ಆಮಿರ್​ ಖಾನ್​ 3ನೇ ಮದುವೆ ಬಗ್ಗೆ ಬಿಗ್​ ನ್ಯೂಸ್​; ಅಧಿಕೃತವಾಗಿ ಘೋಷಣೆ ಯಾವಾಗ?

Aamir Khan 3rd marriage: ಬಹುನಿರೀಕ್ಷಿತ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರ ರಿಲೀಸ್​ ಆದ ಕೂಡಲೇ ಆಮಿರ್​ ಖಾನ್​ 3ನೇ ಮದುವೆ ಬಗ್ಗೆ ಬಾಯಿ ಬಿಡಲಿದ್ದಾರೆ ಎನ್ನಲಾಗುತ್ತಿದೆ.

ಆಮಿರ್​ ಖಾನ್​ 3ನೇ ಮದುವೆ ಬಗ್ಗೆ ಬಿಗ್​ ನ್ಯೂಸ್​; ಅಧಿಕೃತವಾಗಿ ಘೋಷಣೆ ಯಾವಾಗ?
ಆಮಿರ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 22, 2021 | 9:26 AM

ಸೆಲೆಬ್ರಿಟಿಗಳ ದುನಿಯಾದಲ್ಲಿ ಲವ್​, ಬ್ರೇಕಪ್​, ಮದುವೆ, ವಿಚ್ಛೇದನ ಮುಂತಾದ ವಿಚಾರಗಳೆಲ್ಲ ತುಂಬ ಕಾಮನ್​ ಎಂಬಂತಾಗಿದೆ. ಹಾಗಿದ್ದರೂ ಕೂಡ ಕೆಲವು ಜೋಡಿಗಳ ನಡುವೆ ಬ್ರೇಕಪ್​ ಅಥವಾ ವಿಚ್ಛೇದನ ಆದಾಗ ಶಾಕ್​ ಆಗುತ್ತದೆ. ನಟ ಆಮಿರ್​ ಖಾನ್​ (Aamir Khan) ಅವರು ಪತ್ನಿ ಕಿರಣ್ ರಾವ್​ಗೆ (Kiran Rao) ಡಿವೋರ್ಸ್​ ನೀಡಿದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. 15 ವರ್ಷಗಳ ದಾಂಪತ್ಯ ಜೀವನದಲ್ಲಿ ಯಾವುದೇ ಕಿರಿಕ್​ ಮಾಡಿಕೊಳ್ಳದ ಅವರು ಹೀಗೆ ಏಕಾಏಕಿ ವಿಚ್ಛೇದನ ಘೋಷಿಸಿದ್ದು ಯಾಕೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಡಿವೋರ್ಸ್​ ಪಡೆದು ಐದಾರು ತಿಂಗಳು ಕಳೆಯುವುದರೊಳಗೆ ಇನ್ನೋರ್ವ ನಟಿಯ ಜೊತೆ ಆಮಿರ್​ ಖಾನ್​ ಹೆಸರು ಕೇಳಿಬರುತ್ತಿದೆ. ತಮ್ಮ ಸಿನಿಮಾದ ಸಹ-ನಟಿಯ ಜೊತೆಗೆ ಆಮಿರ್​ ಮೂರನೇ ಮದುವೆ (Aamir Khan 3rd marriage) ಆಗುತ್ತಾರೆ ಎಂಬ ಸುದ್ದಿ ಜೋರಾಗಿ ಹಬ್ಬಿದೆ. ಶೀಘ್ರವೇ ಅವರು ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ. 

ಸಹ ನಟಿಯೊಬ್ಬರನ್ನು ಮದುವೆ ಆಗುವ ಸಲುವಾಗಿಯೇ ಕಿರಣ್​ ರಾವ್​ಗೆ ಆಮಿರ್​ ಖಾನ್​ ವಿಚ್ಛೇದನ ನೀಡಿದರು ಎಂಬ ಸುದ್ದಿ ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಈಗ ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಅಲ್ಲದೇ, ಆಮಿರ್​ ಖಾನ್​ ತಮ್ಮ ಮೂರನೇ ಮದುವೆಯ ಬಗ್ಗೆ ಯಾವಾಗ ಅಧಿಕೃತ ಘೋಷಣೆ ಮಾಡುತ್ತಾರೆ ಎಂಬ ಸುಳಿವು ಕೂಡ ಸಿಕ್ಕಿದೆ. ಆಮಿರ್ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಚಿತ್ರ ರಿಲೀಸ್​ ಆದ ಕೂಡಲೇ ಅವರು 3ನೇ ಮದುವೆ ಬಗ್ಗೆ ಬಾಯಿ ಬಿಡಲಿದ್ದಾರೆ ಎನ್ನಲಾಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ಡಿಸೆಂಬರ್​ನಲ್ಲೇ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರದ ರಿಲೀಸ್​ ಡೇಟ್​ ಮುಂದಕ್ಕೆ ಹೋಗಿದೆ. ಈಗ ಆಮಿರ್​ ಖಾನ್​ ಈ ಚಿತ್ರದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ ಅವರು ಚಿತ್ರದ ಪ್ರಚಾರಕ್ಕಾಗಿ ಹೆಚ್ಚು ಸಮಯ ಮತ್ತು ಗಮನ ನೀಡಬೇಕಿದೆ. ಈ ಸಂದರ್ಭದಲ್ಲಿ 3ನೇ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡರೆ ಮಾಧ್ಯಮಗಳಲ್ಲಿ ಸಿನಿಮಾಗಿಂತಲೂ ಮದುವೆ ಸುದ್ದಿಯೇ ಹೆಚ್ಚು ರಾರಾಜಿಸುತ್ತದೆ. ಅದರಿಂದ ಸಿನಿಮಾದ ಪ್ರಚಾರಕ್ಕೆ ಪೆಟ್ಟು ಬೀಳಲಿದೆ. ಹಾಗಾಗಿ ‘ಲಾಲ್​ ಸಿಂಗ್​ ಚಡ್ಡಾ’ ಬಿಡುಗಡೆ ಆದ ಕೂಡಲೇ ಅವರು 3ನೇ ಮದುವೆ ನಗ್ಗೆ ಬ್ರೇಕಿಂಗ್​ ನ್ಯೂಸ್​ ನೀಡಲಿದ್ದಾರೆ ಎಂಬ ಗಾಸಿಪ್​ ಹರಿದಾಡುತ್ತಿದೆ.

ಈ ಯಾವ ವಿಚಾರಗಳ ಬಗ್ಗೆಯೂ ಆಮಿರ್​ ಖಾನ್​ ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಅವರು ಯಾವ ನಟಿ ಜೊತೆ ಮದುವೆ ಆಗಬಹುದು ಎಂಬ ಕುತೂಹಲದ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ.​

ಇದನ್ನೂ ಓದಿ:

ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್​ ಖಾನ್​; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್​ ಖಾನ್​​ ಬಿಚ್ಚಿಟ್ಟ ರಹಸ್ಯ

ವಿಚ್ಛೇದನದ ಬಳಿಕ ಸಮಂತಾಗೆ ಶಾರುಖ್​ ಕಡೆಯಿಂದ 2ನೇ ಚಾನ್ಸ್​; ಸ್ಟಾರ್​ ನಟಿಯ ಉತ್ತರ ಏನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ