AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?

ಜಾನ್​ ಅಬ್ರಾಹಂ ವಾಕಿಂಗ್​ ಮಾಡುತ್ತಿದ್ದರು. ಸ್ವಲ್ಪ ಮುಂಭಾಗದಲ್ಲಿ ಇಬ್ಬರು ಫ್ಯಾನ್ಸ್​ ನಿಂತು ವಿಡಿಯೋ ಮಾಡುತ್ತಿದ್ದರು. ಇದು ಜಾನ್​ ಗಮನಕ್ಕೆ ಬಂದಿದೆ. ಅವರು ಶೂಟ್​ ಮಾಡುತ್ತಿದ್ದವರ ಮೊಬೈಲ್​ ಕಸಿದುಕೊಂಡು ಮುಂದೆ ಸಾಗಿದ್ದಾರೆ.

ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?
ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ
Follow us
TV9 Web
| Updated By: ಮದನ್​ ಕುಮಾರ್​

Updated on: Nov 23, 2021 | 9:25 AM

ಕೆಲ ಸೆಲಬ್ರೆಟಿಗಳಿಗೆ ಒಮ್ಮೊಮ್ಮೆ ಅಭಿಮಾನಿಗಳು ಅತಿರೇಕವಾಗಿ ನಡೆದುಕೊಳ್ಳುವುದು ಸ್ವಲ್ಪವೂ ಇಷ್ಟವಾಗುವುದಿಲ್ಲ. ಈ ಬಗ್ಗೆ ಕೆಲವರು ಬಾಯಿಮಾತಿನಲ್ಲಿ ಬುದ್ಧಿ ಹೇಳಿದರೆ, ಕೆಲ ಸೆಲಬ್ರೆಟಿಗಳು ತಮ್ಮ ಸಿಟ್ಟನ್ನು ನೇರವಾಗಿ ಹೊರ ಹಾಕಿದ ಉದಾಹರಣೆಯೂ ಇದೆ. ಬಾಲಿವುಡ್​ ಸ್ಟಾರ್​ ನಟ ಜಾನ್​ ಅಬ್ರಾಹಂ ಈ ರೀತಿ ಸಾಕಷ್ಟು ಬಾರಿ ಮಾಡಿದ ಉದಾಹರಣೆ ಇದೆ. ಈಗ ಅವರು ಇದೆ ರೀತಿ ಮಾಡಿದ್ದಾರೆ. ಜಾನ್​ ಅವರನ್ನು ಅಭಿಮಾನಿಯೋರ್ವ ಮೊಬೈಲ್​ನಲ್ಲಿ ಶೂಟ್​ ಮಾಡುತ್ತಿದ್ದ. ಇದಕ್ಕೆ ಸಿಟ್ಟಾದ ನಟ ಮೊಬೈಲ್ ಕಸಿದುಕೊಂಡಿದ್ದಾರೆ.

ಜಾನ್​ ಅಬ್ರಾಹಂ ವಾಕಿಂಗ್​ ಮಾಡುತ್ತಿದ್ದರು. ಸ್ವಲ್ಪ ಮುಂಭಾಗದಲ್ಲಿ ಇಬ್ಬರು ಫ್ಯಾನ್ಸ್​ ನಿಂತು ವಿಡಿಯೋ ಮಾಡುತ್ತಿದ್ದರು. ಇದು ಜಾನ್​ ಗಮನಕ್ಕೆ ಬಂದಿದೆ. ಅವರು ಶೂಟ್​ ಮಾಡುತ್ತಿದ್ದವರ ಮೊಬೈಲ್​ ಕಸಿದುಕೊಂಡು ಮುಂದೆ ಸಾಗಿದ್ದಾರೆ. ಬೈಕ್​ನಲ್ಲಿದ್ದ ಇಬ್ಬರೂ ಮುಂದೆ ಹೋಗಿ ಮೊಬೈಲ್​ ತೆಗೆದುಕೊಂಡು ಬಂದಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ.

ಜಾನ್​ ಅಬ್ರಾಹಂ ನಟನೆಯ ‘ಸತ್ಯಮೇವ ಜಯತೆ’ ಸಿನಿಮಾ ಹಿಟ್​ ಆಗಿತ್ತು. ಅದರ ಸೀಕ್ವೆಲ್​ ಆಗಿ ‘ಸತ್ಯಮೇವ ಜಯತೆ 2’ ತೆರೆಗೆ ಬರುತ್ತಿದೆ. ಈ ಚಿತ್ರ ನವೆಂಬರ್​ 25ರಂದು ರಿಲೀಸ್​ ಆಗುತ್ತಿದೆ. ಈ ಸಿನಿಮಾದಲ್ಲಿ ಜಾನ್​ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ನವೆಂಬರ್​ 26ರಂದು ಸಲ್ಮಾನ್​ ಖಾನ್​ ನಟನೆಯ ‘ಅಂತಿಮ್​-ದಿ ಫೈನಲ್​ ಟ್ರುತ್​’ ಚಿತ್ರ ರಿಲೀಸ್​ ಆಗುತ್ತಿದೆ. ಹೀಗಾಗಿ ಎರಡು ಸ್ಟಾರ್​ ಸಿನಿಮಾಗಳು ಮುಖಾಮುಖಿ ಆಗುತ್ತಿವೆ.

‘ಅಂತಿಮ್​-ದಿ ಫೈನಲ್​ ಟ್ರುತ್​’ ಸಿನಿಮಾ ದೀಪಾವಳಿಗೆ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾದ ಕೆಲ ದೃಶ್ಯಗಳನ್ನು ರೀಶೂಟ್​ ಮಾಡಲಾಗಿದೆ. ಇದರ ಎಡಿಟಿಂಗ್​ಗೆ ಹೆಚ್ಚು ಸಮಯ ಹಿಡಿದಿದೆ. ಹೀಗಾಗಿ, ನವೆಂಬರ್ 26ಕ್ಕೆ ಸಿನಿಮಾ ರಿಲೀಸ್​ ಮಾಡುವ ಆಲೋಚನೆಯಲ್ಲಿ ಚಿತ್ರತಂಡವಿದೆ. ಈ ಕಾರಣಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಎರಡು ದೊಡ್ಡ ಸಿನಿಮಾಗಳು ಮುಖಾಮುಖಿ ಆಗುತ್ತಿವೆ.

ಇದನ್ನೂ ಓದಿ: RRR ರಿಲೀಸ್​ಗೂ ಮುನ್ನವೇ ಸಲ್ಮಾನ್​ ಖಾನ್​ ಭೇಟಿ ಮಾಡಿದ ರಾಜಮೌಳಿ; ಕೇಳಿ ಬಂತು ಹೊಸ ಅಪ್​ಡೇಟ್​

ಸೋಶಿಯಲ್​ ಮೀಡಿಯಾ ಖಾತೆಗಳನ್ನು ಎನ್​ಜಿಒಗೆ ಹಸ್ತಾಂತರ ಮಾಡಿದ ಜಾನ್​ ಅಬ್ರಹಾಂ; ಕಾರಣವೇನು?

ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?