ಮದುವೆಗೆ ದುನಿಯಾ ವಿಜಯ್ ಬರದಿದ್ದರೆ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಹಠ ಹಿಡಿದ ಯುವತಿ
ನವೆಂಬರ್ 29ಕ್ಕೆ ದಾವಣಗೆರೆಯಲ್ಲಿ ಅನುಷಾ ಮದುವೆ ಕಾರ್ಯಕ್ರಮ ನಡೆಯಲಿದೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಅನುಷಾ ಅಭಿಮಾನ ಕಂಡು ಅನೇಕರು ಅಚ್ಚರಿ ಹೊರ ಹಾಕಿದ್ದಾರೆ.
ನಟ ದುನಿಯಾ ವಿಜಯ್ ಅವರು ಮದುವೆಗೆ ಬಂದು ಆಶೀರ್ವಾದ ಮಾಡದಿದ್ದರೆ ತಾಳಿಯೇ ಕಟ್ಟಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿ ಪಟ್ಟು ಹಿಡಿದಿರುವ ಘಟನೆ ನಡೆದಿದೆ. ದಾವಣಗೆರೆಯ ರಾಮನಗರದ ಯುವತಿ ಅನುಷಾ ಹಾಗೂ ಅವರ ತಂದೆ ದುನಿಯಾ ವಿಜಯ್ ಅವರ ದೊಡ್ಡ ಅಭಿಮಾನಿ. ಮನೆ ಕಟ್ಟಿಸಿದಾಗ ದುನಿಯಾ ವಿಜಯ್ ಅವರಿಂದಲೇ ಅನುಷಾ ತಂದೆ ಶಿವಾನಂದ ಮನೆ ಗೃಹಪ್ರವೇಶ ಮಾಡಿಸಿದ್ದರು. ಮನೆಗೆ ‘ದುನಿಯಾ ಋಣ’ ಎಂದು ಹೆಸರಿಡಲಾಗಿದೆ. ಈಗ ಮದುವೆಗೆ ವಿಜಯ್ ಆಗಮಿಸಬೇಕು ಎಂದು ಅನುಷಾ ಕುಟುಂಬದವರು ಪಟ್ಟು ಹಿಡಿದಿದ್ದಾರೆ. ದುನಿಯಾ ವಿಜಯ್ ಕಂಡರೆ ಅನುಷಾಗೆ ಬಹಳ ಅಭಿಮಾನ. ಈ ಕಾರಣಕ್ಕೆ ಅವರು ಒಂಟಿ ಸಲಗ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದೇ 29ಕ್ಕೆ ದಾವಣಗೆರೆಯಲ್ಲಿ ಅನುಷಾ ಮದುವೆ ಕಾರ್ಯಕ್ರಮ ನಡೆಯಲಿದೆ. ಸದ್ಯ, ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಅನುಷಾ ಅಭಿಮಾನ ಕಂಡು ಅನೇಕರು ಅಚ್ಚರಿ ಹೊರ ಹಾಕಿದ್ದಾರೆ.
ಇದನ್ನೂ ಓದಿ: ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್ಕುಮಾರ್
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ

