ಬಾಹ್ಯಾಕಾಶದಲ್ಲಿ ಈ ವರ್ಷ ಬಿಡುವಿಲ್ಲದ ಚಟುವಟಿಕೆಗಳು ನಡೆಯಲಿವೆ, ಡಿಸೆಂಬರ್ ನಲ್ಲಿ ಇಸ್ರೋದ ಗಗನ್ಯಾನ್
ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಈ ವರ್ಷ ಮೊಟ್ಟ ಮೊದಲನೆಯದಾಗಿ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಯಾನವನ್ನು ನಡೆಸಲಿದೆ. ನಾಸಾದಿಂದ ಪ್ರಾಯೋಜಿಸಲ್ಪಡುತ್ತಿರುವ ನೋವಾ ಸಿ ಲ್ಯಾಂಡರ್ ಪ್ರಯೋಗ 2022 ರಲ್ಲಿ ನಡೆಯಲಿದೆ.
ಬಾಹ್ಯಾಕಾಶ ವಿಜ್ಞಾನ, ಗಗನ ಯಾತ್ರೆ, ಮಂಗಳಯಾನ್, ಚಂದ್ರಯಾನ್ ಮೊದಲಾದವುಗಳ ಬಗ್ಗೆ ನಿಮ್ಮಲ್ಲಿ ಆಸಕ್ತಿಯಿದ್ದರೆ 2022 ನಿಮಗೆ ಖಂಡಿತವಾಗಿಯೂ ರೋಮಾಂಚಕಾರಿಯಾಗಿ ಪರಿಣಮಿಸಲಿದೆ. ಯಾಕೆ ಗೊತ್ತಾ? ಬಾಹ್ಯಾಕಾಶ್ಯಕ್ಕೆ ಸಂಬಂಧಿಸಿದಂತೆ ಹಲವಾರು ಮಿಶನ್ಗಳು ಪ್ರಯೋಗಗಳಳು, ರಾಕೆಟ್ ಲಾಂಚ್ ಈ ವರ್ಷ ನಡೆಯಲಿವೆ. ವಿಶ್ವದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಗಳೆನಿಸಿಕೊಂಡಿರುವ ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಸೆಷನ್ (ಇಸ್ರೋ) ಮತ್ತು ದಿ ನ್ಯಾಶನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಸೇರಿದಂತೆ ಬೇರೆ ಬೇರೆ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಈ ವರ್ಷ ಹಲವಾರು ಮಿಶನ್ಗಳನ್ನು ಕೈಗೆತ್ತಿಕೊಳ್ಳಲಿವೆ.
ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಈ ವರ್ಷ ಮೊಟ್ಟ ಮೊದಲನೆಯದಾಗಿ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಯಾನವನ್ನು ನಡೆಸಲಿದೆ. ನಾಸಾದಿಂದ ಪ್ರಾಯೋಜಿಸಲ್ಪಡುತ್ತಿರುವ ನೋವಾ ಸಿ ಲ್ಯಾಂಡರ್ ಪ್ರಯೋಗ 2022 ರಲ್ಲಿ ನಡೆಯಲಿದೆ. ರಾಕೆಟ್ ಸೈನ್ಸ್ ನಲ್ಲಿ ರಷ್ಯಾ ಯಾವುದೇ ದೇಶಕ್ಕಿಂತ ಹಿಂದಿಲ್ಲ. ಆ ದೇಶದ ಬಾಹ್ಯಾಕಾಶ ಸಂಸ್ಥೆಯಿಂದ ಮೊದಲ ವುಲ್ಕನ್ ರಾಕೆಟ್ ಲಾಂಚ್ ನಡೆಯಲಿದೆ.
ಹಾಗೆಯೇ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಪ್ರಯತ್ನವನ್ನೂ ರಷ್ಯಾದ ಬಾಹ್ಯಾಕಾಶ ವಿಜ್ಞಾನಿಗಳು 2022ರಲ್ಲಿ ಮಾಡಲಿದ್ದಾರೆ.
ನಾಸಾದ ಮತ್ತೊಂದು ಮಹತ್ವಾಕಾಂಕ್ಷೆಯ ಎಸ್ ಎಲ್ ಎಸ್ ಮೆಗಾರಾಕೆಟ್ ಫಸ್ಟ್ ಮೂನ್ ಮಿಶನ್ ಲಾಂಚ್ ಮಾಡಲಿದೆ. ಹಾಗೆಯೇ ಇದೇ ಸಂಸ್ಥೆಯ ಸಹಯೋಗದಲ್ಲಿ ಸ್ಟಾರ್ ಲೈನರ್ ಮೊದಲ ಬಾಹ್ಯಾಕಾಶಯಾನಿಗಳ ಪ್ರಯೋಗ ಈ ವರ್ಷ ನಡೆಯಲಿದೆ.
ಯುರೋಪಿಯನ್ ಸ್ಪೇಸ್ ಏಜೆನ್ಸಿ ಗುರುಗ್ರಹದ ಕಕ್ಷೆಯನ್ನು ತಲುಪುವ ಪ್ರಯತ್ನವನ್ನು 2022 ರಲ್ಲಿ ಮಾಡಲಿದೆ. ಹಾಗೆಯೇ ಯುರೋಪಿಯನ್ ಸ್ಪೇಸ್
ಯೂನಿಯನ್ ಈ ವರ್ಷವೇ ಎಕ್ಸೋ ಮಾರ್ಸ್ ಮಿಶನ್ ನಡೆಸುವುದು ನಿಗದಿಯಾಯಾಗಿದೆ.
ಭಾರತದ ವಿಷಯಕ್ಕೆ ಬರುವುದಾದರೆ, ಮೊದಲ ಬಾಹ್ಯಾಕಾಶಯಾನಿಗಳ ಪ್ರಯೋಗ ಗಗನ್ ಯಾನ್ ಈ ವರ್ಷದ ಅಂತಿಮ ಭಾಗದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.