‘ಈ ಪರಿಸ್ಥಿತಿ ಶಾಶ್ವತವಾಗಿ ಮುಂದುವರೆಯಬಾರದು’; ಕೊರೊನಾ ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸಿದ ರಾಕುಲ್

Rakul Preet Singh: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ನಟಿ ರಾಕುಲ್ ಪ್ರೀತಿ ಸಿಂಗ್ ಕಾಳಜಿಯ ಮಾತುಗಳನ್ನಾಡಿದ್ದಾರೆ. ಅಲ್ಲದೇ ಎಲ್ಲರೂ ಒಗ್ಗಟ್ಟಾಗಿ ವೈರಸ್ ಸೋಲಿಸಬೇಕು ಎಂದಿದ್ದಾರೆ.

‘ಈ ಪರಿಸ್ಥಿತಿ ಶಾಶ್ವತವಾಗಿ ಮುಂದುವರೆಯಬಾರದು’; ಕೊರೊನಾ ವಿರುದ್ಧ ಹೋರಾಡಲು ಜನರನ್ನು ಪ್ರೇರೇಪಿಸಿದ ರಾಕುಲ್
ರಾಕುಲ್​ ಪ್ರೀತ್​ ಸಿಂಗ್​
Follow us
TV9 Web
| Updated By: shivaprasad.hs

Updated on: Jan 04, 2022 | 9:13 AM

ಬಹುಭಾಷಾ ನಟಿ ರಾಕುಲ್ ಪ್ರೀತಿ ಸಿಂಗ್ (Rakul Preet Singh) ಕೈಯಲ್ಲಿ ಹಲವು ಸಿನಿಮಾಗಳಿವೆ. ಅವುಗಳಲ್ಲಿ ಬಹುತೇಕ ಚಿತ್ರಗಳು ಶೂಟಿಂಗ್ ಮುಗಿಸಿದ್ದು, ತೆರೆಗೆ ಬರಲು ಸಿದ್ಧವಾಗಿವೆ. ಅವೆಲ್ಲವೂ 2022ರಲ್ಲಿ ತೆರೆಕಾಣಲಿದೆ ಎಂಬ ನಿರೀಕ್ಷೆ ನಟಿಯಲ್ಲಿದೆ. ‘ಅಟ್ಯಾಕ್’, ‘ರನ್​ವೇ 34’, ‘ಡಾಕ್ಟರ್ ಜಿ’ ಮತ್ತು ‘ಥ್ಯಾಂಕ್​ಗಾಡ್’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ರಿಲೀಸ್ ದಿನಾಂಕಗಳನ್ನೂ ಘೋಷಿಸಿವೆ. ವಿಶೇಷವೆಂದರೆ ಇಷ್ಟೂ ಚಿತ್ರಗಳು ಚಿತ್ರಮಂದಿರಗಳಲ್ಲೇ ತೆರೆಕಾಣಲಿವೆ. ಈ ಚಿತ್ರಗಳು ಬಿಡುಗಡೆಯಾಗುವುದನ್ನೇ ತಾನು ಕಾಯುತ್ತಿದ್ದೇನೆ, ಈ ವರ್ಷ ಬಹಳ ವಿಶೇಷವಾದುದು. ಸಿನಿ ಪ್ರೇಮಿಗಳು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಲು ಕಾತರಳಾಗಿದ್ದೇನೆ ಎಂದು ನಟಿ ಹೇಳಿಕೊಂಡಿದ್ದರು. ಆದರೆ ಇದೀಗ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಬಹಳಷ್ಟು ಚಿತ್ರಗಳ ಬಿಡುಗಡೆ ಮುಂದೂಡಲಾಗುತ್ತಿದೆ ಈ ಹಿನ್ನೆಲೆಯಲ್ಲಿ ನಟಿ ಭರವಸೆಯ ಮಾತುಗಳನ್ನು ಆಡಿದ್ದಾರೆ.

ರಾಕುಲ್ ಪ್ರೀತ್ ಸಿಂಗ್ ಮಾತನಾಡುತ್ತಾ ಚಿತ್ರಗಳು ಬಿಡುಗಡೆಯಾಗಬೇಕು. ಬಹಳಷ್ಟು ಜನರ ಜೀವನ ಇದನ್ನೇ ಅವಲಂಬಿಸಿವೆ ಎಂದು ಕಾಳಜಿಯ ಮಾತುಗಳನ್ನಾಡಿದ್ದಾರೆ. ‘‘ಬಹಳಷ್ಟು ಜನರು ಚಿತ್ರಗಳು ಹೊರ ಬರುವುದನ್ನೇ ಕಾಯುತ್ತಿದ್ದಾರೆ. ಮತ್ತು ಅದಕ್ಕಾಗಿ ಬಹಳ ಕಷ್ಟಪಡುತ್ತಿದ್ದಾರೆ. ಕಲಾವಿದರು, ನಿರ್ದೇಶಕರು, ನಿರ್ಮಾಪಕರ ಹೊರತಾಗಿಯೂ ಚಿತ್ರಮ=ರಂಗ ನಂಬಿ ಬದುಕುವ ಬಹುದೊಡ್ಡ ಜನರಿದ್ದಾರೆ. ಅವರೆಲ್ಲರ ಜೀವನ ಸಂಕಷ್ಟದಲ್ಲಿದೆ’’ ಎಂದಿದ್ದಾರೆ ನಟಿ.

ಕೊರೊನಾ ಪ್ರಕರಣಗಳು ಮತ್ತೆ ಏರುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ನಟಿ, ಒಮಿಕ್ರಾನ್ ಪ್ರಕರಣಗಳು ಏರುತ್ತಿರುವುದು ಕಟು ವಾಸ್ತವ ಎಂದಿದ್ದಾರೆ. ‘‘ಈಗ ಎಲ್ಲವೂ ಅನಿಶ್ಚಿತವಾಗಿದೆ. ಎಲ್ಲವೂ ಸರಿಯಾಗಲಿ ಎಂದು ನಾವು ಆಶಿಸಬಹುದಷ್ಟೇ. ಎಲ್ಲರೂ ಲಸಿಕೆ ಪಡೆಯಿರಿ. ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ. ಕೊರೊನಾ ಸೋಂಕು ಶಾಶ್ವತವಾಗಿ ಇರಬಾರದು. ನಾವು ವೈರಸ್ ವಿರುದ್ಧ ಹೋರಾಡಬೇಕು’’ ಎಂದಿದ್ದಾರೆ ರಾಕುಲ್.

2021ರಲ್ಲಿ ಕೊರೊನಾ ನಡುವೆಯೂ ಚಿತ್ರಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಮುಂದೆಯೂ ಹೀಗೇ ಆಗಬಹುದು ಎನ್ನುವ ಭರವಸೆ ಇದೆ ಎಂದಿದ್ದಾರೆ ನಟಿ. ಭವಿಷ್ಯದಲ್ಲಿ ಎಲ್ಲವೂ ಮೊದಲಿನಂತೆ ಆಗಲಿದೆ ಎಂದು ರಾಕುಲ್ ಪ್ರೀತ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Radhe Shyam: ಓಟಿಟಿ ರಿಲೀಸ್ ಮಾಡುವಂತೆ ‘ರಾಧೆ ಶ್ಯಾಮ್’ಗೆ ಬರೋಬ್ಬರಿ 350 ಕೋಟಿ ಆಫರ್; ಚಿತ್ರತಂಡದ ಪ್ಲಾನ್ ಏನು?

Puneeth Rajkumar: ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ ‘ರಾಜಕುಮಾರ’; ಚಿತ್ರಕ್ಕೆ ಲಭ್ಯವಾಯ್ತು ವಿಶೇಷ ಗರಿಮೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ