‘ರಾಜಕೀಯ ದುರುಪಯೋಗಕ್ಕೆ ಲಾಕ್​ಡೌನ್ ಬೇಡ’; ದುನಿಯಾ ವಿಜಯ್​ ಮನವಿ

ಭಾರತದಲ್ಲಿ ಕೊವಿಡ್​ ಪ್ರಕರಣ ಹೆಚ್ಚುತ್ತಿದೆ. ಬೆಂಗಳೂರಿನಲ್ಲೂ ಕೊವಿಡ್​ ಪ್ರಕರಣಗಳು ದ್ವಿಗುಣವಾಗುತ್ತಿದೆ. ಈ ಕಾರಣಕ್ಕೆ ಲಾಕ್​ಡೌನ್​ ಮಾಡಬಹುದು ಎನ್ನುವ ಮಾತು ಕೇಳಿ ಬಂದಿದೆ. ಇದರಿಂದ ಚಿತ್ರರಂಗದ ಮೇಲೆ ನೇರ ಪರಿಣಾಮ ಬೀರುತ್ತದೆ

TV9kannada Web Team

| Edited By: Rajesh Duggumane

Jan 05, 2022 | 10:04 AM

ಭಾರತದಲ್ಲಿ ಕೊವಿಡ್​ ಪ್ರಕರಣ ಹೆಚ್ಚುತ್ತಿದೆ. ಬೆಂಗಳೂರಿನಲ್ಲೂ ಕೊವಿಡ್​ ಪ್ರಕರಣಗಳು ದ್ವಿಗುಣವಾಗುತ್ತಿದೆ. ಈ ಕಾರಣಕ್ಕೆ ಲಾಕ್​ಡೌನ್​ ಮಾಡಬಹುದು ಎನ್ನುವ ಮಾತು ಕೇಳಿ ಬಂದಿದೆ. ಇದರಿಂದ ಚಿತ್ರರಂಗದ ಮೇಲೆ ನೇರ ಪರಿಣಾಮ ಬೀರುತ್ತದೆ. ಲಾಕ್​ಡೌನ್ ಬಗ್ಗೆ ದುನಿಯಾ ವಿಜಯ್ ಮಾತನಾಡಿದ್ದಾರೆ. ‘ಲಾಕ್ ಡೌನ್ ಪ್ರಾಮಾಣಿಕವಾಗಿ ಆಗಲಿ. ಇದರಲ್ಲಿ ರಾಜಕೀಯದ ದುರುಪಯೋಗ ಬೇಡ. ತುಂಬಾ ಜನ ಈಗ ತಾನೇ ಬಡವರು ಸುಧಾರಿಸಿಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ನನ್ನ ಮನವಿ. ನಿಮ್ಮ ಸೌಲಭ್ಯಗಳಿಗೆ ಜನಗಳನ್ನು ಬಲಿಪಶು ಮಾಡಬೇಡಿ. ಅಕ್ಕಿ ಕೊಟ್ಟಿದ್ದಾರೆ. ಕೆಲವರಿಗೆ ಸಿಕ್ಕಿದೆ, ಕೆಲವರಿಗೆ ಸಿಕ್ಕಿಲ್ಲ. ಈ ತರದ ಅನ್ಯಾಯ ಬೇಡ. ಎಷ್ಟು ಅನ್ಯಾಯ ಆಗಿದೆ ಅಂತ ಜನಗಳಿಗೆ ಗೊತ್ತು. ನಾನು ಯಾವುದೇ ಸರ್ಕಾರನ ಹೋಲಿಸಿ ಮಾತನಾಡುತ್ತಿಲ್ಲ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಇದನ್ನೂ ಓದಿ: ಮದುವೆಗೆ ದುನಿಯಾ ವಿಜಯ್​ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಹಠ ಹಿಡಿದ ಯುವತಿ 

ಟಾಲಿವುಡ್​ಗೆ ಎಂಟ್ರಿ ನೀಡಿದ ದುನಿಯಾ ವಿಜಯ್​; ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ಬಂಪರ್​ ಚಾನ್ಸ್​

Follow us on

Click on your DTH Provider to Add TV9 Kannada