ಜನವರಿ ಅಂತ್ಯಕ್ಕೆ ದಕ್ಷಿಣ ಭಾರತಕ್ಕೆ ಬರಲಿದ್ದಾರೆ ಸಲ್ಮಾನ್ ಖಾನ್; ಇದಕ್ಕಿದೆ ಮಹತ್ವದ ಕಾರಣ
ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಆದಾಗ್ಯೂ ಚಿತ್ರತಂಡಗಳು ಸೂಕ್ತ ಮುಂಜಾಗೃತ ಕ್ರಮ ಕೈಗೊಂಡು ಶೂಟಿಂಗ್ ನಡೆಸುತ್ತಿವೆ. ‘ಗಾಡ್ಫಾದರ್’ ತಂಡ ಕೂಡ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಆಗಿದೆ. ಜನವರಿ ಅಂತ್ಯದ ವೇಳೆ ಹೊಸ ಶೆಡ್ಯೂಲ್ ಆರಂಭವಾಗುವ ನಿರೀಕ್ಷೆ ಇದೆ.
ಮೆಗಾಸ್ಟಾರ್ ಚಿರಂಜೀವಿ 153ನೇ ಸಿನಿಮಾ ‘ಗಾಡ್ಫಾದರ್’ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಮಲಯಾಳಂನ ಸೂಪರ್ ಹಿಟ್ ಚಿತ್ರ ‘ಲೂಸಿಫರ್’ ರಿಮೇಕ್ ಇದಾಗಿದೆ. ಈ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಮೋಹನ್ಲಾಲ್ ನಟನೆಯ ‘ಲೂಸಿಫರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಪೃಥ್ವಿರಾಜ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ಲಾಲ್ಗೆ ಸಹಾಯ ಮಾಡುವ ಡಾನ್ ಪಾತ್ರ ಇದಾಗಿತ್ತು. ಅವರು ತೆರೆಮೇಲೆ ಕಾಣಿಸೋದು ಕಡಿಮೆಯಾದರೂ ಇಡೀ ಚಿತ್ರದಲ್ಲಿ ತುಂಬಾನೇ ಮುಖ್ಯ ಎನಿಸಿಕೊಳ್ಳುತ್ತದೆ ಆ ಪಾತ್ರ. ತೆಲುಗಿನಲ್ಲಿ ಸಲ್ಲು ಈ ಪಾತ್ರದಲ್ಲಿ ನಟಿಸಲಿದ್ದಾರೆ. ಈಗ ಈ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಒಂದು ಬಂದಿದೆ.
ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಆದಾಗ್ಯೂ ಚಿತ್ರತಂಡಗಳು ಸೂಕ್ತ ಮುಂಜಾಗೃತ ಕ್ರಮ ಕೈಗೊಂಡು ಶೂಟಿಂಗ್ ನಡೆಸುತ್ತಿವೆ. ‘ಗಾಡ್ಫಾದರ್’ ತಂಡ ಕೂಡ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಆಗಿದೆ. ಜನವರಿ ಅಂತ್ಯದ ವೇಳೆ ಹೊಸ ಶೆಡ್ಯೂಲ್ ಆರಂಭವಾಗುವ ನಿರೀಕ್ಷೆ ಇದೆ. ಇದರಲ್ಲಿ ಸಲ್ಮಾನ್ ಖಾನ್ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
‘ಹಿಂದಿ ಬಿಗ್ ಬಾಸ್ 15’ ಕೊನೆಯ ಹಂತಕ್ಕೆ ಬಂದು ನಿಂತಿದೆ. ಸಲ್ಮಾನ್ ಖಾನ್ ಅವರು ಇದರ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದರೂ ವಾರಾಂತ್ಯಕ್ಕೆ ಅವರು ಮುಂಬೈಗೆ ಮರಳಬೇಕು. ಜನವರಿ ಅಂತ್ಯದ ವೇಳೆಗೆ ಈ ಶೋ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ, ಸಂಪೂರ್ಣ ಸಮಯವನ್ನು ಸಲ್ಮಾನ್ ಖಾನ್ ಶೂಟಿಂಗ್ನಲ್ಲಿ ಕಳೆಯಬಹುದು. ‘ಗಾಡ್ಫಾದರ್’ನಲ್ಲಿ ತಮ್ಮ ಭಾಗದ ಶೂಟಿಂಗ್ ಮುಗಿಸಿಯೇ ಅವರು ಮುಂಬೈಗೆ ಮರಳಬಹುದು.
ಸಲ್ಮಾನ್ ಖಾನ್ ಹಾಗೂ ಚಿರುಗೋಸ್ಕರ ವಿಶೇಷ ಸಾಂಗ್ ಮಾಡೋಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಮೂಲ ಸಿನಿಮಾ ‘ಲೂಸಿಫರ್’ನಲ್ಲಿ ಈ ರೀತಿಯ ಸಾಂಗ್ ಇಲ್ಲ. ಆದರೆ, ಸಲ್ಲು ಬಾಲಿವುಡ್ ಅಂಗಳದಿಂದ ದಕ್ಷಿಣಕ್ಕೆ ಬರುವ ಕಾರಣಕ್ಕೆ ಚಿತ್ರತಂಡ ಈ ಆಲೋಚನೆ ಮಾಡಿದೆ. ತಮನ್ ಈ ಸಿನಿಮಾ ಸಂಗೀತ ಸಂಯೋಜನೆ ಮಾಡುತ್ತಿದ್ದು, ವಿದೇಶಿ ಗಾಯಕರನ್ನು ತರುವ ಆಲೋಚನೆಯಲ್ಲಿದ್ದಾರೆ. ಆದರೆ, ಈ ಆಲೋಚನೆಯನ್ನು ಸಲ್ಮಾನ್ ಖಾನ್ ತಿರಸ್ಕರಿಸಿದ್ದಾರೆ ಎಂದು ವರದಿ ಆಗಿತ್ತು. ಬಾಲಿವುಡ್ನ ಸಾಕಷ್ಟು ಸಿಂಗರ್ಗಳು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರು ದಕ್ಷಿಣಕ್ಕೆ ಬಂದಿಲ್ಲ. ವಿದೇಶಿ ಸಿಂಗರ್ಗಳಿಗೆ ಹೆಚ್ಚಿನ ಹಣ ನೀಡಿ ಅವರನ್ನು ಕರೆ ತರುವ ಬದಲು, ಬಾಲಿವುಡ್ ಮಂದಿಯನ್ನೇ ಕರೆತರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿತ್ತು.
ಇದನ್ನೂ ಓದಿ: Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ
ಬಿಗ್ ಬಾಸ್ ಸ್ಪರ್ಧಿಗೆ ಕೊವಿಡ್ ಪಾಸಿಟಿವ್? ಅರ್ಧಕ್ಕೆ ಕೊನೆಯಾಗಲಿದೆ ಸಲ್ಲು ಶೋ?