ನಟ ಧನ್ವೀರ್​ ಗೌಡ 3ನೇ ಸಿನಿಮಾ ಹೇಗಿರಲಿದೆ? ಟೈಟಲ್​, ಫಸ್ಟ್​ಲುಕ್​ ಬಿಡುಗಡೆಗೆ ದಿನಾಂಕ ಫಿಕ್ಸ್​​

ನಟ ಧನ್ವೀರ್​ ಗೌಡ 3ನೇ ಸಿನಿಮಾ ಹೇಗಿರಲಿದೆ? ಟೈಟಲ್​, ಫಸ್ಟ್​ಲುಕ್​ ಬಿಡುಗಡೆಗೆ ದಿನಾಂಕ ಫಿಕ್ಸ್​​
ಧನ್ವೀರ್ ಗೌಡ

ಮೂರನೇ ಸಿನಿಮಾಗಾಗಿ ಧನ್ವೀರ್ ಗೌಡ​ ಅವರು ಒಂದಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರಕ್ಕಾಗಿ ವರ್ಕೌಟ್​ ಮಾಡುತ್ತಿದ್ದಾರೆ. ದೇಹವನ್ನು ಹುರಿಗೊಳಿಸಿಕೊಂಡು ಅವರು ಕ್ಯಾಮೆರಾ ಎದುರಿಸಲಿದ್ದಾರೆ.

TV9kannada Web Team

| Edited By: Madan Kumar

Jan 08, 2022 | 4:36 PM

ನಟನೆ ಮತ್ತು ಕಟ್ಟುಮಸ್ತಾದ ಬಾಡಿಯಿಂದಾಗಿ ಗಮನ ಸೆಳೆದವರು ನಟ ಧನ್ವೀರ್​ ಗೌಡ. ‘ಬಜಾರ್​’ ಸಿನಿಮಾ ಮೂಲಕ ಅವರು ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದರು. ಸಿನಿಮಾಗಳ ಆಯ್ಕೆಯಲ್ಲಿ ತಮ್ಮದೇ ಆದಂತಹ ಕೆಲವು ನಿಯಮಗಳನ್ನು ಪಾಲಿಸುತ್ತಿರುವ ಅವರು ಹೊಸ ಪ್ರಾಜೆಕ್ಟ್​ ಒಪ್ಪಿಕೊಂಡಿದ್ದಾರೆ. ಸದ್ಯ ಧನ್ವೀರ್​ ಗೌಡ ‘ಬೈ ಟು ಲವ್​’ ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಅದು ಅವರ 2ನೇ ಸಿನಿಮಾ. ಧನ್ವೀರ್​ ನಟಿಸಲಿರುವ ಮೂರನೇ ಸಿನಿಮಾ ಬಗ್ಗೆಯೂ ಈಗ ಒಂದಷ್ಟು ಮಾಹಿತಿ ಹೊರಬಿದ್ದಿದೆ. ಮಾಸ್​ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸಲು ಅವರು ಸಜ್ಜಾಗುತ್ತಿದ್ದಾರೆ. ಈ ಬಗ್ಗೆ ಶೀಘ್ರವೇ ಇನ್ನಷ್ಟು ಅಪ್​​ಡೇಟ್​ ಸಿಗಲಿದೆ. ಅದಕ್ಕಾಗಿ ದಿನಾಂಕ ಕೂಡ ನಿಗದಿ ಆಗಿದೆ.

ಧನ್ವೀರ್​ ನಟಿಸಲಿರುವ ಮೂರನೇ ಚಿತ್ರವನ್ನು ಸದ್ಯಕ್ಕೆ ‘ಡಿ3’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಜ.14ರಂದು ಬಹಿರಂಗ ಆಗಲಿದೆ. ಅದೇ ದಿನ ಫಸ್ಟ್​ಲುಕ್​ ಮೋಷನ್​ ಪೋಸ್ಟರ್​ ಸಹ ಬಿಡುಗಡೆ ಆಗಲಿದೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ಬ್ಯಾನರ್​ನಲ್ಲಿ ಚೇತನ್ ಕುಮಾರ್ ಗೌಡ ಅವರು ಈ ಸಿನಿಮಾಗೆ ಬಂಡವಾಳ‌ ಹೂಡಲಿದ್ದಾರೆ.

ಈ ಚಿತ್ರಕ್ಕೆ ನಿರ್ದೇಶನ ಮಾಡುವವರು ಯಾರು ಎಂಬುದು ಕೂಡ ಬಹಿರಂಗ ಆಗಿದೆ. ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿ ಅನುಭವ ಹೊಂದಿರುವ ಶಂಕರ್ ರಾಮನ್ ಅವರು ಧನ್ವೀರ್​ ನಟನೆಯ 3ನೇ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಚಿತ್ರರಂಗದಲ್ಲಿ ಅವರದ್ದು 13 ವರ್ಷಗಳ ಅನುಭವ. ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಧನ್ವೀರ್​ಗಾಗಿ ಶಂಕರ್ ರಾಮನ್ ಅವರು ಮಾಫಿಯಾ ಲೋಕದ ಕಥೆ ಸಿದ್ಧಪಡಿಸಿದ್ದಾರೆ. ಈ ಸಿನಿಮಾ ಮಾಸ್​ ಆಕ್ಷನ್ ಎಂಟರ್​ಟೇನರ್​ ಪ್ರಕಾರದಲ್ಲಿ ಮೂಡಿಬರಲಿದೆ.

ಈ ಚಿತ್ರಕ್ಕಾಗಿ ಧನ್ವೀರ್​ ಅವರು ಒಂದಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಪಾತ್ರಕ್ಕಾಗಿ ತಯಾರಿ ನಡೆಯುತ್ತಿದೆ. ದೇಹವನ್ನು ಹುರಿಗೊಳಿಸಿಕೊಂಡು ಅವರು ಕ್ಯಾಮೆರಾ ಎದುರಿಸಲಿದ್ದಾರೆ. ಮೊದಲೆರಡು ಸಿನಿಮಾಗಳಿಗಿಂತಲೂ ಈ ಚಿತ್ರ ಭಿನ್ನವಾಗಿ ಇರಲಿದೆ ಎಂಬ ಭರವಸೆಯನ್ನು ಅವರು ನೀಡಿದ್ದಾರೆ. ಈ ಸಿನಿಮಾದಲ್ಲಿ ಬೇರೆ ಯಾವೆಲ್ಲ ಕಲಾವಿದರು ಇರಲಿದ್ದಾರೆ ಎಂಬುದು ಕೂಡ ಇನ್ನಷ್ಟೇ ತಿಳಿಯಬೇಕಿದೆ. ಜ.20ರಿಂದ ಈ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ:

‘ರಾಧೆ ಶ್ಯಾಮ್​’ ರಿಲೀಸ್​ ದಿನಾಂಕ ಮುಂದಕ್ಕೆ; ಸಂಕ್ರಾಂತಿ ರೇಸ್​ನಿಂದ ಹಿಂದೆ ಸರಿದ ಪ್ರಭಾಸ್ ಸಿನಿಮಾ

‘ಮುಂಗಾರು ಮಳೆ’ ತಂಡದಲ್ಲೂ ಮನಸ್ತಾಪ ಆಗಿತ್ತು; ಸ್ನೇಹದ ಅಸಲಿ ವಿಚಾರ ತೆರೆದಿಟ್ಟ ಗಣೇಶ್​

Follow us on

Related Stories

Most Read Stories

Click on your DTH Provider to Add TV9 Kannada