ಸಿದ್ದಾರ್ಥ್​ ಶುಕ್ಲಾ ಪ್ರಿಯತಮೆ ಶೆಹನಾಜ್ ಗಿಲ್​ ತಂದೆ ಮೇಲೆ ಗುಂಡಿನ ದಾಳಿ; ನಟಿಗೆ ಮತ್ತೊಂದು ಆಘಾತ

ಸಿದ್ದಾರ್ಥ್​ ಶುಕ್ಲಾ ಪ್ರಿಯತಮೆ ಶೆಹನಾಜ್ ಗಿಲ್​ ತಂದೆ ಮೇಲೆ ಗುಂಡಿನ ದಾಳಿ; ನಟಿಗೆ ಮತ್ತೊಂದು ಆಘಾತ
ಸಿದ್ದಾರ್ಥ್​ ಶುಕ್ಲಾ

ಸಂತೋಖ್​ ಅವರು ಪಂಜಾಬ್​ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಇದು ಕೆಲವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಈ ದ್ವೇಷದ ಕಾರಣಕ್ಕೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬ ಬಗ್ಗೆ ವರದಿ ಆಗಿದೆ.

TV9kannada Web Team

| Edited By: Rajesh Duggumane

Dec 27, 2021 | 8:42 PM

ಸಿದ್ದಾರ್ಥ್​ ಶುಕ್ಲಾ ಹಾಗೂ ಶೆಹನಾಜ್​ ಗಿಲ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ‘ಹಿಂದಿ ಬಿಗ್​ ಬಾಸ್​ 13’ರಲ್ಲಿ ಇಬ್ಬರೂ ಒಟ್ಟಾಗಿ ಸ್ಪರ್ಧಿಸಿದ್ದರು. ಆಗಲೇ ಇವರ ಮಧ್ಯೆ ಪ್ರೀತಿ ಮೊಳೆತಿತ್ತು. ಸಿದ್ದಾರ್ಥ್​ ಆ ಸೀಸನ್​ನಲ್ಲಿ ಗೆದ್ದಿದ್ದರು. ಇತ್ತೀಚೆಗೆ ಸಿದ್ದಾರ್ಥ್​ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಸಾವು ಶೆಹನಾಜ್​ಗೆ ದೊಡ್ಡ ಆಘಾತ ತಂದಿತ್ತು. ಈ ನೋವಿನಿಂದ ಅವರಿಗೆ ಈಗಲೂ ಹೊರ ಬರೋಕೆ ಸಾಧ್ಯವಾಗಿಲ್ಲ. ಹಾಗಿರುವಾಗಲೇ ಶೆಹನಾಜ್​ಗೆ ಮತ್ತೊಂದು ಆಘಾತ ಆಗಿದೆ. ಅವರ ತಂದೆ ಸಂತೋಖ್​ ಸಿಂಗ್​ ಅಲಿಯಾಸ್​ ಸುಖ್​ ಮೇಲೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್​ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂತೋಖ್​ ಅವರು ಪಂಜಾಬ್​ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಇದು ಕೆಲವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಈ ದ್ವೇಷದ ಕಾರಣಕ್ಕೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬ ಬಗ್ಗೆ ವರದಿ ಆಗಿದೆ. ಆದರೆ, ಈ ಬಗ್ಗೆ ತನಿಖೆಯಿಂದ ಖಚಿತ ಮಾಹಿತಿ ಹೊರಬರಬೇಕಿದೆ. ಶನಿವಾರ (ಡಿಸೆಂಬರ್​ 25) ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮೃತ್​ಸರದಿಂದ ಬಿಯಾಸ್​ಗೆ ಸಂತೋಖ್​ ಮರಳುತ್ತಿದ್ದರು. ಭದ್ರತಾ ಸಿಬ್ಬಂದಿಗೆ ವಾಶ್​ರೂಂಗೆ ತೆರಳಬೇಕಿತ್ತು. ಈ ಕಾರಣಕ್ಕೆ ಮಾರ್ಗ ಮಧ್ಯೆ ಡಾಬಾ ಒಂದರಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಗನ್​ಮೆನ್​ ವಾಶ್​ರೂಂಗೆ ತೆರಳಿದ್ದಾಗ ಸಂತೋಖ್ ಕಾರಿನಲ್ಲಿ ಒಬ್ಬರೇ ಇದ್ದರು. ಈ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.

ಗುಂಡಿನ ಶಬ್ದ ಕೇಳುತ್ತಿದ್ದಂತೆ ಗನ್​ಮೆನ್​ ಓಡಿ ಬಂದಿದ್ದಾರೆ. ಆಗ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಅದೃಷ್ಟವಶಾತ್​ ಸಂತೋಖ್​ಗೆ ಯಾವುದೇ ತೊಂದರೆ ಉಂಟಾಗಿಲ್ಲ. ಅವರು ಗನ್​ ಶಾಟ್​ ಕೇಳುತ್ತಿದ್ದಂತೆ ಕಾರಿನಲ್ಲಿ ಅಡಗಿಕೊಂಡಿದ್ದರು ಎನ್ನಲಾಗಿದೆ. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಫೈರ್​ ಆದಂತಹ ಬುಲೆಟ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಸಂತೋಖ್ ಅವರ ಮೇಲೆ ದಾಳಿ ನಡೆದಿರುವ ವಿಚಾರ ಶೆಹನಾಜ್​ಗೆ ಶಾಕ್​ ನೀಡಿದೆ.

ಇದನ್ನೂ ಓದಿ: ಮಾತಾಡುತ್ತಿದೆಯಾ ಸಿದ್ದಾರ್ಥ್​ ಶುಕ್ಲಾ ಆತ್ಮ? ವೈರಲ್​ ಆಗುತ್ತಿದೆ ವಿಚಿತ್ರ ಧ್ವನಿ ಇರುವ ವಿಡಿಯೋ

ಬಿಗ್​ ಬಾಸ್​ ವೇದಿಕೆ ಮೇಲೆ ಸಿದ್ದಾರ್ಥ್​ ಶುಕ್ಲಾಗೆ ಬರ್ತ್​ಡೇ ವಿಶ್​ ತಿಳಿಸಿದ ಸಲ್ಮಾನ್​ ಖಾನ್​

Follow us on

Related Stories

Most Read Stories

Click on your DTH Provider to Add TV9 Kannada