AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಸ್ಪರ್ಧಿಗೆ ಕೊವಿಡ್​ ಪಾಸಿಟಿವ್​? ಅರ್ಧಕ್ಕೆ ಕೊನೆಯಾಗಲಿದೆ ಸಲ್ಲು ಶೋ?

ಬಿಗ್​ ಬಾಸ್​ ಮನೆ ಎಷ್ಟೇ ಸುರಕ್ಷಿತ ಎಂದರೂ, ಅಲ್ಲಿಗೆ ಬರುವ ತರಕಾರಿ, ದಿನಸಿಗಳು ಹೊರಗಿನಿಂದಲೇ ಬರುತ್ತವೆ. ಅಲ್ಲಿ ಆಯೋಜನೆ ಮಾಡುವ ಪ್ರತಿ ಗೇಮ್​ಗೆ ಪರಿಕರಗಳು ಹೊರಗಿಂದಲೇ ತರಿಸಲಾಗುತ್ತದೆ. ಹೀಗಾಗಿ, ಬಿಗ್​ ಬಾಸ್​ ಸ್ಪರ್ಧಿಗಳು ಹೊರ ಜಗತ್ತಿನೊಂದಿಗೆ ಪರೋಕ್ಷವಾಗಿ ಸಂಪರ್ಕಕ್ಕೆ ಒಳಗಾಗುತ್ತಾರೆ.

ಬಿಗ್​ ಬಾಸ್​ ಸ್ಪರ್ಧಿಗೆ ಕೊವಿಡ್​ ಪಾಸಿಟಿವ್​? ಅರ್ಧಕ್ಕೆ ಕೊನೆಯಾಗಲಿದೆ ಸಲ್ಲು ಶೋ?
ದೇವಲೀನಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jan 07, 2022 | 4:03 PM

Share

ದೇಶದೆಲ್ಲೆಡೆ ಕೊವಿಡ್​ ಪ್ರಕರಣ (Covid Cases) ಹೆಚ್ಚುತ್ತಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳುವ ಭಯ ಶುರುವಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ಆದಾಗ್ಯೂ, ಈ ವೈರಸ್​ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇನ್ನು, ಚಿತ್ರಮಂದಿರದಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಿ ಹಲವು ರಾಜ್ಯದ ಸರ್ಕಾರಗಳು ಆದೇಶ ಹೊರಡಿಸಿದೆ. ಇದು ಚಿತ್ರರಂಗದ ಮೇಲೆ ಪರಿಣಾಮ ಬೀರಿದೆ. ಈಗ ಕೊವಿಡ್​ ಕರಿನೆರಳು ಹಿಂದಿ ಬಿಗ್​ ಬಾಸ್ (Bigg Boss)​ ರಿಯಾಲಿಟಿ ಶೋ ಮೇಲೂ ಬಿದ್ದಿದೆ ಎನ್ನುವ ಸುದ್ದಿ ಜೋರಾಗಿದೆ. ಇದು ಬಿಗ್​ ಬಾಸ್​ ಪ್ರಿಯರಿಗೆ ಬೇಸರ ಮೂಡಿಸಿದೆ.

ಬಿಗ್​ ಬಾಸ್​ ಮನೆ ಎಷ್ಟೇ ಸುರಕ್ಷಿತ ಎಂದರೂ, ಅಲ್ಲಿಗೆ ಬರುವ ತರಕಾರಿ, ದಿನಸಿಗಳು ಹೊರಗಿನಿಂದಲೇ ಬರುತ್ತವೆ. ಅಲ್ಲಿ ಆಯೋಜನೆ ಮಾಡುವ ಪ್ರತಿ ಗೇಮ್​ಗೆ ಪರಿಕರಗಳು ಹೊರಗಿಂದಲೇ ತರಿಸಲಾಗುತ್ತದೆ. ಹೀಗಾಗಿ, ಬಿಗ್​ ಬಾಸ್​ ಸ್ಪರ್ಧಿಗಳು ಹೊರ ಜಗತ್ತಿನೊಂದಿಗೆ ಪರೋಕ್ಷವಾಗಿ ಸಂಪರ್ಕಕ್ಕೆ ಒಳಗಾಗುತ್ತಾರೆ. ಒಂದೊಮ್ಮೆ ಈ ವಸ್ತುಗಳಲ್ಲಿ ಕೊರೊನಾ ಇದ್ದರೆ ಅದು ಮನೆಯ ಸದಸ್ಯರಿಗೂ ಅಂಟುತ್ತದೆ. ಈಗ ಇದೇ ಮಾದರಿಯ ಆತಂಕ ಹುಟ್ಟಿಕೊಂಡಿದೆ.

‘ಹಿಂದಿ ಬಿಗ್​ ಬಾಸ್​ 15’ ಸ್ಪರ್ಧಿ ದೇವೋಲೀನಾ ಭಟ್ಟಾಚಾರ್ಜಿಗೆ ಕಳೆದ ಕೆಲ ದಿನಗಳಿಂದ ಅನಾರೋಗ್ಯ ಕಾಡುತ್ತಿದೆ. ಇವರಿಗೆ ಕಾಣಿಸಿಕೊಂಡ ಅನಾರೋಗ್ಯದ ಲಕ್ಷಣಗಳು ಕೊರೊನಾ ಲಕ್ಷಣಗಳೊಂದಿಗೆ ಹೋಲಿಕೆ ಆಗುತ್ತಿದೆಯಂತೆ. ಈ ಕಾರಣಕ್ಕೆ ಅವರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಅಲ್ಲದೆ, ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಂದೊಮ್ಮೆ ಅವರಿಗೆ ಇರುವುದು ಕೊವಿಡ್​ ಎಂಬುದು ದೃಢವಾದರೆ ಈ ಶೋ ಅರ್ಧಕ್ಕೆ ನಿಂತರೂ ಅಚ್ಚರಿ ಏನಿಲ್ಲ.

ಮಲಯಾಳಂನಲ್ಲೂ ಇದೇ ಮಾದರಿಯ ಪರಿಸ್ಥಿತಿ ಎದುರಾಗಿತ್ತು. ಬಿಗ್​ ಬಾಸ್​ನ ಕೆಲ ತಂತ್ರಜ್ಞರಿಗೆ ಕೊವಿಡ್​ ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಅಧಿಕಾರಿಗಳು ಶೋ ನಡೆಯುತ್ತಿರುವ ಸಂದರ್ಭದಲ್ಲೇ ದೊಡ್ಮನೆಯೊಳಗೆ ನುಗ್ಗಿ ಶೋಅನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಕೊವಿಡ್​ ಕರ್ನಾಟಕದಲ್ಲಿ ಹೆಚ್ಚಾದ ಸಂದರ್ಭದಲ್ಲಿ ‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಅರ್ಧಕ್ಕೆ ನಿಂತಿತ್ತು. ನಂತರ ಅದನ್ನು ಮರಳಿ ಆರಂಭಿಸಲಾಗಿತ್ತು. ಈಗ ಹಿಂದಿ ಬಿಗ್​ ಬಾಸ್​ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಈ ರೀತಿ ಆಗಿರುವುದು ವಾಹಿನಿಯವರ ಚಿಂತೆ ಹೆಚ್ಚಿಸಿದೆ. ಶೋ ಅರ್ಧಕ್ಕೆ ನಿಲ್ಲಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್ ವೈಷ್ಣವಿ ಸೊಂಟ ಬಳುಕಿಸಿದ ಪರಿಗೆ ಫಿದಾ ಆದ ಅಭಿಮಾನಿಗಳು

Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್​ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!