ್​ ಮೇಲಿನ ಅಭಿಮಾನಕ್ಕಲ್ಲದೇ ಬೇರೆ ಯಾವ ಕಾರಣಕ್ಕೂ ನಾನು ಈ ಸಹಾಯ ಮಾಡುತ್ತಿರಲಿಲ್ಲ’ ಅಂತ ಆತ ಹೇಳಿದ ಎಂದು ಅಶ್ವಿನಿ ದೇಶಪಾಂಡೆ ಟ್ವೀಟ್​ ಮಾಡಿದ್ದಾರೆ.

ಅಶ್ವಿನಿ ಅವರ ಟ್ವೀಟ್​ ಕಂಡು ಶಾರುಖ್​ ಅಭಿಮಾನಿಗಳು ಖುಷಿ ಆಗಿದ್ದಾರೆ. ತಾವೂ ಸಹ ವಿದೇಶಕ್ಕೆ ಹೋದಾಗ ಇದೇ ರೀತಿಯ ಘಟನೆಗಳು ನಡೆದಿದ್ದವು ಎಂಬುದನ್ನು ಅವರೆಲ್ಲ ಕಮೆಂಟ್​ಗಳ ಮೂಲಕ ತಿಳಿಸಿದ್ದಾರೆ. ಒಟ್ಟಿನಲ್ಲಿ ವಿದೇಶದಲ್ಲಿ ಶಾರುಖ್​ ಹವಾ ಹೇಗಿದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.

ಸದ್ಯ ಶಾರುಖ್​ ಖಾನ್​ ಅವರು ‘ಪಠಾಣ್​’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿಕೊಂಡ ಬಳಿಕ ಶಾರುಖ್​ ಕೊಂಚ ಮಂಕಾಗಿದ್ದರು. ಇತ್ತೀಚೆಗೆ ಅವರು ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ. ಶೂಟಿಂಗ್​ ಸೆಟ್​ಗೆ ಬಂದ ಅವರ ಫೋಟೋಗಳು ಸಖತ್​ ವೈರಲ್​ ಆಗಿದ್ದವು. ಒಮಿಕ್ರಾನ್​ ಕಾರಣದಿಂದ ‘ಪಠಾಣ್​’ ಚಿತ್ರದ ಕೆಲಸಗಳು ಮತ್ತೆ ವಿಳಂಬ ಆಗುವ ಸಾಧ್ಯತೆ ಇದೆ. ಈ ವಿಷಯ ಕೇಳಿ ಶಾರುಖ್​ ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಪುತ್ರ ಆರ್ಯನ್​ ವಿವಾದದ ಬಳಿಕ ಮೊದಲ ಬಾರಿಗೆ ಕೆಲಸಕ್ಕೆ ಮರಳಿದ ಶಾರುಖ್​: ಫೋಟೋ ವೈರಲ್​

 ಖ್ಯಾತ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ಕೆಲಸ ಮಾಡಲಿದ್ದಾರೆ ಆರ್ಯನ್​ ಖಾನ್​; ಶಾರುಖ್​ ಮಗನ ಬಗ್ಗೆ ಹೊಸ ಅಪ್​ಡೇಟ್​

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ