ಬಿಗ್ ಬಾಸ್ ವೈಷ್ಣವಿ ಸೊಂಟ ಬಳುಕಿಸಿದ ಪರಿಗೆ ಫಿದಾ ಆದ ಅಭಿಮಾನಿಗಳು
ವೈಷ್ಣವಿ ಅವರು ಬೆಲ್ಲಿ ಡ್ಯಾನ್ಸ್ ಕಲಿತಿದ್ದಾರೆ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ‘ರಂಗು ರಂಗೋಲಿ’ ಕಾರ್ಯಕ್ರಮದಲ್ಲಿ ಅವರು ಬೆಲ್ಲಿ ಡ್ಯಾನ್ಸ್ ಮಾಡಲಿದ್ದಾರೆ. ಇದರ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಒಂದು ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡವರು ನಟಿ ವೈಷ್ಣವಿ ಗೌಡ. ‘ಕನ್ನಡ ಬಿಗ್ ಬಾಸ್ ಸೀಸನ್ 8’ಕ್ಕೆ ತೆರಳಿದ ನಂತರದಲ್ಲಿ ಈ ಅಭಿಮಾನಿ ಬಳಗ ಹಿರಿದಾಯಿತು. ಅವರನ್ನು ಇಷ್ಟಪಡೋಕೆ ಅಭಿಮಾನಿಗಳಿಗೆ ಹಲವು ಕಾರಣ ಸಿಕ್ಕವು. ಅಂದುಕೊಂಡ ಮಟ್ಟಿಗೆ ವೋಟ್ ಬೀಳದ ಕಾರಣ ಬಿಗ್ ಬಾಸ್ ಗೆಲ್ಲೋಕೆ ಅವರಿಗೆ ಸಾಧ್ಯವಾಗಿಲ್ಲ. ಟ್ರೋಫಿ ಗೆಲ್ಲದೇ ಇದ್ದರೂ ಅವರ ಜನಪ್ರಿಯತೆ ಹೆಚ್ಚಿದೆ. ಈಗ ಕಲರ್ಸ್ ಕನ್ನಡ ವಾಹಿನಿ ನಡೆಸಿಕೊಡುತ್ತಿರುವ ನಾನಾ ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಹೊಸ ವರ್ಷದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇಲ್ಲಿ ವೈಷ್ಣವಿ ಬೆಲ್ಲಿ ಡಾನ್ಸ್ ಮಾಡಿದ್ದಾರೆ.
ಕೆಲವೇ ದಿನಗಳಲ್ಲಿ ಹೊಸ ವರ್ಷ ಬರುತ್ತಿದೆ. 2022ನ್ನು ಸ್ವಾಗತಿಸೋಕೆ ಎಲ್ಲರೂ ಸಿದ್ಧರಾಗಿದ್ದಾರೆ. ಈ ಬಾರಿ ಕೊವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ, ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದೊದಗಲಿದೆ. ಹೀಗಾಗಿ, ಪ್ರೇಕ್ಷಕರಿಗೆ ಮನರಂಜನೆ ನೀಡುವ ಸಲುವಾಗಿ ಕಲರ್ಸ್ ಕನ್ನಡದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ‘ರಂಗು ರಂಗೋಲಿ’ ಎಂಬ ಕಾರ್ಯಕ್ರಮ ಡಿ.31 ಮತ್ತು ಜ.1ರಂದು ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ. ಇದರ ತಯಾರಿ ಈಗ ನಡೆಯುತ್ತಿದೆ. ಇದರಲ್ಲಿ ವೈಷ್ಣವಿ ಕೂಡ ಭಾಗಿಯಾಗಿದ್ದಾರೆ.
ವೈಷ್ಣವಿ ಅವರು ಬೆಲ್ಲಿ ಡ್ಯಾನ್ಸ್ ಕಲಿತಿದ್ದಾರೆ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ‘ರಂಗು ರಂಗೋಲಿ’ ಕಾರ್ಯಕ್ರಮದಲ್ಲಿ ಅವರು ಬೆಲ್ಲಿ ಡ್ಯಾನ್ಸ್ ಮಾಡಲಿದ್ದಾರೆ. ಇದರ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಕಂಟೆಂಟ್ ಕ್ರಿಯೇಟರ್ ಅನು ಅವರು ವೈಷ್ಣವಿ ಅವರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳನ್ನು ವೈಷ್ಣವಿ ಹಂಚಿಕೊಂಡಿದ್ದಾರೆ. ಬೆಲ್ಲಿ ಡ್ಯಾನ್ಸ್ ಬಗ್ಗೆ, ‘ರಂಗು ರಂಗೋಲಿ’ ಕಾರ್ಯಕ್ರಮದ ಸಿದ್ಧತೆ ಸೇರಿ ಹಲವು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಅವರ ಬೆಲ್ಲಿ ಡ್ಯಾನ್ಸ್ನ ಝಲಕ್ ಕೂಡ ಇದೆ. ಅವರು ಸೊಂಟ ಬಳುಕಿಸಿದ ಪರಿ ಹಲವರಿಗೆ ಇಷ್ಟವಾಗಿದೆ.
View this post on Instagram
ಕೆಂಗುಲಾಬಿ ಬಣ್ಣದ ಕಾಸ್ಟ್ಯೂಮ್ ಧರಿಸಿ ರಾಧಿಕಾ ಕುಮಾರಸ್ವಾಮಿ ಅವರೂ ಭರ್ಜರಿ ಪರ್ಫಾರ್ಮೆನ್ಸ್ ನೀಡಿದ್ದಾರೆ. ಹಲವು ಹಾಡುಗಳಿಗೆ ಅವರು ಹೆಜ್ಜೆ ಹಾಕಿದ್ದಾರೆ. ಗ್ಲಾಮರಸ್ ಆಗಿ ಕ್ಯಾಮೆರಾ ಎದುರಿಸಿದ್ದಾರೆ. ‘ರಂಗು ರಂಗೋಲಿ’ ಕಾರ್ಯಕ್ರಮದ ಮೂಲಕ ಅವರು ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡಲಿದ್ದಾರೆ.
ಇದನ್ನೂ ಓದಿ: ನೀನು ಗಂಡಸಾಗಿರಬಹುದು, ಆದರೆ ನಿನಗಿಂತ ಹೆಚ್ಚು ಪ್ರಬುದ್ಧತೆ ನನಗಿದೆ; ಸಿಟ್ಟಾದ ವೈಷ್ಣವಿ
Kiran Raj: ಒಂದೊಳ್ಳೆಯ ಕೆಲಸ ಮಾಡಿ ಕ್ರಿಸ್ಮಸ್ ಆಚರಿಸಿದ ‘ಕನ್ನಡತಿ’ ಕಿರಣ್ ರಾಜ್