ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ

ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ
ಆಮಿರ್​ ಖಾನ್​, ಫಾತಿಮಾ ಸನಾ ಶೇಕ್​, ಕಿರಣ್​ ರಾವ್​,

Aamir Khan Fatima Sana Shaikh Viral Photo: ಆಮಿರ್​ ಖಾನ್​ ಮತ್ತು ಫಾತಿಮಾ ಸನಾ ಶೇಕ್​ ಅವರು ಆಪ್ತವಾಗಿದ್ದಾರೆ ಎಂಬುದು ನಿಜ. ಆ ಕಾರಣಕ್ಕಾಗಿ ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗಾಸಿಪ್​ ಈ ಮೊದಲೇ ಕೇಳಿಬಂದಿತ್ತು.

TV9kannada Web Team

| Edited By: Madan Kumar

Dec 24, 2021 | 2:03 PM

ನಟ ಆಮಿರ್​ ಖಾನ್​ (Aamir Khan) ಅವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಿವೆ. ಕಿರಣ್​ ರಾವ್ (Kiran Rao)​ ಅವರಿಗೆ ವಿಚ್ಛೇದನ ನೀಡಿ, 15 ವರ್ಷಗಳ ದಾಂಪತ್ಯಕ್ಕೆ ಅಂತ್ಯಹಾಡಿದ ಬಳಿಕ ಅವರು ಬೇರೊಂದು ನಟಿಯ ಜತೆ ಸುತ್ತುತ್ತಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಆ ನಟಿ ಬೇರಾರೂ ಅಲ್ಲ, ಫಾತಿಮಾ ಸನಾ ಶೇಕ್. ಬ್ಲಾಕ್​ಬಸ್ಟರ್​ ಹಿಟ್​ ಆದ ‘ದಂಗಲ್​’ (Dangal Movie) ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ಫಾತಿಮಾ ಸನಾ ಶೇಕ್​ (Fatima Sana Shaikh) ಅವರು ತಂದೆ-ಮಗಳ ಪಾತ್ರ ಮಾಡಿದ್ದರು. ಈಗ ಅವರಿಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿದೆ. ಅದಕ್ಕೆ ಕಾರಣ ಆಗಿರುವುದು ಒಂದು ನಕಲಿ ಫೋಟೋ! ಸದ್ಯಕ್ಕಂತೂ ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ಸಖತ್​ ವೈರಲ್​ ಆಗಿದೆ.

ಆಮಿರ್​ ಖಾನ್​ ಮತ್ತು ಫಾತಿಮಾ ಸನಾ ಶೇಕ್​ ಅವರು ಆಪ್ತವಾಗಿದ್ದಾರೆ ಎಂಬುದು ನಿಜ. ಆ ಕಾರಣಕ್ಕಾಗಿ ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗಾಸಿಪ್​ ಈ ಮೊದಲೇ ಕೇಳಿಬಂದಿತ್ತು. ಅದನ್ನು ಫಾತಿಮಾ ಅವರು ತಿರಸ್ಕರಿಸಿದ್ದರು ಕೂಡ. ಆದರೂ ಗಾಳಿಸುದ್ದಿ ನಿಂತಿಲ್ಲ. ಇತ್ತೀಚೆಗೆ ಒಂದು ಫೋಟೋದಲ್ಲಿ ಆಮಿರ್​ ಖಾನ್​ ಮತ್ತು ಫಾತಿಮಾ ಜೊತೆಯಾಗಿ ಪೋಸ್​ ನೀಡಿದ್ದು ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಆದರೆ ಅದು ಫೇಕ್​ ಫೋಟೋ ಎಂಬುದು ಕೆಲವೇ ನಿಮಿಷಗಳಲ್ಲಿ ಬಯಲಾಯಿತು. ಅಷ್ಟರಲ್ಲಾಗಲೇ ಅದು ವೈರಲ್​ ಆಗಿತ್ತು.

ಈ ಹಿಂದೆ ಆಮಿರ್​ ಖಾನ್​ ಮತ್ತು ಕಿರಣ್​ ರಾವ್​ ಅವರು ಸಮಾರಂಭವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಫೋಟೋವನ್ನೇ ಎಡಿಟ್​ ಮಾಡಲಾಗಿದೆ. ಕಿರಣ್​ ರಾವ್​ ಮುಖದ ಬದಲಿಗೆ ಫಾತಿಮಾ ಸನಾ ಶೇಕ್​ ಮುಖವನ್ನು ಎಡಿಟ್​ ಮಾಡಿ ಹರಿಬಿಡಲಾಗಿದೆ. ಅಲ್ಲದೇ ಅವರಿಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿಯನ್ನೂ ಹಬ್ಬಿಸಲಾಗಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸದ ಕೆಲವರು ಇದನ್ನು ನಿಜ ಎಂದೇ ನಂಬಿದ್ದಾರೆ.

ಈ ವೈರಲ್​ ಫೋಟೋ ಬಗ್ಗೆ ಆಮಿರ್​ ಖಾನ್​ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಮೂರನೇ ಪತ್ನಿಯಾಗಿ ಯಾರು ಬರುತ್ತಾರೆ ಎಂಬ ಕೌತುಕ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿದೆ. ಸದ್ಯ ಅವರು ‘ಲಾಲ್​ ಸಿಂಗ್​ ಚೆಡ್ಡಾ’ ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಕರೀನಾ ಕಪೂರ್​​ ಖಾನ್​ ಅಭಿನಯಿಸಿದ್ದಾರೆ. 2022ರ ಏಪ್ರಿಲ್​ 14ರಂದು ಆ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ

ಆಮಿರ್​ ಖಾನ್​ 3ನೇ ಮದುವೆ ಬಗ್ಗೆ ಬಿಗ್​ ನ್ಯೂಸ್​; ಅಧಿಕೃತವಾಗಿ ಘೋಷಣೆ ಯಾವಾಗ?

Follow us on

Related Stories

Most Read Stories

Click on your DTH Provider to Add TV9 Kannada