ಹೆಚ್ಚಿತು 20 ಕೆ.ಜಿ. ದೇಹದ ತೂಕ; ವೇಟ್ ಲಾಸ್​ಗಾಗಿ 15 ದಿನ ಉಪವಾಸ ಮಾಡಿದ ಆಮಿರ್ ಖಾನ್ ಮಗಳು

ಇರಾ ಖಾನ್​ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ದೇಹದ ತೂಕ ಈ ಪರಿ ಹೆಚ್ಚಿರುವುದಕ್ಕೆ ಅವರಿಗೆ ಬೇಸರ ಇದೆ. ಅಲ್ಲದೆ, ತೂಕ ಇಳಿಸೋಕೆ ಅವರು ಪಣ ತೊಟ್ಟಿದ್ದಾರೆ.

ಹೆಚ್ಚಿತು 20 ಕೆ.ಜಿ. ದೇಹದ ತೂಕ; ವೇಟ್ ಲಾಸ್​ಗಾಗಿ 15 ದಿನ ಉಪವಾಸ ಮಾಡಿದ ಆಮಿರ್ ಖಾನ್ ಮಗಳು
ಇರಾ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 11, 2022 | 8:58 AM

ಸ್ಟಾರ್​ ನಟರ ಮಕ್ಕಳ ಎಂದರೆ ಅಭಿಮಾನಿಗಳು ಒಂದು ಕಣ್ಣು ಇಟ್ಟಿರುತ್ತಾರೆ. ಅವರು ಏನು ಮಾಡುತ್ತಾರೆ? ಅವರ ದಿನಚರಿ ಏನು? ಯಾವ ರೀತಿಯ ಬಟ್ಟೆ ತೊಡುತ್ತಾರೆ, ಹೀಗೆ ಪ್ರತಿ ವಿಚಾರವನ್ನೂ ಗಮನಿಸುತ್ತಾರೆ. ಇನ್ನು, ಮಾಡುವ ಸಣ್ಣ ತಪ್ಪಿಗೆ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದಿದೆ. ಕೆಲವರು ಬಾಡಿ ಶೇಮಿಂಗ್​ ಎದುರಿಸಿದ ಘಟನೆಯೂ ಇದೆ. ಆಮಿರ್ ಖಾನ್ (Aamir Khan) ಮಗಳು ಇರಾ ಖಾನ್​ (Ira Khan) ಕೂಡ ಇದೇ ರೀತಿಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮಾನಸಿಕವಾಗಿ ಅವರು ತುಂಬಾನೇ ಕುಗ್ಗಿದ್ದಾರೆ. ಈ ಕಾರಣಕ್ಕೆ ಹೆಚ್ಚು ಆ್ಯಕ್ಟೀವ್​ ಆಗಿರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರ ದೇಹದ ತೂಕ ಬರೋಬ್ಬರಿ 20 ಕೆ.ಜಿ. ಹೆಚ್ಚಿದೆ. ಈ ಬಗ್ಗೆ ಅವರೇ ಬರೆದುಕೊಂಡಿದ್ದಾರೆ.

ಇರಾ ಖಾನ್​ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ದೇಹದ ತೂಕ ಈ ಪರಿ ಹೆಚ್ಚಿರುವುದಕ್ಕೆ ಅವರಿಗೆ ಬೇಸರ ಇದೆ. ಅಲ್ಲದೆ, ತೂಕ ಇಳಿಸೋಕೆ ಅವರು ಪಣ ತೊಟ್ಟಿದ್ದಾರೆ. ದೇಹದ ತೂಕ ಏಕಾಏಕಿ ಇಳಿಯುವುದಿಲ್ಲ. ಅದಕ್ಕೆ ಸಾಕಷ್ಟು ಶ್ರಮ ಹಾಕಬೇಕು. ಈ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ.

‘ನನ್ನ ಜೀವನದ ಬಹುಪಾಲು ನಾನು ತುಂಬಾ ಸಕ್ರಿಯಳಾಗಿದ್ದೆ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ನನ್ನಲ್ಲಿ ಆಲಸ್ಯ ಹೊಕ್ಕಿದೆ. ನಾನು ಗೊಂದಲದಲ್ಲಿದ್ದೇನೆ. ಈ ಎಲ್ಲಾ ಕಾರಣದಿಂದ ದೇಹದ ತೂಕ 20 ಕೆ.ಜಿ. ಹೆಚ್ಚಿದೆ. ತೂಕ ಇಳಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸಿದ್ದೇನೆ. ನನಗೆ ಏನೆಲ್ಲ ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ. ಹೆಚ್ಚು ಶ್ರಮ ಹಾಕುತ್ತಿದ್ದೇನೆ. ನಾನು ಇತ್ತೀಚೆಗೆ 15 ದಿನಗಳ ಕಾಲ ಉಪವಾಸ ಮಾಡಿದ್ದೆ. ತೂಕ ಇಳಿಸಿಕೊಳ್ಳೋಕೆ ಸಾಕಷ್ಟು ಶ್ರಮ ಬೇಕು’ ಎಂದಿದ್ದಾರೆ ಅವರು.

View this post on Instagram

A post shared by Ira Khan (@khan.ira)

1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್​ ಖಾನ್​ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು (ಪುತ್ರ ಜುನೈದ್​, ಪುತ್ರಿ ಇರಾ) ಜನಿಸಿದರು. 2002ರಲ್ಲಿ ಆಮಿರ್​ ಮತ್ತು ರೀನಾ ಡಿವೋರ್ಸ್​ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು. ಮೊದಲ ಪತ್ನಿಯ ಮಕ್ಕಳ ಜೊತೆ ಆಮಿರ್​ ಖಾನ್​ ಇಂದಿಗೂ ಚೆನ್ನಾಗಿಯೇ ಇದ್ದಾರೆ. ರೀನಾ ದತ್ತಾ ಜತೆ ವಿಚ್ಛೇದನ ಪಡೆದ ನಂತರದಲ್ಲಿ ಆಮಿರ್​ ಖಾನ್​ ಕಿರಣ್​ ರಾವ್​ ಅವರನ್ನು ಮದುವೆ ಆಗಿದ್ದರು. ಕಳೆದ ವರ್ಷ ಇಬ್ಬರೂ ಬೇರೆ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು.

ಇದನ್ನೂ ಓದಿ: ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ

ಬಾಯ್​ಫ್ರೆಂಡ್​ ಬಗ್ಗೆ ಹೊಸ ದೂರು ತಂದ ಆಮಿರ್ ಖಾನ್​ ಮಗಳು ಇರಾ ಖಾನ್​

Published On - 8:58 am, Tue, 11 January 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ