ನಟಿ ಪ್ರೇಮಾ ‘ವೆಡ್ಡಿಂಗ್​ ಗಿಫ್ಟ್​’ ಒಪ್ಪಿಕೊಂಡಿದ್ದು ಯಾಕೆ? ಈಗ ಏನಾಗಿದೆ ಅದರ ಕಥೆ?

‘ವೆಡ್ಡಿಂಗ್​ ಗಿಫ್ಟ್​’ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಪ್ರೇಮಾ ಈ ಚಿತ್ರ ಒಪ್ಪಿಕೊಂಡಿದ್ದು ಯಾಕೆ? ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು.

ನಟಿ ಪ್ರೇಮಾ ‘ವೆಡ್ಡಿಂಗ್​ ಗಿಫ್ಟ್​’ ಒಪ್ಪಿಕೊಂಡಿದ್ದು ಯಾಕೆ? ಈಗ ಏನಾಗಿದೆ ಅದರ ಕಥೆ?
ಪ್ರೇಮಾ, ವಿಕ್ರಮ್​ ಪ್ರಭು, ಸೋನು ಗೌಡ
Follow us
TV9 Web
| Updated By: ಮದನ್​ ಕುಮಾರ್​

Updated on:Jan 09, 2022 | 1:44 PM

ಕನ್ನಡ ಚಿತ್ರರಂಗದಲ್ಲಿ ನಟಿ ಪ್ರೇಮಾ (Prema) ಅವರು ಮಾಡಿದ ಮೋಡಿ ಅಂತಿಂಥದ್ದಲ್ಲ. ಒಂದು ಕಾಲದಲ್ಲಿ ಅವರು ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ನೀಡಿದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಚಿತ್ರಗಳ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿದ್ದಾರೆ. ಪ್ರೇಮಾ ಒಪ್ಪಿಕೊಂಡಿರುವ ಕೆಲವೇ ಸಿನಿಮಾಗಳ ಪೈಕಿ ‘ವೆಡ್ಡಿಂಗ್​ ಗಿಫ್ಟ್​’ (Wedding Gift Movie) ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಚಿತ್ರಕ್ಕೆ ವಿಕ್ರಮ್​ ಪ್ರಭು ನಿರ್ದೇಶನ ಮಾಡಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಸೋನು ಗೌಡ (Sonu Gowda), ನಿಶಾನ್​ ನಾಣಯ್ಯ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉದಯ್​ ಲೀಲಾ ಛಾಯಾಗ್ರಹಣ ಹಾಗೂ ವಿಜೇತ್​ ಚಂದ್ರ ಸಂಕಲನ ಮಾಡಿದ್ದಾರೆ. ಬಾಲಚಂದ್ರ ಪ್ರಭು ಸಂಗೀತ ನೀಡಿದ್ದಾರೆ.

‘ವೆಡ್ಡಿಂಗ್​ ಗಿಫ್ಟ್​’ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಕೋರ್ಟ್​ ರೂಮ್​ ಡ್ರಾಮ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಪ್ರೇಮಾ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ? ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ‘ಮಾಡುವ ಪಾತ್ರದಲ್ಲಿ ಸೃಜನಶೀಲತೆ ಇರಬೇಕು. ಇಲ್ಲದಿದ್ದರೆ ನಾನು ಒಪ್ಪಿಕೊಳ್ಳುವುದಿಲ್ಲ. ನನ್ನ ಅಭಿರುಚಿ ಅಂಥದ್ದು. ಈ ಪಾತ್ರಕ್ಕೆ ಪ್ರೇಮಾ ಅವರೇ ಬೇಕು ಎಂಬುದು ನಿರ್ದೇಶಕರಿಗೆ ಗೊತ್ತಿರುತ್ತದೆ. ಹಾಗಾಗಿ ಅವರು ಬಂದು ನನ್ನನ್ನು ಕೇಳಿದರು. ಆದ್ದರಿಂದ ಒಪ್ಪಿಕೊಂಡೆ’ ಎಂದಿದ್ದಾರೆ ಪ್ರೇಮಾ.

‘ಈ ಸಿನಿಮಾದ ಕಥೆ ಕೇಳಿದಾಗ ವಿಭಿನ್ನ ಎನಿಸಿತು. ಒಂದು ಒಳ್ಳೆಯ ಮೆಸೇಜ್​ ಇದೆ. ಅದನ್ನು ತಿಳಿದು ನಾನು ಖುಷಿಯಾದೆ. ಈ ತಂಡದ ಜೊತೆ ಕೆಲಸ ಮಾಡುವುದು ಕೂಡ ಒತ್ತಡ ಎನಿಸಲಿಲ್ಲ. ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದೇವೆ. ನಿರ್ದೇಶಕ ವಿಕ್ರಮ್​ ಪ್ರಭು ಜತೆ ಕೆಲಸ ಮಾಡಿದ್ದು ಖುಷಿ ನೀಡಿತು. ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡಿದ್ದೇನೆ. ತುಂಬ ಡಿಫರೆಂಟ್​ ಆಗಿದೆ. ಆ ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದು ಪ್ರೇಮಾ ಹೇಳಿದ್ದಾರೆ.

‘ವೆಡ್ಡಿಂಗ್​ ಗಿಫ್ಟ್​’ ಸಿನಿಮಾದಲ್ಲಿ ಗಂಡ-ಹೆಂಡತಿ ನಡುವಿನ ಕಥೆ ಇದೆ ಎಂದು ನಿರ್ದೇಶಕ ವಿಕ್ರಮ್​ ಪ್ರಭು ಹೇಳಿದ್ದಾರೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅನೇಕ ಘಟನೆಗಳನ್ನು ಆಧರಿಸಿ ಈ ಚಿತ್ರ ಮೂಡಿಬರುತ್ತಿದೆ. ಐಪಿಸಿ ಸೆಕ್ಷನ್​ 498ಎ ಹೇಗೆ ದುರ್ಬಳಕೆ ಆಗುತ್ತಿದೆ ಎಂಬುದನ್ನು ತೋರಿಸಲು ನಿರ್ದೇಶಕರು ಪ್ರಯತ್ನಿಸುತ್ತಿದ್ದಾರೆ.

ನಟಿ ಸೋನು ಗೌಡ ಅವರಿಗೂ ಈ ಚಿತ್ರ ವಿಶೇಷ ಎನಿಸಿದೆ. ‘ಯಾವುದೇ ಪಾತ್ರ ಮಾಡಿದರೂ ನಾನು ಆ ಪಾತ್ರವನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತೇನೆ. ಶೂಟಿಂಗ್​ ಮಾಡುವಾಗ ಈ ಸಿನಿಮಾದ ಪಾತ್ರ ಕೂಡ ನನ್ನನ್ನು ಕಾಡುತ್ತಿತ್ತು. ಜನರು ಈ ಪಾತ್ರವನ್ನು ಯಾವ ರೀತಿ ಒಪ್ಪಿಕೊಳ್ಳುತ್ತಾರೋ ಎಂಬ ಪ್ರಶ್ನೆ ಮೂಡುತ್ತಿತ್ತು’ ಎಂದು ಸೋನು ಗೌಡ ಹೇಳಿದ್ದಾರೆ.

ಇದನ್ನೂ ಓದಿ:

‘ಪುನೀತ್ ಬಹಳ ಶ್ರಮಜೀವಿ, ಅವರೊಂದಿಗೆ ಡಾನ್ಸ್ ಮಾಡಬೇಕು ಎಂಬ ಕನಸಿತ್ತು’; ಅಪ್ಪು ಸ್ಮರಿಸಿದ ನಟಿ ಪ್ರೇಮಾ

ಪುನೀತ್ ರಾಜಕುಮಾರನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು ಸಿನಿಮಾರಂಗಕ್ಕೆ ವಾಪಸ್ಸಾಗುತ್ತಿರುವ ಪ್ರೇಮಾ!

Published On - 1:25 pm, Sun, 9 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ