AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕುಟುಂಬಕ್ಕೆ ಮುಜುಗರ ತರುವ ಪಾತ್ರ ಮಾಡಲ್ಲ’; ಸಮಂತಾ ವಿಚ್ಛೇದನಕ್ಕೆ ಪರೋಕ್ಷವಾಗಿ ಕಾರಣ ನೀಡಿದ ನಾಗ ಚೈತನ್ಯ

ಸಮಂತಾ ಬೋಲ್ಡ್​ ಪಾತ್ರ ಮಾಡಿದ್ದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಆ ಕಾರಣದಿಂದಲೇ ನಾಗ ಚೈತನ್ಯ ಕುಟುಂಬದಲ್ಲಿ ಬಿರುಕು ಮೂಡಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

‘ಕುಟುಂಬಕ್ಕೆ ಮುಜುಗರ ತರುವ ಪಾತ್ರ ಮಾಡಲ್ಲ’; ಸಮಂತಾ ವಿಚ್ಛೇದನಕ್ಕೆ ಪರೋಕ್ಷವಾಗಿ ಕಾರಣ ನೀಡಿದ ನಾಗ ಚೈತನ್ಯ
ಸಮಂತಾ, ನಾಗ ಚೈತನ್ಯ
TV9 Web
| Updated By: ಮದನ್​ ಕುಮಾರ್​|

Updated on: Dec 16, 2021 | 1:32 PM

Share

ಸಮಂತಾ (Samantha) ಮತ್ತು ನಾಗ ಚೈತನ್ಯ (Naga Chaitanya) ಅವರ ವಿಚ್ಛೇದನದ ಬಗ್ಗೆ ಈಗಲೂ ಚರ್ಚೆ ಆಗುತ್ತಿದೆ. ಇಬ್ಬರ ನಡುವಿನ ವೈಮನಸ್ಸಿಗೆ ಕಾರಣ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಈ ಬಗ್ಗೆ ಸಮಂತಾ ಆಗಲಿ, ನಾಗ ಚೈತನ್ಯ ಆಗಲಿ ನೇರವಾಗಿ ಯಾವುದೇ ಆರೋಪ-ಪ್ರತ್ಯಾರೋಪಗಳನ್ನು ಮಾಡಿಲ್ಲ. ಅಕ್ಕಿನೇನಿ ಕುಟುಂಬದವರು ಸೂಕ್ತ ಸ್ಪಷ್ಟನೆಯನ್ನೂ ನೀಡಿಲ್ಲ. ಡಿವೋರ್ಸ್​ (Divorce) ಪಡೆದ ಬಳಿಕ ಸಮಂತಾ ಮತ್ತು ನಾಗ ಚೈತನ್ಯ ಬೇರೆ ಬೇರೆ ಹಾದಿ ಹಿಡಿದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಮಂತಾ ಅವರು ಪರೋಕ್ಷವಾಗಿ ಅನೇಕ ವಿಚಾರಗಳ ಬಗ್ಗೆ ಸುಳಿವು ನೀಡುತ್ತಿದ್ದಾರೆ. ಅವರಿಗೆ ಹೋಲಿಸಿದರೆ ನಾಗ ಚೈತನ್ಯ ಮೌನ ವಹಿಸಿದ್ದೇ ಹೆಚ್ಚು. ಆದರೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಕೆಲವು ಅಂಶಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅದು ಸಮಂತಾ ಕುರಿತಾಗಿಯೇ ಹೇಳಿದ್ದು ಎಂದು ನೆಟ್ಟಿಗರು ವಿಶ್ಲೇಷಿಸುತ್ತಿದ್ದಾರೆ.

ನಿಮ್ಮ ಪಾತ್ರಗಳ ಆಯ್ಕೆ ಹೇಗಿರುತ್ತದೆ ಎಂದು ಕೇಳಿದ ಪ್ರಶ್ನೆಗೆ ನಾಗ ಚೈತನ್ಯ ಖಡಕ್​ ಆಗಿ ಉತ್ತರ ನೀಡಿದ್ದಾರೆ. ‘ಎಲ್ಲ ಬಗೆಯ ಪಾತ್ರಗಳನ್ನೂ ನಾನು ಮಾಡುತ್ತೇನೆ. ಆದರೆ ಆ ಪಾತ್ರಗಳಿಂದ ನನ್ನ ಕುಟುಂಬದವರ ಪ್ರತಿಷ್ಠೆಯ ಮೇಲೆ ಪರಿಣಾಮ ಬೀರಬಾರದು. ನನ್ನ ಕುಟುಂಬದ ಸದಸ್ಯರಿಗೆ ಮುಜುಗರ ಉಂಟುಮಾಡುವಂತಹ ಪಾತ್ರಗಳನ್ನು ನಾನು ಆಯ್ಕೆ ಮಾಡಿಕೊಳ್ಳುವುದಿಲ್ಲ’ ಎಂದು ನಾಗ ಚೈತನ್ಯ ಹೇಳಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನಲ್ಲಿ ಸಮಂತಾ ಅವರು ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಇಂಟಿಮೇಟ್​ ದೃಶ್ಯಗಳು ಇದರಲ್ಲಿ ಕಣ್ಣು ಕುಕ್ಕಿದ್ದವು. ಅವರು ಇಂಥ ಪಾತ್ರ ಮಾಡಿದ್ದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಆ ಕಾರಣದಿಂದಲೇ ಅವರ ಕುಟುಂಬದಲ್ಲಿ ಬಿರುಕು ಮೂಡಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ತಮಿಳರನ್ನು ಭಯೋತ್ಪಾದಕರ ರೀತಿಯಲ್ಲಿ ತೋರಿಸಿದ್ದಾರೆ ಎಂಬ ಆರೋಪ ಕೂಡ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿ ಮೇಲೆ ಕೇಳಿಬಂದಿತ್ತು.

ಸಮಂತಾ ಅವರು ಬೋಲ್ಡ್​ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿಲ್ಲ. ಇಂಗ್ಲಿಷ್​​ ಸಿನಿಮಾ ನಿರ್ದೇಶಕ ಫಿಲಿಪ್​ ಜಾನ್​ ಅವರು ಆ್ಯಕ್ಷನ್​-ಕಟ್​ ಹೇಳಲಿರುವ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಚಿತ್ರಕ್ಕೆ ಸಮಂತಾ ಆಯ್ಕೆ ಆಗಿದ್ದಾರೆ. ಅದರಲ್ಲಿ ಅವರು ಗಂಡು ಮತ್ತು ಹೆಣ್ಣು ಇಬ್ಬರ ಮೇಲೂ ಲೈಂಗಿಕ ಆಸಕ್ತಿ ಇರುವ ತಮಿಳು ಮಹಿಳೆಯಾಗಿ ನಟಿಸಲಿದ್ದಾರೆ. ಈ ಪಾತ್ರ ಕೂಡ ವಿವಾದ ಹುಟ್ಟು ಹಾಕುವ ಸಾಧ್ಯತೆ ಇದೆ. ಇದಲ್ಲದೇ ಅನೇಕ ಅವಕಾಶಗಳು ಸಮಂತಾ ಕೈಯಲ್ಲಿವೆ.

ಇದನ್ನೂ ಓದಿ:

ಸಮಂತಾ ಹಾಡಿನಲ್ಲಿ ಗಂಡಸರಿಗೆ ಅವಮಾನ; ‘ಪುಷ್ಪ’ ಚಿತ್ರದ ವಿರುದ್ಧ ದೂರು ನೀಡಿದ ಪುರುಷರ ಸಂಘಟನೆ

ಸಮಂತಾ ವಾಟ್ಸಾಪ್​ ಸಂದೇಶದ ಸ್ಕ್ರೀನ್​ಶಾಟ್​ ಬಹಿರಂಗ; ಅರೆಬರೆ ಮುಚ್ಚಿಟ್ಟು ನಟಿ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ