‘ಪುಷ್ಪ 2’ ಚಿತ್ರಕ್ಕಾಗಿ ಈಗಲೇ ಐಟಂ ಸಾಂಗ್​ ಸಿದ್ಧಪಡಿಸಲು ಮುಂದಾದ ನಿರ್ದೇಶಕ; ಈ ಬಾರಿ ಸಮಂತಾಗಿಲ್ಲ ಚಾನ್ಸ್​

‘ಪುಷ್ಪ 2’ ಚಿತ್ರಕ್ಕಾಗಿ ಈಗಲೇ ಐಟಂ ಸಾಂಗ್​ ಸಿದ್ಧಪಡಿಸಲು ಮುಂದಾದ ನಿರ್ದೇಶಕ; ಈ ಬಾರಿ ಸಮಂತಾಗಿಲ್ಲ ಚಾನ್ಸ್​
ಸಮಂತಾ

‘ಪುಷ್ಪ’ ಸಿನಿಮಾದ ವಿಶೇಷ ಹಾಡು ಮೊದಲೇ ಶೂಟ್​ ಆಗಿದ್ದರೆ ಮತ್ತಷ್ಟು ಹೈಪ್​ ಪಡೆದುಕೊಳ್ಳುತ್ತಿತ್ತು ಎಂಬುದು ಅವರ ಭಾವನೆ. ಈ ಕಾರಣಕ್ಕೆ, ‘ಪುಷ್ಪ 2’ ಸಿನಿಮಾ ಕೆಲಸದ ಆರಂಭದಲ್ಲೇ ಈ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.

TV9kannada Web Team

| Edited By: Rajesh Duggumane

Jan 09, 2022 | 2:57 PM

‘ಪುಷ್ಪ’ ಚಿತ್ರ (Pushpa Movie)  ರಿಲೀಸ್​ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಸಿಕ್ಕ ಹೊರತಾಗಿಯೂ ಇಷ್ಟೊಂದು ಗಳಿಕೆ ಮಾಡಿದ್ದು ಸ್ವತಃ ಚಿತ್ರತಂಡಕ್ಕೆ ಅಚ್ಚರಿ ಮೂಡಿಸಿದೆ. ‘ಪುಷ್ಪ’ದಲ್ಲಿ ಬರುವ ಸಮಂತಾ ಐಟಂ ಸಾಂಗ್​ ಕೂಡ ಚಿತ್ರದ ಮೈಲೇಜ್​ ಹೆಚ್ಚಿಸಿದೆ ಎಂಬುದಕ್ಕೆ ಯಾವುದೇ ಅನುಮಾನ ಉಳಿದಿಲ್ಲ. ಸಿನಿಮಾ ಗೆಲುವಿನಿಂದ ನಿರ್ದೇಶಕ ಸುಕುಮಾರ್​ಗೆ ಹೊಸ ಹುರುಪು ಬಂದಿದೆ. ಅವರು ಪಾರ್ಟ್​ 2 ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಬಾರಿ ಅವರು ಐಟಂ ಸಾಂಗ್​ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ. ಆರಂಭದಿಂದಲೇ ಈ ಬಗ್ಗೆ ಟಾಕ್​ ಶುರುವಾಗುವಂತೆ ನೋಡಿಕೊಳ್ಳುವ ಆಲೋಚನೆಯಲ್ಲಿ ಅವರಿದ್ದಾರೆ.

ಸುಕುಮಾರ್​ ತಮ್ಮ ಪ್ರತಿ ಸಿನಿಮಾದಲ್ಲಿ ಐಟಂ ಸಾಂಗ್​ಗೆ ಆದ್ಯತೆ ನೀಡುತ್ತಾರೆ. ಸ್ಟಾರ್​ ನಟಿಯರನ್ನು ಕರೆಸಿ ಹೆಜ್ಜೆ ಹಾಕಿಸುತ್ತಾರೆ. ‘ಹೂ ಅಂತೀಯಾ ಮಾವ.. ಉಹೂ ಅಂತೀಯಾ..’ ಹಾಡಿನಲ್ಲಿ ನಟಿಸೋಕೆ ಆರಂಭದಲ್ಲಿ ಸನ್ನಿ ಲಿಯೋನ್​, ನೋರಾ ಫತೇಹಿ ಮೊದಲಾದವರಿಗೆ ಆಫರ್​ ನೀಡಲಾಗಿತ್ತು. ಆದರೆ, ಡೇಟ್ಸ್​ ಹೊಂದಾಣಿಕೆ ಹಾಗೂ ಮತ್ತಿತರ ಕಾರಣಕ್ಕೆ ಅವರ್ಯಾರೂ ಈ ಹಾಡಿನಲ್ಲಿ ಹೆಜ್ಜೆ ಹಾಕೋಕೆ ಒಪ್ಪಿರಲಿಲ್ಲ. ಹೀಗಾಗಿ, ಹಾಡಿನ ಶೂಟಿಂಗ್​ ವಿಳಂಬವಾಗುತ್ತಲೇ ಇತ್ತು. ಸಿನಿಮಾ ರಿಲೀಸ್​ಗೆ ಒಂದು ತಿಂಗಳು ಇರುವಾಗ ಸಮಂತಾ ಸಿನಿಮಾದ ಸೆಟ್​ ಸೇರಿಕೊಂಡರು. ತರಾತುರಿಯಲ್ಲಿ ಹಾಡಿನ ಶೂಟಿಂಗ್​ ಮಾಡಲಾಯಿತು. ಸಿನಿಮಾ ರಿಲೀಸ್​ಗೆ ಕೆಲವೇ ದಿನ ಇರುವಾಗ ಲಿರಿಕಲ್​ ಸಾಂಗ್​ ರಿಲೀಸ್​ ಆಗಿತ್ತು. ಆದಾಗ್ಯೂ ಹಾಡು ಒಳ್ಳೆಯ ಸದ್ದು ಮಾಡಿದೆ. ಈ ಬಾರಿ ಆ ರೀತಿ ಗಡಿಬಿಡಿ ಆಗದಂತೆ ಎಚ್ಚರವಹಿಸಲು ಸುಕುಮಾರ್ ನಿರ್ಧರಿಸಿದ್ದಾರೆ.

‘ಪುಷ್ಪ’ ಸಿನಿಮಾದ ವಿಶೇಷ ಹಾಡು ಮೊದಲೇ ಶೂಟ್​ ಆಗಿದ್ದರೆ ಮತ್ತಷ್ಟು ಹೈಪ್​ ಪಡೆದುಕೊಳ್ಳುತ್ತಿತ್ತು ಎಂಬುದು ಅವರ ಭಾವನೆ. ಈ ಕಾರಣಕ್ಕೆ, ‘ಪುಷ್ಪ 2’ ಸಿನಿಮಾ ಕೆಲಸದ ಆರಂಭದಲ್ಲೇ ಈ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆಯೂ ಲೆಕ್ಕಾಚಾರ ಹಾಕುತ್ತಿದ್ದಾರೆ.

ಈ ಬಾರಿ ಮತ್ತೆ ಸಮಂತಾ ಅವರಿಗೆ ಅವಕಾಶ ನೀಡೋದು ಅನುಮಾನ ಎನ್ನಲಾಗುತ್ತಿದೆ. ಎರಡನೇ ಪಾರ್ಟ್​ನಲ್ಲೂ ಅವರು ಬಂದರೆ ಮೊದಲಿನಷ್ಟೇ ಕ್ರೇಜ್​ ತೋರಿಸುತ್ತಾರೆ ಎಂಬುದು ಅನುಮಾನ. ಹೀಗಾಗಿ, ಹೊಸ ನಟಿಯರಿಗೆ ಚಾನ್ಸ್​ ನೀಡೋಕೆ ಸುಕುಮಾರ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಎರಡನೇ ಪಾರ್ಟ್​ನ ಕೆಲಸಗಳು ಯಾವಾಗ ಆರಂಭವಾಗುತ್ತದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ: Samantha: ಸಮಂತಾ ಪವರ್​ಫುಲ್​ ವರ್ಕೌಟ್; ವೈರಲ್​ ಆಗುತ್ತಿದೆ ಹೊಸ ವಿಡಿಯೋ

ಸಮಂತಾ ದೂರಾದ ಬಳಿಕ ನಾಗ ಚೈತನ್ಯ ಜತೆ ಖಾಸಗಿ ವಿಮಾನದಲ್ಲಿ ಕಾಣಿಸಿಕೊಂಡ ಈ ಸುಂದರಿ ಯಾರು?

Follow us on

Related Stories

Most Read Stories

Click on your DTH Provider to Add TV9 Kannada