ಜ.9ರಿಂದ ‘ಗಾನ ಬಜಾನ 2’, ‘ಕಾಮಿಡಿ ಉತ್ಸವ’ ಶುರು; ಕಿರುತೆರೆಯಲ್ಲಿ ಮಸ್ತ್ ಮನರಂಜನೆ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ‘ಕಾಮಿಡಿ ಉತ್ಸವ’ ಮತ್ತು ‘ಗಾನ ಬಜಾನ 2’ ಕಾರ್ಯಕ್ರಮಗಳು ಆರಂಭ ಆಗುತ್ತಿವೆ. ಪ್ರಸಾರದ ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಮಾಹಿತಿ..
ಹೊಸ ವರ್ಷದ ಆರಂಭದಲ್ಲಿ ಕನ್ನಡ ಕಿರುತೆರೆ ವಾಹಿನಿಗಳು ಹೊಸ ಮೆರುಗಿನೊಂದಿಗೆ ಬಗೆಬಗೆಯ ಕಾರ್ಯಕ್ರಮಗಳನ್ನು ನೀಡುತ್ತಿವೆ. ಫಿಕ್ಷನ್ ಮತ್ತು ನಾನ್-ಫಿಕ್ಷನ್ ವಿಭಾಗದಲ್ಲಿ ಎಲ್ಲ ವಾಹಿನಿಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕಾರಣದಿಂದ ಜನರು ಮನೆಯಿಂದ ಹೊರಗೆ ಹೋಗಿ ಮನರಂಜನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭಕ್ಕೆ ಸರಿಯಾಗಿ ಕಿರುತೆರೆಯಲ್ಲಿ ಒಂದಕ್ಕಿಂತ ಒಂದು ಭಿನ್ನ ಶೋಗಳು ಮೂಡಿಬರುತ್ತಿವೆ. ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಇದೇ ಭಾನುವಾರದಿಂದ (ಜ.9) ‘ಕಾಮಿಡಿ ಉತ್ಸವ’ (Comedy Utsava) ಮತ್ತು ‘ಗಾನ ಬಜಾನ 2’ (Gaana Bajaana 2) ಕಾರ್ಯಕ್ರಮಗಳು ಪ್ರಸಾರ ಆರಂಭಿಸಲಿವೆ.
ಜ.9ರ ಭಾನುವಾರ ಸಂಜೆ 5.30 ಆಗುತ್ತಲೇ ಕಾಮಿಡಿಯ ಭರ್ಜರಿ ಮನರಂಜನೆ ಶುರುವಾಗಲಿದೆ. ಹಲವು ಜಂಜಾಟಗಳ ನಡುವೆ ನಗುವನ್ನೇ ಮರೆತವರಿಗೆ ಈ ಶೋ ಮೂಲಕ ಭರಪೂರ ಕಾಮಿಡಿ ಸಿಗಲಿದೆ. ಹಾಸ್ಯದ ಲೋಕಕ್ಕೆ ಕೊಂಡೊಯ್ಯಲು ‘ಕಾಮಿಡಿ ಉತ್ಸವ’ ಕಾರ್ಯಕ್ರಮ ಸಜ್ಜಾಗಿದೆ. ಹಾಸ್ಯಕ್ಕೆ ಹೊಸ ಮೆರುಗು ಕೊಟ್ಟ ಹಾಸ್ಯ ಕುಟುಂಬಗಳ ಸಮಾಗಮ ಈ ಶೋನಲ್ಲಿ ಆಗಲಿದೆ. ಅನೇಕ ಸ್ಟಾರ್ಗಳನ್ನು ಮನಸಾರೆ ನಗಿಸಿದ ‘ಕಾಮಿಡಿ ಉತ್ಸವ’ದ ತೇರು ಇದೀಗ ಕರ್ನಾಟಕದ ಪ್ರತಿ ಮನೆ-ಮನಗಳಲ್ಲಿ ನಗುವಿನ ಹಬ್ಬ ಆಚರಿಸಲು ಬರುತ್ತಿದೆ.
‘ಕಾಮಿಡಿ ಉತ್ಸವ’ ಶೋ ರೀತಿಯೇ ಇನ್ನೊಂದು ಕಾರ್ಯಕ್ರಮ ‘ಗಾನ ಬಜಾನ ಸೀಸನ್ 2’ ಸಹ ಸಖತ್ ಮನರಂಜನೆ ನೀಡಲಿದೆ. ವೀಕೆಂಡ್ಗಳಲ್ಲಿ ಜನರು ಹೊರಗಡೆ ಸುತ್ತಾಡೋಕೆ ಇಷ್ಟಪಡುತ್ತಾರೆ. ಆದರೆ ಅಂಥವರನ್ನು ಮನೆಯಲ್ಲೇ ಕೂರಿಸಿ ಟಿವಿ ಪರದೆಯತ್ತ ಸೆಳೆದುಕೊಳ್ಳುವ ಶಕ್ತಿ ಇಂಥ ಕಾರ್ಯಕ್ರಮಗಳಿಗೆ ಇದೆ. ಸೀಸನ್ ಒಂದರ ಯಶಸ್ಸಿ ಬಳಿಕ ‘ಗಾನ ಬಜಾನ’ ಈಗ ಎರಡನೇ ಸಿಸನ್ ಅನ್ನು ಜನರ ಮುಂದೆ ತರುತ್ತಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಭಾನುವಾರ (ಜ.9) ರಾತ್ರಿ 9 ಗಂಟೆಗೆ ‘ಗಾನ ಬಜಾನ 2’ ಶೋ ಆರಂಭ ಆಗಲಿದೆ. ಇದರ ನಿರೂಪಣೆಯನ್ನು ನಿರಂಜನ್ ಮಾಡಲಿದ್ದಾರೆ. ನಿರಂಜನ್ ಇದ್ದಲ್ಲಿ ನಗುವಿಗೆ ಕೊರತೆ ಇರೋದಿಲ್ಲ. ಅವರಿಗೆ ನಟ ಶರಣ್ ಕೂಡ ಸಾಥ್ ನೀಡುತ್ತಿದ್ದಾರೆ. ಮೊದಲ ಸಂಚಿಕೆಯಲ್ಲಿ ಶರಣ್ ಪಾಲ್ಗೊಂಡಿದ್ದಾರೆ. ಇದರಿಂದ ವೀಕ್ಷಕರಿಗೆ ಡಬಲ್ ಮನರಂಜನೆ ಸಿಗಲಿದೆ.
ಮನೆ ಮನಗಳಿಗೆ ಬರಲಿದೆ ನಗುವಿನ ಉತ್ಸವ,ಕಾಮಿಡಿ ಉತ್ಸವ .ಇದೇ ಭಾನುವಾರ ಸಂಜೆ 5.30ಕ್ಕೆ#ComedyUtsav #StarSuvarna #comedy #druvasarja #kannada #utsav #funny pic.twitter.com/9HshVuRPwr
— Star Suvarna (@StarSuvarna) January 7, 2022
ಕಿರುತೆರೆ ಕಾರ್ಯಕ್ರಮಗಳ ಗುಣಮಟ್ಟ ಕೂಡ ವೃದ್ಧಿಸಿದೆ. ಸಿನಿಮಾಗಳ ಮೇಕಿಂಗ್ ರೀತಿ ಈ ಎಲ್ಲ ಶೋಗಳು ಮೂಡಿಬರುತ್ತಿವೆ. ಅದರಿಂದ ವೀಕ್ಷಕರಿಗೆ ಹೊಸ ಫೀಲ್ ಸಿಗಲಿದೆ.
ಇದನ್ನೂ ಓದಿ:
ಗಾಂಧಿನಗರದಲ್ಲಿ ಮಾಯವಾಯ್ತು ಶುಕ್ರವಾರದ ಕಳೆ; ಸಿನಿಮಾ ರಿಲೀಸ್ ಇಲ್ಲದೇ ಚಿತ್ರಮಂದಿರಗಳು ಖಾಲಿ
ಗಮನ ಸೆಳೆದ ‘ದಿ ಬೆಲ್’ ಪೋಸ್ಟರ್; ಕನ್ನಡದ ಕಿರುಚಿತ್ರಕ್ಕೆ ಸುದೀಪ್, ಪ್ರಜ್ವಲ್ ದೇವರಾಜ್ ವಿಶ್
Published On - 12:03 pm, Sat, 8 January 22