RRR ರಿಲೀಸ್​ಗೂ ಮುನ್ನವೇ ಸಲ್ಮಾನ್​ ಖಾನ್​ ಭೇಟಿ ಮಾಡಿದ ರಾಜಮೌಳಿ; ಕೇಳಿ ಬಂತು ಹೊಸ ಅಪ್​ಡೇಟ್​

ಜನವರಿ 7ರಂದು ‘ಆರ್​ಆರ್​ಆರ್​’ ಸಿನಿಮಾ ರಿಲೀಸ್​ ಆಗುತ್ತಿದೆ. ಇದಕ್ಕಾಗಿ ಗ್ರ್ಯಾಂಡ್​ ಆಗಿ ಪ್ರೀ ರಿಲೀಸ್​ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ಈ ಕಾರ್ಯಕ್ರಮ ದುಬೈನಲ್ಲಿ ನಡೆಯಲಿದೆ.

RRR ರಿಲೀಸ್​ಗೂ ಮುನ್ನವೇ ಸಲ್ಮಾನ್​ ಖಾನ್​ ಭೇಟಿ ಮಾಡಿದ ರಾಜಮೌಳಿ; ಕೇಳಿ ಬಂತು ಹೊಸ ಅಪ್​ಡೇಟ್​
ರಾಜಮೌಳಿ-ಸಲ್ಮಾನ್​ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 22, 2021 | 3:36 PM

ಎಸ್.​ಎಸ್.​ ರಾಜಮೌಳಿ ಸಿನಿಮಾದಲ್ಲಿ ಅದ್ದೂರಿತನಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಈಗ ಅವರ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ‘ಆರ್​ಆರ್​ಆರ್​’ ಸಿನಿಮಾ ಕೂಡ ಅದ್ದೂರಿಯಾಗಿ ಸಿದ್ಧವಾಗಿದೆ ಎಂಬುದಕ್ಕೆ ಈ ಮೊದಲು ರಿಲೀಸ್​ ಆದ ಟೀಸರ್​ಗಳೇ ಸಾಕ್ಷಿ. ಈಗ ರಾಜಮೌಳಿ ಸಂಪೂರ್ಣವಾಗಿ ‘ಆರ್​ಆರ್​ಆರ್​’ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಪ್ರಚಾರದ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ತಿಂಗಳವನ್ನು ಸಂಪೂರ್ಣವಾಗಿ ಪ್ರಚಾರಕ್ಕೆ ಮೀಸಲಿಡಲು ಅವರು ನಿರ್ಧರಿಸಿದ್ದಾರೆ. ಇದಕ್ಕೂ ಮೊದಲೇ ಸಲ್ಮಾನ್​ ಖಾನ್​ ಅವರನ್ನು ರಾಜಮೌಳಿ ಭೇಟಿ ಮಾಡಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಸಖತ್​ ಎಗ್ಸೈಟ್​ ಆಗಿದ್ದಾರೆ. ಹೊಸ ಸಿನಿಮಾ ಬಗ್ಗೆ ಇವರೇನಾದರೂ ಚರ್ಚೆ ನಡೆಸಿದರೇ ಎನ್ನುವ ಪ್ರಶ್ನೆ ಕೇಳಿಕೊಳ್ಳುತ್ತಿದ್ದಾರೆ.  ಹಾಗಾದರೆ, ಇಬ್ಬರು ದಿಗ್ಗಜರು ಭೇಟಿ ಆಗಿದ್ದೇಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಜನವರಿ 7ರಂದು ‘ಆರ್​ಆರ್​ಆರ್​’ ಸಿನಿಮಾ ರಿಲೀಸ್​ ಆಗುತ್ತಿದೆ. ಇದಕ್ಕಾಗಿ ಗ್ರ್ಯಾಂಡ್​ ಆಗಿ ಪ್ರೀ ರಿಲೀಸ್​ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ ಈ ಕಾರ್ಯಕ್ರಮ ದುಬೈನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಸಲ್ಮಾನ್​ ಖಾನ್​ಗೆ ರಾಜಮೌಳಿ ಆಹ್ವಾನ ನೀಡಿದ್ದಾರೆ. ಸಲ್ಲು ಕೂಡ ಇದಕ್ಕೆ ಓಕೆ ಎಂದಿದ್ದಾರೆ ಎನ್ನಲಾಗುತ್ತಿದೆ.

ಸಲ್ಮಾನ್​ ಖಾನ್​ ಬಾಲಿವುಡ್​ನ ಸ್ಟಾರ್​ ನಟ. ‘ಆರ್​ಆರ್​ಆರ್​’ ಸಿನಿಮಾ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಸಲ್ಲು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದರೆ ‘ಆರ್​ಆರ್​ಆರ್​’ಗೆ ಇರುವ ಹೈಪ್​ ಡಬಲ್​ ಆಗಲಿದೆ. ಈ ಕಾರಣಕ್ಕೆ ಸಲ್ಲುಗೆ ಆಮಂತ್ರಣ ನೀಡಲಾಗಿದೆ. ಸಲ್ಮಾನ್​ ಖಾನ್​ ಜತೆ ದಕ್ಷಿಣ ಭಾರತದ ಕೆಲ ಹೀರೋಗಳಿಗೂ ಆಮಂತ್ರಣ ಸಿಗಲಿದೆ ಎನ್ನಲಾಗುತ್ತಿದೆ.

ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್​ ಆಗುತ್ತಿದೆ ಆರ್​ಆರ್​ಆರ್​

ಅಮೆರಿಕದಲ್ಲಿ ‘ಸಿನಿಮಾರ್ಕ್​ ಮಲ್ಟಿಪ್ಲೆಕ್ಸ್​’ ದೊಡ್ಡ ಉದ್ಯಮವಾಗಿದೆ. ಬಹುತೇಕ ಎಲ್ಲ ‘ಸಿನಿಮಾರ್ಕ್​ ಮಲ್ಟಿಪ್ಲೆಕ್ಸ್​’ಗಳಲ್ಲೂ ‘ಆರ್​ಆರ್​ಆರ್​’ ಚಿತ್ರವನ್ನು ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ. 288 ಮಲ್ಟಿಪ್ಲೆಕ್ಸ್​ಗಳನ್ನೂ ಸೇರಿ ಒಂದು ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಭಾರತೀಯ ಸಿನಿಮಾಕ್ಕೆ ಅಮೆರಿಕದಲ್ಲಿ ಈ ಪರಿ ಓಪನಿಂಗ್​ ಸಿಗುತ್ತಿರುವುದು ನೋಡಿ ಎಲ್ಲರೂ ಕಣ್ಣರಳಿಸುತ್ತಿದ್ದಾರೆ.

ಇದನ್ನೂ ಓದಿ: ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?

ಅಮೆರಿಕದಲ್ಲೂ ‘ಆರ್​​ಆರ್​ಆರ್​’ ಅಬ್ಬರ; ರಾಜಮೌಳಿ ಚಿತ್ರಕ್ಕೆ ಸಿಗುತ್ತಿರುವ ಚಿತ್ರಮಂದಿರಗಳೆಷ್ಟು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ