ಪುನೀತ್ ರಾಜಕುಮಾರನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು ಸಿನಿಮಾರಂಗಕ್ಕೆ ವಾಪಸ್ಸಾಗುತ್ತಿರುವ ಪ್ರೇಮಾ!

ನಾಳೆ ಗುರುವಾರದಂದು ತನ್ನ 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಪ್ರೇಮಾ 2017 ರ ನಂತರ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಅದರೆ, ಅವರು ಪುನಃ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡುವ ವದಂತಿ ಹಬ್ಬಿದೆ.

TV9kannada Web Team

| Edited By: Arun Belly

Jan 04, 2022 | 8:54 PM

ಕೊಡಗಿನ ಬೆಡಗಿ ಮತ್ತು 1995 ರಿಂದ 2017 ರವರೆಗೆ ಸ್ಯಾಂಡಲ್ ವುಡ್ ಮತ್ತು ತೆಲುಗು ಚಿತ್ರರಂದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಅಭಿಮಾನಿಗಳ ಹೃದಯಗಳಲ್ಲಿ ರಾರಾಜಿಸಿದ ಪ್ರೇಮಾ ಅವರನ್ನು ಕನ್ನಡಿಗರು ಮರೆಯುವುದು ಸಾಧ್ಯವೇ? ಸುಮಾರು 3-4 ವರ್ಷಗಳಿಂದ ಅವರು ಚಿತ್ರರಂಗದಿಂದ ದೂರವಿದ್ದಿದ್ದು ನಿಜ ಅದರೆ, ಅವರು ಇಂದು ಅವರು ಬೆಂಗಳೂರಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನ ಸೆಲ್ಫೀಗಳಿಗಾಗಿ ದುಂಬಾಲು ಬಿದ್ದಿದ್ದು ನೋಡಿದರೆ, ತಮ್ಮ ಹೃದಯಗಳಲ್ಲಿ ಅವರು ಪ್ರೇಮಾರವರ ಬಗ್ಗೆ ಇನ್ನೂ ಪ್ರೇಮ ಇಟ್ಟುಕೊಂಡಿರುವುದು ಸತ್ಯ ಮಾರಾಯ್ರೇ.

ಹೌದು, ನಾಳೆ ಗುರುವಾರದಂದು ತನ್ನ 45ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಪ್ರೇಮಾ 2017 ರ ನಂತರ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಅದರೆ, ಅವರು ಪುನಃ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡುವ ವದಂತಿ ಹಬ್ಬಿದೆ. ಇಂಥ ಸಂದರ್ಭದಲ್ಲಿ ಟಿವಿ9 ಸಿನಿಮಾ ವರದಿಗಾರ ಮಾಲ್ತೇಶ್ ಜಗ್ಗಿನ್ ಅವರು ಪ್ರೇಮಾರೊಂದಿಗೆ ಒಂದು ಚಿಕ್ಕ ಮಾತುಕತೆ ನಡೆಸಿದರು.

ಎರಡು ತಿಂಗಳ ಹಿಂದೆ ಕನ್ನಡಿಗರನ್ನು ಅಗಲಿದ ಪುನೀತ್ ರಾಜಕುಮಾರ ಅವರನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ ಪ್ರೇಮಾ, ಅಪ್ಪು ಅವರ ಹೋಮ್ ಪ್ರೊಡಕ್ಷನ್ ಚಿತ್ರಗಳಲ್ಲಿ ನಟಿಸುವಾಗ ಅವರು ಸೆಟ್ಗಳಿಗೆ ಬಂದು ಚಿತ್ರೀಕರಣ ವೀಕ್ಷಿಸುತ್ತಿದ್ದರು ಎಂದರು. ಅವರೊಂದಿಗೆ ಡ್ಯಾನ್ಸ್ ಮಾಡುವ ತನ್ನ ಬಹು ದಿನಗಳ ಬಯಕೆ ಕೊನೆವರೆಗೂ ಈಡೇರದೆ ಹೋಗಿದ್ದಕ್ಕೆ ಪ್ರೇಮಾ ಬೇಸರ ವ್ಯಕ್ಯಪಡಿಸಿದರು. ಅಪ್ಪು ಅವರಂಥ ಶ್ರಮಜೀವಿಯನ್ನು ತಾನು ನೋಡಿಲ್ಲ ಎಂದು ಅವರು ಹೇಳಿದರು.

ಅಭಿಮಾನಿಗಳು ತಮ್ಮ ಬಗ್ಗೆ ಇನ್ನೂ ಅಭಿಮಾನ ಪ್ರೀತಿ ಇಟ್ಟುಕೊಂಡಿರುವುದಕ್ಕೆ ಪ್ರೇಮಾ ಖುಷಿ ಪ್ರಕಟಿಸಿದರು. ತನಗೆ ಒಪ್ಪುವಂಥ ಪಾತ್ರಗಳು ಸಿಗದ ಕಾರಣ ಮತ್ತು ಕೆಲ ಸಮಯದವರೆಗೆ ವಿದೇಶದಲ್ಲಿ ನೆಲೆಸಿದ್ದರಿಂದ ನಟಿಸುವುದು ಸಾಧ್ಯವಾಗಿರಲಿಲ್ಲ. ಆದರೆ ಈಗ ಕಮ್ ಬ್ಯಾಕ್ ಮಾಡುತ್ತಿರುವ ಸಂದರ್ಭದಲ್ಲಿ ಅಭಿಮಾನಿಗಳು ಮೊದಲಿನ ಹಾಗೆಯೇ ಪ್ರೀತಿ ಇಟ್ಟುಕೊಂಡಿರುವುದು ಬಹಳ ಸಂತೋಷ ನೀಡಿದೆ ಎಂದು ಪ್ರೇಮಾ ಹೇಳಿದರು.

ಇದನ್ನೂ ಓದಿ:   ಹೊಸ ವರ್ಷದಂದು ನಾಡದೇವತೆ ಚಾಮುಂಡೇಶ್ವರಿಯ ಸನ್ನಿಧಾನಕ್ಕೆ ಅಭಿಮಾನಿಗಳೊಂದಿಗೆ ಆಗಮಿಸಿದ ಅಪ್ಪು; ವಿಡಿಯೋ ಇಲ್ಲಿದೆ

Follow us on

Click on your DTH Provider to Add TV9 Kannada