Kiran Raj: ಒಂದೊಳ್ಳೆಯ ಕೆಲಸ ಮಾಡಿ ಕ್ರಿಸ್​ಮಸ್​ ಆಚರಿಸಿದ ನಟ ಕಿರಣ್​ ರಾಜ್​

ಕೆಲ ವರ್ಷಗಳ ಹಿಂದೆ ‘ಕಿರಣ್​ ರಾಜ್​ ಫೌಂಡೇಷನ್’ ಸ್ಥಾಪಿಸಿ ಸಾಕಷ್ಟು ಜನರ ನೋವಿಗೆ ಸ್ಪಂದಿಸಿದ್ದಾರೆ ಕಿರಣ್​ ರಾಜ್​. ಅನಾಥಾಶ್ರಮದ ಮಕ್ಕಳಿಗೆ ಊಟ, ಕಷ್ಟ ಎಂದು ಬಂದವರಿಗೆ ಸಹಾಯ ಮಾಡಿದ್ದಾರೆ.

Kiran Raj: ಒಂದೊಳ್ಳೆಯ ಕೆಲಸ ಮಾಡಿ ಕ್ರಿಸ್​ಮಸ್​ ಆಚರಿಸಿದ ನಟ ಕಿರಣ್​ ರಾಜ್​
ಕಿರಣ್​ ರಾಜ್
Follow us
| Updated By: ರಾಜೇಶ್ ದುಗ್ಗುಮನೆ

Updated on:Dec 26, 2021 | 11:11 PM

ಕಿರಣ್​ ರಾಜ್​​ (Kiran Raj) ಅವರು ಕೇವಲ ನಟನೆಯನ್ನು ಮಾತ್ರ ಮಾಡುತ್ತಿಲ್ಲ. ಇದರ ಜತೆಜತೆಗೆ ಸಾಮಾಜಿಕ ಕೆಲಸಗಳಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮ ಆದಾಯದ ಒಂದಷ್ಟು ಭಾಗವನ್ನು ಅವರು ಕಷ್ಟದಲ್ಲಿರುವವರ ಸಹಾಯಕ್ಕೆ ತೆಗೆದಿಟ್ಟಿದ್ದಾರೆ. ಪ್ರತಿ ವಿಶೇಷ ಸಂದರ್ಭದಲ್ಲೂ ಅವರು ಸಾಮಾಜಿಕ ಕೆಲಸ ಮಾಡುತ್ತಾರೆ. ಈಗ ಕ್ರಿಸ್​ಮಸ್​ಅನ್ನು ಅವರು ಭಿನ್ನವಾಗಿ ಆಚರಿಸಿದ್ದಾರೆ. ಅವರ ಈ ಕೆಲಸಕ್ಕೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೆಲ ವರ್ಷಗಳ ಹಿಂದೆ ‘ಕಿರಣ್​ ರಾಜ್​ ಫೌಂಡೇಷನ್’ ಸ್ಥಾಪಿಸಿ ಸಾಕಷ್ಟು ಜನರ ನೋವಿಗೆ ಸ್ಪಂದಿಸಿದ್ದಾರೆ ಕಿರಣ್​ ರಾಜ್​. ಅನಾಥಾಶ್ರಮದ ಮಕ್ಕಳಿಗೆ ಊಟ, ಕಷ್ಟ ಎಂದು ಬಂದವರಿಗೆ ಸಹಾಯ ಮಾಡಿದ್ದಾರೆ. ಕಿರಣ್​ ರಾಜ್​ ತಮ್ಮ ಒಟ್ಟೂ ಆದಾಯದಲ್ಲಿ ಶೇ.40ರಷ್ಟು ಗಳಿಕೆಯನ್ನು ಕಷ್ಟದಲ್ಲಿರುವವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ, ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಈ ವರ್ಷದ ಅವರ ಕ್ರಿಸ್​ಮಸ್​ ಆಚರಣೆ ಭಿನ್ನವಾಗಿದೆ.

ಕಿರಣ್​ ರಾಜ್​ ಅವರು ಹಿಂದುಳಿದ ಮಕ್ಕಳಿಗೆ ಹಾಗೂ ಅಗತ್ಯವಿರುವ ಮಕ್ಕಳಿಗೆ ನೋಟ್​ಬುಕ್​ ವಿತರಣೆ ಮಾಡಿದ್ದಾರೆ. ಸುಮಾರು 250 ಮಕ್ಕಳಿಗೆ ಅವರು ನೋಟ್​ಬುಕ್​ ವಿತರಿಸಿದ್ದಾರೆ. ಈ ಮೂಲಕ ಸಾಕಷ್ಟು ಮಕ್ಕಳಿಗೆ ಸಹಾಯ ಮಾಡುವ ಕೆಲಸ ಮಾಡಿದ್ದಾರೆ. ಇದನ್ನು ಅವರ ಅಭಿಮಾನಿ ಬಳಗದವರು ಹಂಚಿಕೊಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬೀದಿ ಬದಿಯಲ್ಲಿ ಮಲಗುವ ಅನೇಕರಿಗೆ ಇತ್ತೀಚೆಗೆ ಹೊದಿಕೆ ನೀಡುವ ಕೆಲಸವನ್ನು ಕಿರಣ್​ ರಾಜ್​ ಮಾಡಿದ್ದರು.

ಕಿರಣ್​ ರಾಜ್​ ನಟನೆಯ ‘ಕನ್ನಡತಿ’ ಧಾರಾವಾಹಿ ಮಹತ್ವದ ಘಟ್ಟ ತಲುಪಿದೆ. ಹಲವು ತಿರುವುಗಳನ್ನು ಪಡೆದುಕೊಂಡು ಈ ಧಾರಾವಾಹಿ ಸಾಗುತ್ತಿದೆ. ಈಗಾಗಲೇ ಹರ್ಷ (ಕಿರಣ್​ ರಾಜ್​) ಭುವಿಗೆ (ರಂಜನಿ ರಾಘವನ್​) ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರೀತಿಯನ್ನು ಭುವಿ ಒಪ್ಪಿಕೊಳ್ಳುತ್ತಾರೋ ಅಥವಾ ಇಲ್ಲವೋ ಎನ್ನುವ ಕುತೂಹಲ ಮೂಡಿದೆ. ಇದರ ಜತೆಗೆ ಕಿರಣ್​ ರಾಜ್​ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಕೆಲವು ಚಿತ್ರಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ‘ಕನ್ನಡತಿ’ ಸಾನಿಯಾ ಪಾತ್ರದಿಂದ ಹೊರ ಬಂದ ರಮೋಲಾ; ಇದಕ್ಕಿದೆ ಮಹತ್ವದ ಕಾರಣ

ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​

Published On - 9:11 pm, Sun, 26 December 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ