ಈ ವರ್ಷ ಭಾರತದಲ್ಲಿ ತನ್ನ ಬೇಸ್ ವಿಸ್ತರಿಸಿಕೊಂಡು ಹೆಚ್ಚು ಸಂಖ್ಯೆ ಕಾರುಗಳನ್ನು ಮಾರಾಟ ಮಾಡುವ ಶಪಥಗೈದಿದೆ ಲ್ಯಾಂಬೊಜಿನಿ ಸಂಸ್ಥೆ!
ಭಾರತೀಯ ಆಟೊಮೊಬೈಲ್ ಮಾರ್ಕೆಟ್ ಸಂಬಂಧಿಸಿದಂತೆ ಹೇಳುವುದಾದರೆ, ಲ್ಯಾಂಬೊಜಿನಿ ಉರಸ್ ಅತ್ಯಂತ ಜನಪ್ರಿಯ ಎಸ್ ಯು ವಿ ಎನಿಸಿದರೆ, ಅವೆಂಟೇಡರ್ ಮಾಡೆಲ್ ಟಾಪ್ ಲಕ್ಸುರಿ ಕಾರು ಆಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಲ್ಯಾಂಬೊಜಿನಿ ಸಂಸ್ಥೆಯು ಭಾರತದಲ್ಲಿ ತನ್ನ ಅಸ್ತಿತ್ವವನ್ನು 2022 ರಲ್ಲಿ ಹೆಚ್ಚಿಸುವ ಪ್ರಯತ್ನ ಮಾಡಲಿದೆ.
ಲ್ಯಾಂಬೊಜಿನಿ ಕಾರುಗಳ ಬಗ್ಗೆ ನೀವು ಕೇಳಿದ್ದೀರಿ ಮತ್ತು ರಸ್ತೆ ಮೇಲೆ ಸುಂಯ್ಯ್ ಅಂತ ಶರವೇಗದಲ್ಲಿ ಓಡುವುದನ್ನು ನೋಡಿರಲೂಬಹುದು. ನೋಡಿರಬಹುದು ಅಂತ ನಾವು ಹೇಳುತ್ತಿರುವುದರ ಹಿಂದೆ ಕಾರಣವಿದೆ. ಲ್ಯಾಂಬೊಜಿನಿ ಕಾರುಗಳು ಭಾರತದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ಇವೆ. ನಿಮಗೆ ಆಶ್ಚರ್ಯವಾಗಬಹುದು. 2019 ರಲ್ಲಿ ಕಂಪನಿ ಭಾರತದಲ್ಲಿ ಮಾರಾಟ ಮಾಡಿದ್ದು ಕೇವಲ 52 ಕಾರು ಮಾತ್ರ. 2020 ರಲ್ಲಿ ಎಷ್ಟು ಲ್ಯಾಂಬೊಜಿನಿ ಕಾರುಗಳು ಮಾರಾಟವಾದವು ಎನ್ನುವುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಹಾಗೆಯೇ ಕಳೆದ ವರ್ಷ ಅಂದರೆ 2021 ರಲ್ಲಿ ಎಷ್ಟು ಕಾರು ಮಾರಾಟವಾಗಿವೆ ಎಂಬ ಮಾಹಿತಿಯನ್ನು ಕೆಲದಿನಗಳ ನಂತರ ಬಹಿರಂಗಗೊಳಿಸುವುದಾಗಿ ಅದು ಹೇಳಿದೆ. ಮಾರಾಟ ಸಂಖ್ಯೆ ಮೂರಂಕಿ ದಾಟಿರುವ ವಿಶ್ವಾಸವನ್ನು ಕಂಪನಿ ವ್ಯಕ್ತಪಡಿಸಿದೆ.
ಭಾರತದ ಮಾರ್ಕೆಟ್ ಲಭ್ಯವಿರುವ ಅತ್ಯಂತ ದುಬಾರಿ ಕಾರುಗಳಲ್ಲಿ ಲ್ಯಾಂಬೊಜಿನಿ ಸಹ ಒಂದು. ಇದರ ಮೂರು ಮಾಡೆಲ್ಗಳು ಇಂಡಿಯನಲ್ಲಿ ಸಿಗುತ್ತವೆ. ಲ್ಯಾಂಬೊಜಿನಿ ಉರಸ್ ಮಾಡೆಲ್ ಬೆಲೆ ರೂ. 3.15 ಕೋಟಿ ಆದರೆ, ಅವೆಂಟೇಡರ್ ಮಾಡೆಲ್ ಬೆಲೆ ರೂ. 6.25 ಕೋಟಿಯಾಗಿದೆ. ಇವೆರಡರ ನಡುವಿನ ಲ್ಯಾಂಬೊಜಿನಿ ಹುರಾಕಾನ್ ಕಾರಿನ ಬೆಲೆ ರೂ. 3.21 ರಿಂದ ರೂ. 4.99 ಕೋಟಿವರೆಗೆ ಇದೆ. ಇವು ಮೂರು ಪೆಟ್ರೋಲ್ನಿಂದ ಓಡುವ ಕಾರುಗಳು.
ಭಾರತೀಯ ಆಟೊಮೊಬೈಲ್ ಮಾರ್ಕೆಟ್ ಸಂಬಂಧಿಸಿದಂತೆ ಹೇಳುವುದಾದರೆ, ಲ್ಯಾಂಬೊಜಿನಿ ಉರಸ್ ಅತ್ಯಂತ ಜನಪ್ರಿಯ ಎಸ್ ಯು ವಿ ಎನಿಸಿದರೆ, ಅವೆಂಟೇಡರ್ ಮಾಡೆಲ್ ಟಾಪ್ ಲಕ್ಸುರಿ ಕಾರು ಆಗಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಲ್ಯಾಂಬೊಜಿನಿ ಸಂಸ್ಥೆಯು ಭಾರತದಲ್ಲಿ ತನ್ನ ಅಸ್ತಿತ್ವವನ್ನು 2022 ರಲ್ಲಿ ಹೆಚ್ಚಿಸುವ ಪ್ರಯತ್ನ ಮಾಡಲಿದೆ.
ಇಟಲಿ ಮೂಲದ ಲ್ಯಾಂಬೊಜಿನಿ ಕಂಪನಿಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ 2021 ರಲ್ಲಿ ಏಷ್ಯಾ-ಪೆಸಿಫಿಕ್ ಪ್ರಾಂತ್ಯದಲ್ಲಿ ಕಂಪನಿಯ ಕಾರುಗಳ ಮಾರಾಟ ಶೇಕಡಾ 8 ರಷ್ಟು ಹೆಚ್ಚಾಗಿಯಂತೆ. ಹಾಗಾಗಿ ಭಾರತದಲ್ಲೂ ತನ್ನ ಬೇಸ್ ಅನ್ನು ವಿಸ್ತರಿಸಿಕೊಳ್ಳುವ ಇರಾದೆ ಕಂಪನಿಗಿದೆ.
ಇದನ್ನೂ ಓದಿ: Viral Video: ಕೊವಿಡ್ ಉಲ್ಬಣದ ಆತಂಕದ ನಡುವೆಯೇ ಗೋವಾ ಬೀಚ್‌ನಲ್ಲಿ ಮುಗಿಬಿದ್ದ ಜನರು; ವಿಡಿಯೋ ವೈರಲ್