AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರೆದುರು ಪ್ರಪೋಸ್​ ಮಾಡ್ತಿದ್ದೀನಿ, ಮದುವೆ ಆಗ್ತೀರಾ?’; ನಟಿ ಅಮೀಶಾ ಪಟೇಲ್​ ಬೆನ್ನು ಬಿದ್ದ ಉದ್ಯಮಿ

Ameesha Patel: ಫೈಸಲ್​ ಪಟೇಲ್​ ಮತ್ತು ಅಮೀಶಾ ಪಟೇಲ್​ ಅವರು ಈಗಾಗಲೇ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದುಂಟು. ಆದರೆ ಒಮ್ಮೆಯೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ.

‘ಎಲ್ಲರೆದುರು ಪ್ರಪೋಸ್​ ಮಾಡ್ತಿದ್ದೀನಿ, ಮದುವೆ ಆಗ್ತೀರಾ?’; ನಟಿ ಅಮೀಶಾ ಪಟೇಲ್​ ಬೆನ್ನು ಬಿದ್ದ ಉದ್ಯಮಿ
ಅಮೀಶಾ ಪಟೇಲ್​, ಫೈಸಲ್​ ಪಟೇಲ್​
TV9 Web
| Edited By: |

Updated on: Jan 02, 2022 | 3:48 PM

Share

ಸೆಲೆಬ್ರಿಟಿಗಳ ದುನಿಯಾದಲ್ಲಿ ಲವ್​, ಡೇಟಿಂಗ್​ ಎಂಬುದೆಲ್ಲ ಅತಿ ಸಹಜ. ಆದರೆ ಅನೇಕರು ತಮ್ಮ ವೈಯಕ್ತಿಕ ವಿಚಾರಗಳನ್ನು ಮುಚ್ಚಿಡುತ್ತಾರೆ. ನಟಿ ಅಮೀಶಾ ಪಟೇಲ್​ (Ameesha Patel) ಬದುಕಿನಲ್ಲಿಯೂ ಹಾಗೆಯೇ ಆಗುತ್ತಿದೆ. ಉದ್ಯಮಿ ಫೈಸಲ್​ ಪಟೇಲ್​ (Faisal Patel) ಜೊತೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಆ ವಿಚಾರವನ್ನು ಅವರು ಎಂದಿಗೂ ಒಪ್ಪಿಕೊಂಡಿಲ್ಲ. ಅದೇನೇ ಇರಲಿ, ಇತ್ತೀಚೆಗೆ ಒಂದು ವಿಲಕ್ಷಣ ಘಟನೆ ನಡೆದಿದೆ. ಅಮೀಶಾ ಪಟೇಲ್​ ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ಇಷ್ಟು ದಿನ ಗುಟ್ಟಾಗಿ ಇಟ್ಟಿದ್ದ ಅವರ ಪ್ರೇಮ್​ ಕಹಾನಿ ಈಗ ಜಗಜ್ಜಾಹೀರಾಗಿದೆ. ಬಹಿರಂಗವಾಗಿಯೇ ಫೈಸಲ್​ ಪಟೇಲ್​ ಮದುವೆ ಪ್ರಮೋಸ್​ ಮಾಡಿದ್ದಾರೆ. ಆ ವಿಚಾರ ಈಗ ಸಖತ್​ ವೈರಲ್​ ಆಗಿದೆ.

ಫೈಸಲ್​ ಪಟೇಲ್​ ಮತ್ತು ಅಮೀಶಾ ಪಟೇಲ್​ ಅವರು ಈಗಾಗಲೇ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದುಂಟು. ಇತ್ತೀಚೆಗೆ ಫೈಸಲ್​ ಪಟೇಲ್​ ಅವರ ಬರ್ತ್​ಡೇ ಪಾರ್ಟಿಯಲ್ಲಿ ಅಮೀಶಾ ಕೂಡ ಭಾಗಿ ಆಗಿದ್ದರು. ಬಳಿಕ ಆ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದಕ್ಕೆ ಊಹಿಸಲೂ ಆಗದಂತಹ ಪ್ರತಿಕ್ರಿಯೆ ಬರುತ್ತದೆ ಎಂದು ಅಮೀಶಾ ನಿರೀಕ್ಷಿಸಿರಲಿಲ್ಲ.

‘ಹ್ಯಾಪಿ ಬರ್ತ್​ಡೇ ಮೈ ಡಾರ್ಲಿಂಗ್​ ಫೈಸಲ್​ ಪಟೇಲ್​. ಲವ್​ ಯೂ. ಅದ್ಭುತವಾದ ವರ್ಷ ನಿಮ್ಮದಾಗಲಿ’ ಎಂದು ಅಮೀಶಾ ಪಟೇಲ್​ ಪೋಸ್ಟ್​ ಮಾಡಿದ್ದರು. ಅದಕ್ಕೆ ಕಮೆಂಟ್​ ಮಾಡಿರುವ ಫೈಸಲ್​ ಅವರು, ‘ಧನ್ಯವಾದಗಳು ಅಮೀಶಾ.. ನಾನು ಸಾರ್ವಜನಿಕವಾಗಿಯೇ ಪ್ರಪೋಸ್​ ಮಾಡುತ್ತಿದ್ದೇನೆ. ನನ್ನನ್ನು ಮದುವೆ ಆಗ್ತೀರಾ’ ಎಂದು ಕೇಳಿದ್ದಾರೆ. ಈ ಕಮೆಂಟ್​ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.

ಫೈಸಲ್​ ಪಟೇಲ್​ ಈ ರೀತಿ ಕಮೆಂಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಅದು ವೈರಲ್​ ಆಗಿದೆ. ಅಮೀಶಾ ಪಟೇಲ್​ ಅವರು ಉತ್ತರ ನೀಡುವುದಕ್ಕೂ ಮುನ್ನವೇ ಫೈಸಲ್​ ಆ ಕಮೆಂಟ್​ ಡಿಲೀಟ್​ ಮಾಡಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದಕ್ಕೆ ಈ ಟ್ವೀಟ್​ ಮತ್ತು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಕಳೆದ 2 ದಶಕಗಳಿಂದಲೂ ಅಮೀಶಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಈಗಲೂ ಅವರ ಕೈಯಲ್ಲಿ ಅನೇಕ ಆಫರ್​ಗಳಿವೆ. ಸದ್ಯ ‘ಗದರ್​ 2’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಫೈಸಲ್​ ಪಟೇಲ್​ ನೇರವಾಗಿ ಪ್ರಪೋಸ್​ ಮಾಡಿರುವ ವಿಷಯದ ಬಗ್ಗೆ ಅಮೀಶಾ ಅವರು ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಶೀಘ್ರದಲ್ಲೇ ಅವರು ಅಧಿಕೃತವಾಗಿ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:

ಗುಟ್ಟಾಗಿ ಮದುವೆ ಆದ ಸೀರಿಯಲ್​ ನಟ; ಫೋಟೋ ವೈರಲ್​ ಆದ ಬಳಿಕ ಅಚ್ಚರಿಪಟ್ಟ ಫ್ಯಾನ್ಸ್​

ಬಾಯ್​ಫ್ರೆಂಡ್​ ಕಳೆದುಕೊಂಡಿದ್ದ ಸಂಜಯ್​ ದತ್​ ಪುತ್ರಿಗೆ ಅಭಿಮಾನಿಯ ಪ್ರಪೋಸ್​; ಒಪ್ಪಿಕೊಂಡ್ರಾ ತ್ರಿಶಾಲಾ?

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ