ಈ ಹಿಂದೆ ಅನೇಕ ಬಾರಿ ಸಲ್ಮಾನ್ ಖಾನ್ ವಿರುದ್ಧ ಕಮಾಲ್ ಆರ್. ಖಾನ್ ಗುಡುಗಿದ್ದುಂಟು. ಆದರೆ ಈ ಬಾರಿ ಅವರು ಸಲ್ಲು ಬಗ್ಗೆ ಮಾತನಾಡಿಲ್ಲ. ಇತರೆ ಸ್ಟಾರ್ ನಟರನ್ನು ಅವರು ಕುಟುಕಿದ್ದಾರೆ. ಶಾರುಖ್ ಖಾನ್, ರಣವೀರ್ ಸಿಂಗ್, ಅಜಯ್ ದೇವಗನ್ ಮತ್ತು ಆಯುಷ್ಮಾನ್ ಖುರಾನಾ ಅವರು ತಮ್ಮ ಸಿನಿಮಾ ಸೋತರೆ ಅದನ್ನು ಒಪ್ಪಿಕೊಳ್ಳುವ ಬದಲು ದುರಹಂಕಾರದ ಮಾತನಾಡುತ್ತಾರೆ ಎಂಬುದು ಕಮಾಲ್ ಆರ್. ಖಾನ್ ಅಭಿಪ್ರಾಯ.
‘ಸತ್ಯಮೇವ ಜಯತೆ 2, ಚಂಡೀಗಡ್ ಕರೇ ಆಶಿಖಿ, ಫ್ಯಾನ್, 83, ಶಿವಾಯ್ ಸಿನಿಮಾಗಳೆಲ್ಲ ಹೀನಾಯವಾಗಿ ಸೋತಿವೆ. ಆದರೆ ಈ ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್ ಕಲಾವಿದರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಬದಲಾಗಿ, ಈ ಚಿತ್ರಗಳನ್ನು ಮಾಸ್ಟರ್ಪೀಸ್ ಎಂದು ಅವರೇ ಕರೆದುಕೊಳ್ಳುತ್ತಾರೆ. ಜನರಿಗೆ ಈ ಸಿನಿಮಾಗಳು ಅರ್ಥವಾಗಿಲ್ಲ ಅಂತ ಹೇಳ್ತಾರೆ’ ಎಂದು ಕಮಾಲ್ ಆರ್. ಖಾನ್ ಗುಡುಗಿದ್ದಾರೆ.
‘ಈ ಬಾಲಿವುಡ್ನವರು ತಮ್ಮನ್ನು ತಾವು ಮಹಾನ್ ಬುದ್ಧಿವಂತರು ಎಂದುಕೊಂಡಿದ್ದಾರೆ. ಜನರಿಗೆ ಅರ್ಥವಾಗುವಂತಹ ಸಿನಿಮಾ ಮಾಡಲಿಲ್ಲ ಅಂದಾದರೆ ಆ ಚಿತ್ರವನ್ನು ನೀವು ನಿಮ್ಮ ಮನೆಯವರಿಗಾಗಿ ಮಾಡಿದ್ದೀರಾ? ನೀವು ಜನರಿಗಾಗಿ ಸಿನಿಮಾ ಮಾಡುತ್ತೀರಿ. ಜನರಿಗೆ ಇಷ್ಟ ಆಗಿಲ್ಲ ಎಂದರೆ ಆ ಚಿತ್ರಗಳು ಸರಿಯಿಲ್ಲ ಎಂದೇ ಅರ್ಥ. ಜನರಿಗೆ ಅರ್ಥ ಆಗಿಲ್ಲ ಅಂತ ಹೇಳೋದು ನಿಮ್ಮ ದುರಹಂಕಾರ’ ಎಂದು ಕಮಾಲ್ ಆರ್. ಖಾನ್ ಹೇಳಿದ್ದಾರೆ.
ಇದನ್ನೂ ಓದಿ:
ವಿದೇಶದಲ್ಲಿ ಶಾರುಖ್ ಫ್ಯಾನ್ ಅಂತ ಹೇಳಿಕೊಂಡ್ರೆ ಸಿಗುತ್ತೆ ವಿಶೇಷ ಗೌರವ; ಸಾಕ್ಷಿ ಸಮೇತ ವಿವರಿಸಿದ ಪ್ರೊಫೆಸರ್
16 ದಿನಕ್ಕೆ 175 ಕೋಟಿ ರೂ. ಗಳಿಸಿದ ‘83’ ಚಿತ್ರ; ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲು ವಿಫಲ