Best Sports Movies: ಕ್ರೀಡೆಯ ಕುರಿತು ತೆರೆಕಂಡ ಈ ಅದ್ಭುತ ಬಾಲಿವುಡ್ ಚಿತ್ರಗಳನ್ನು ಮಿಸ್ ಮಾಡಲೇಬೇಡಿ

Year Ender 2021: ಬಾಲಿವುಡ್​ನಲ್ಲಿ ಕ್ರೀಡೆ ಅಥವಾ ಕ್ರೀಡಾಪಟುವಿನ ಜೀವನವನ್ನು ತೆರೆಯ ಮೇಲೆ ತರುವ ಟ್ರೆಂಡ್ ಹೊಸದೇನೂ ಅಲ್ಲ. ಇದುವರೆಗಿನ ಅತ್ಯುತ್ತಮ ಚಿತ್ರಗಳ ಪಟ್ಟಿ ತೆಗೆದು ನೋಡಿದರೆ ಅಲ್ಲಿ ಈ ಕೆಳಗಿನ ಪಟ್ಟಿಯ ಹಲವು ಚಿತ್ರಗಳು ಮೊದಲ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ. ಅದಕ್ಕೆ ಕಾರಣ, ನಿರ್ದೇಶಕರು ಹಾಗೂ ಕಲಾವಿದರು ಕಲಾತ್ಮಕವಾಗಿ ಈ ಚಿತ್ರಗಳನ್ನು ಕಟ್ಟಿಕೊಟ್ಟಿರುವುದು. ಈ ಬರಹದಲ್ಲಿ ಎಲ್ಲರೂ ನೋಡಲೇಬೇಕಾದ ಕ್ರೀಡೆ ಅಥವಾ ಕ್ರೀಡಾಪಟುವಿನ ಜೀವನಾಧಾರಿತವಾದ ಚಿತ್ರಗಳ ಪಟ್ಟಿ ನೀಡಲಾಗಿದೆ.

1/9
ಅಮೀರ್ ಖಾನ್ ನಟನೆಯ, ಆಶುತೋಷ್ ಗೌರಿಕೇರ್ ನಿರ್ದೇಶನದ ‘ಲಗಾನ್’ ಚಿತ್ರಪ್ರೇಮಿಗಳ ಮನದಲ್ಲಿ ಹಚ್ಚಹಸಿರಾಗಿರುವ ಚಿತ್ರ. ಮೂರೂ ಮುಕ್ಕಾಲು ಗಂಟೆಯ ಸುದೀರ್ಘ ಅವಧಿಯ ಈ ಚಿತ್ರ ಸ್ವಲ್ಪವೂ ಬೋರ್ ಹೊಡೆಸದೆ ನೋಡುಗನನ್ನು ಆವರಿಸಿಕೊಳ್ಳುತ್ತದೆ ಎಂಬುದೇ ಈ ಚಿತ್ರ ಎಷ್ಟು ಅತ್ಯುತ್ತಮವಾಗಿದೆ ಎಂಬುದಕ್ಕೆ ಉದಾಹರಣೆ.

2/9
ಶಾರುಖ್ ಖಾನ್ ನಟನೆಯ ‘ಚಕ್ ದೇ ಇಂಡಿಯಾ’ವನ್ನು ನಿರ್ದೇಶಿಸಿದವರು ಶಿಮಿತ್ ಅಮಿನ್. 2007ರಲ್ಲಿ ತೆರೆಕಂಡ ಈ ಚಿತ್ರ ಹಲವು ಮಾದರಿಯಲ್ಲಿ ಭಾರತೀಯರನ್ನು ಪ್ರಭಾವಿಸಿತ್ತು ಮತ್ತು ಈಗಲೂ ಪ್ರಭಾವಿಸುತ್ತಿದೆ.

3/9
ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನದ ‘ಭಾಗ್ ಮಿಲ್ಖಾ ಭಾಗ್’ ಚಿತ್ರದಲ್ಲಿ ಮಿಲ್ಖಾ ಸಿಂಗ್ ಪಾತ್ರಕ್ಕೆ ಜೀವ ತುಂಬಿದ್ದು ಫರ್ಹಾನ್ ಅಖ್ತರ್. ಒಲಂಪಿಯನ್ ಹಾಗೂ ಕಾಮನ್​ವೆಲ್ತ್ ಗೇಮ್ಸ್ ಚಾಂಪಿಯನ್ ಮಿಲ್ಖಾ ಸಿಂಗ್ ಅವರ ಜೀವನವನ್ನು ಕಟ್ಟಿಕೊಡುವ ಚಿತ್ರ ಇದಾಗಿದೆ. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದಲ್ಲದೇ, ಬಾಕ್ಸಾಫೀಸ್ ಹಿಟ್ ಕೂಡ ಆಗಿತ್ತು.

4/9
ಮಾತು ಬಾರದ, ಶ್ರವಣ ಶಕ್ತಿ ಕಡಿಮೆಯಿರುವ ಹುಡುಗನೊಬ್ಬ ಭಾರತ ಕ್ರಿಕೆಟ್ ತಂಡಕ್ಕೆ ಆಡುವ ಕನಸು ಕಂಡು, ಅದಕ್ಕೆ ಪ್ರಯತ್ನಿಸುವ ಕತೆ ‘ಇಕ್ಬಾಲ್’ ಚಿತ್ರದ್ದು. ನಾಗೇಶ್ ಕುಕುನೂರ್ ನಿರ್ದೇಶನದ ಈ ಚಿತ್ರದಲ್ಲಿ ನಾಸಿರುದ್ದೀನ್ ಶಾ, ಶ್ರೇಯಸ್ ತಲ್ಪಡೆ, ಗಿರೀಶ್ ಕಾರ್ನಾಡ್ ಮೊದಲಾದವರು ಕಾಣಿಸಿಕೊಂಡಿದ್ದಾರೆ. 2005ರಲ್ಲಿ ತೆರೆಕಂಡ ಈ ಚಿತ್ರ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿತ್ತು.

5/9
ತಿಗ್ಮಾಂಶು ಧೂಲಿಯಾ ನಿರ್ದೇಶನದ ‘ಪಾನ್ ಸಿಂಗ್ ತೋಮರ್’ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರವನ್ನೂ ಪಡೆದಿತ್ತು. ಇರ್ಫಾನ್ ಖಾನ್ ನಟನೆಯ ಈ ಚಿತ್ರ ಸತತ 7 ಬಾರಿ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ವರ್ಣ ವಿಜೇತ ಅಥ್ಲೀಟ್ ಒಬ್ಬ ಡಕಾಯಿತನಾಗುವ ಕತೆ ಹೊಂದಿದೆ.

6/9
ಪ್ರಿಯಾಂಕಾ ಚೋಪ್ರಾ ನಟಿಸಿರುವ ‘ಮೇರಿ ಕೋಮ್’ ಚಿತ್ರ ಭಾರತದ ಹೆಮ್ಮೆಯ ಬಾಕ್ಸರ್ ಮೇರಿ ಕೋಮ್ ಜೀವನಾಧಾರಿತ ಚಿತ್ರವಾಗಿದೆ. ಒಮಂಗ್ ಕುಮಾರ್ ನಿರ್ದೇಶನದ ಈ ಚಿತ್ರ 2014ರಲ್ಲಿ ತೆರೆ ಕಂಡು, ವಿಮರ್ಶಕರಿಂದ, ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿತ್ತು.

7/9
ಕ್ರಿಕೆಟ್ ಕುರಿತು ಇತ್ತೀಚೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಎಂಎಸ್ ಧೋನಿ ಅನ್​ಟೋಲ್ಡ್ ಸ್ಟೋರಿ’. 2016ರಲ್ಲಿ ತೆರೆಕಂಡ ಈ ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದು, ಸುಶಾಂತ್ ಸಿಂಗ್ ರಜಪೂತ್ ಧೋನಿಯ ಪಾತ್ರಕ್ಕೆ ಜೀವ ತುಂಬಿದ್ದರು.

8/9
ಅಮೀರ್ ಖಾನ್ ನಟನೆಯ ಮತ್ತೊಂದು ಮಹೋನ್ನತ ಚಿತ್ರ ‘ದಂಗಲ್’. ಬಾಕ್ಸಾಫೀಸ್​ನಲ್ಲಿ ಬರೋಬ್ಬರಿ 2000 ಕೋಟಿಗೂ ಅಧಿಕ ಕಮಾಯಿ ಮಾಡಿ ಖ್ಯಾತಿಯೂ ಚಿತ್ರಕ್ಕಿದೆ. ಕುಸ್ತಿಪಟುವೊಬ್ಬ ತನ್ನ ಈರ್ವರು ಹೆಣ್ಣುಮಕ್ಕಳನ್ನು ಕುಸ್ತಿ ಸ್ಪರ್ಧೆಗೆ ತಯಾರು ಮಾಡುವ ಕತೆಯನ್ನು ಚಿತ್ರ ಒಳಗೊಂಡಿದೆ.

9/9
ಪ್ರಸ್ತುತ ತೆರೆ ಕಂಡಿರುವ ‘83’ ಚಿತ್ರವು ಭಾರತ 1983ರಲ್ಲಿ ಕ್ರಿಕೆಟ್ ವಿಶ್ವಕಪ್ ಮುಡಿಗೇರಿಸಿಕೊಂಡ ಹಿಂದಿನ ಕತೆಯನ್ನು ತೆರೆದಿಡುತ್ತದೆ. ಎಲ್ಲೆಡೆ ಧನಾತ್ಮಕ ಪ್ರತಿಕ್ರಿಯೆ ಪಡೆಯುತ್ತಿರುವ ಈ ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದು, ದೀಪಿಕಾ ಪಡುಕೋಣೆ ಸೇರಿದಂತೆ ಖ್ಯಾತನಾಮರು ಬಣ್ಣಹಚ್ಚಿದ್ದಾರೆ.

ವಾಸ್ತವವಾಗಿ ಬಾಲಿವುಡ್​ನಲ್ಲಿ ಕ್ರೀಡೆಯ ಕುರಿತಾದ ಚಿತ್ರಗಳ ಪಟ್ಟಿ ಇನ್ನೂ ಮುಂದುವರೆಯುತ್ತದೆ ಎನ್ನಬಹುದು. ಕಾರಣ ಬಾಲಿವುಡ್- ಕ್ರೀಡೆ ಇದು ಮೊದಲಿನಿಂದಲೂ ಒಂದನ್ನೊಂದು ನೆಚ್ಚಿಕೊಂಡಿವೆ. ಆದ್ದರಿಂದಲೇ ಕ್ರೀಡೆಯ ಕುರಿತು ಹಲವಾರು ಚಿತ್ರಗಳು ತಯಾರಾಗಿದ್ದು, ಅವುಗಳಲ್ಲಿ ಆಯ್ದವುಗಳನ್ನಷ್ಟೇ ಮೇಲೆ ನೀಡಲಾಗಿದೆ.

Published On - 4:10 pm, Fri, 24 December 21

Click on your DTH Provider to Add TV9 Kannada