16 ದಿನಕ್ಕೆ 175 ಕೋಟಿ ರೂ. ಗಳಿಸಿದ ‘83’ ಚಿತ್ರ; ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ವಿಫಲ

83 Movie Box Office Collection: ಭಾರತದ ಗಲ್ಲಾಪೆಟ್ಟಿಗೆಯಲ್ಲಿ ‘83’ ಸಿನಿಮಾ ಗಳಿಸಿರುವುದು 97 ಕೋಟಿ ರೂಪಾಯಿ ಮಾತ್ರ. ಸೆಂಚುರಿ ಬಾರಿಸುವಲ್ಲಿ ಹಿನ್ನಡೆ ಆಗಿದೆ.

16 ದಿನಕ್ಕೆ 175 ಕೋಟಿ ರೂ. ಗಳಿಸಿದ ‘83’ ಚಿತ್ರ; ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ವಿಫಲ
83 ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on: Jan 09, 2022 | 12:21 PM

2021ರ ಕ್ರಿಸ್​ಮಸ್​ ಪ್ರಯುಕ್ತ ಬಿಡುಗಡೆಯಾದ ‘83’ ಸಿನಿಮಾ (83 Movie) ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡಿಲ್ಲ. 1983ರ ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತ ತಂಡ ಟ್ರೋಫಿ ಗೆದ್ದ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಭಾರತದಲ್ಲಿ ಕ್ರಿಕೆಟ್​ಗೆ ತುಂಬ ಮಹತ್ವ ಇದೆ. ಆ ಹಿನ್ನೆಲೆಯಲ್ಲಿ ‘83’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಈ ಸಿನಿಮಾ ಸೊರಗಿದೆ. 16 ದಿನಗಳ ಪ್ರದರ್ಶನದ ಬಳಿಕ ವಿಶ್ವಾದ್ಯಂತ ‘83’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ (83 Movie Box Office Collection) ಗಳಿಕೆ ಮಾಡಿರುವುದು 175 ಕೋಟಿ ರೂ. ಎಂಬ ಮಾಹಿತಿ ಸಿಕ್ಕಿದೆ.

ನೂರಾರು ಕೋಟಿ ರೂ. ಬಜೆಟ್​ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಅದಕ್ಕೆ ಹೋಲಿಸಿದರೆ 175 ಕೋಟಿ ರೂಪಾಯಿ ಕಲೆಕ್ಷನ್​ ಏನೇನೂ ಅಲ್ಲ. ಹಾಗಾಗಿ ಈ ಸಿನಿಮಾದಿಂದ ನಿರ್ಮಾಪಕರಿಗೆ ಹೆಚ್ಚೇನೂ ಲಾಭ ಆಗಿಲ್ಲ. ಕಬೀರ್​ ಖಾನ್​ ನಿರ್ದೇಶನ ಮಾಡಿರುವ ‘83’ ಚಿತ್ರದಲ್ಲಿ ರಣವೀರ್​ ಸಿಂಗ್​ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕಪಿಲ್​ ದೇವ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದು, ಕಪಿಲ್​ ದೇವ್​ ಪತ್ನಿ ರೋಮಿ ಭಾಟಿಯಾ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

ಭಾರತದ ಗಲ್ಲಾಪೆಟ್ಟಿಗೆಯಲ್ಲಿ ‘83’ ಸಿನಿಮಾ ಗಳಿಸಿರುವುದು 97 ಕೋಟಿ ರೂಪಾಯಿ ಮಾತ್ರ. ಸೆಂಚುರಿ ಬಾರಿಸುವಲ್ಲಿ ಹಿನ್ನಡೆ ಆಗಿದೆ. ಈ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಇತರೆ ಸಿನಿಮಾಗಳ ಪೈಪೋಟಿ ಜೋರಾಗಿತ್ತು. ತೆಲುಗಿನ ‘ಪುಷ್ಪ’, ಹಾಲಿವುಡ್​ನ ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಸಿನಿಮಾಗಳ ಅಬ್ಬರದ ನಡುವೆ ‘83’ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಗೆಲುವು ಸಿಗಲಿಲ್ಲ. ಅದರ ನಡುವೆ ಅನೇಕ ಕಡೆಗಳಲ್ಲಿ ಶೇ.50ರಷ್ಟು ಆಸನ ಮಿತಿ ನಿರ್ಬಂಧ ಹೇರಿರುವುದು ಕೂಡ ಚಿತ್ರದ ಹಿನ್ನಡೆಗೆ ಕಾರಣ ಆಯಿತು.

‘83’ ಚಿತ್ರಕ್ಕೆ ಪೈರಸಿ ಕಾಟ ಕೂಡ ದೊಡ್ಡ ಹೊಡೆತು ನೀಡಿತು. ರಿಲೀಸ್​ ಆದ ದಿನವೇ ಈ ಚಿತ್ರದ ಪೈರಸಿ ಕಾಪಿ ಇಂಟರ್​ನೆಟ್​ನಲ್ಲಿ ಹರಿದಾಡಲು ಆರಂಭವಾಯಿತು. ಟ್ರೇಲರ್​ ಮೂಲಕ ಭಾರಿ ಹೈಪ್​ ಸೃಷ್ಟಿ ಮಾಡಿದ್ದ ‘83’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಮಾಧಾನಕರ ಗಳಿಕೆ ಮಾಡಿದೆ.

ಸುನಿಲ್​ ಗವಾಸ್ಕರ್​ ಪಾತ್ರದಲ್ಲಿ ತಾಹಿರ್​ ರಾಜ್​ ಭಸಿನ್​, ಕೃಷ್ಣಮಚಾರಿ ಶ್ರೀಕಾಂತ್​ ಪಾತ್ರದಲ್ಲಿ ಜೀವ, ಮೊಹಿಂದರ್​ ಅಮರ್​ನಾಥ್​ ಪಾತ್ರದಲ್ಲಿ ಸಾಖಿಬ್​ ಸಲೀಮ್​, ಯಶ್​ಪಾಲ್​ ಶರ್ಮಾ ಪಾತ್ರದಲ್ಲಿ ಜತಿನ್​ ಸರ್ನಾ, ಸಂದೀಪ್​ ಪಾಟಿಲ್​ ಪಾತ್ರದಲ್ಲಿ ಚಿರಾಗ್​ ಪಾಟಿಲ್​, ಕೀರ್ತಿ ಆಜಾದ್​ ಪಾತ್ರದಲ್ಲಿ ದಿನಕರ್​ ಶರ್ಮಾ, ರೋಜರ್​ ಬಿನ್ನಿ ಪಾತ್ರದಲ್ಲಿ ನಿಶಾಂತ್​ ದಹಿಯಾ, ಮದನ್​ ಲಾಲ್​ ಪಾತ್ರದಲ್ಲಿ ಹಾರ್ಡಿ ಸಂಧು, ಸೈಯದ್​ ಕಿರ್ಮಾನಿ ಪಾತ್ರದಲ್ಲಿ ಸಾಹಿಲ್​ ಕಟ್ಟರ್​, ಬಲ್ವಿಂದರ್​ ಸಂಧು ಪಾತ್ರದಲ್ಲಿ ಎಮಿ ವಿರ್ಕ್​, ರವಿ ಶಾಸ್ತ್ರಿ ಪಾತ್ರದಲ್ಲಿ ಧೈರ್ಯ ಕರ್ವ ನಟಿಸಿದ್ದಾರೆ. 1983ರ ಭಾರತ ವಿಶ್ವಕಪ್​ ತಂಡದ ಮ್ಯಾನೇಜರ್​ ಆಗಿದ್ದ ಪಿಆರ್ ಮಾನ್​ ಸಿಂಗ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

‘83’ ಚಿತ್ರದ ಆಡಿಷನ್​ನಲ್ಲಿ ಆಯ್ಕೆ ಆಗಿದ್ದ ವಿಕ್ಕಿ ಕೌಶಲ್​; ನಂತರ ಚಿತ್ರತಂಡದಿಂದ ಹೊರಹೋಗಿದ್ದು ಯಾಕೆ?

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ