ಗಮನ ಸೆಳೆದ ‘ದಿ ಬೆಲ್’ ಪೋಸ್ಟರ್​; ಕನ್ನಡದ ಕಿರುಚಿತ್ರಕ್ಕೆ ಸುದೀಪ್​, ಪ್ರಜ್ವಲ್​ ದೇವರಾಜ್​​ ವಿಶ್​

ಗಮನ ಸೆಳೆದ ‘ದಿ ಬೆಲ್’ ಪೋಸ್ಟರ್​; ಕನ್ನಡದ ಕಿರುಚಿತ್ರಕ್ಕೆ ಸುದೀಪ್​, ಪ್ರಜ್ವಲ್​ ದೇವರಾಜ್​​ ವಿಶ್​
‘ದಿ ಬೆಲ್’ ಕಿರುಚಿತ್ರಕ್ಕೆ ಸುದೀಪ್​, ಪ್ರಜ್ವಲ್​ ದೇವರಾಜ್​​ ವಿಶ್​

The Bell Kannada Short Movie: ‘ದಿ ಬೆಲ್’ ಶೀರ್ಷಿಕೆಯ ಕನ್ನಡ ಕಿರುಚಿತ್ರದ ಪೋಸ್ಟರ್ ರಿಲೀಸ್​ ಆಗಿದೆ. ಪ್ರಜ್ವಲ್​ ದೇವರಾಜ್​, ಕಿಚ್ಚ ಸುದೀಪ್​ ಅವರು ಈ ತಂಡಕ್ಕೆ ಶುಭ ಕೋರಿದ್ದಾರೆ.

TV9kannada Web Team

| Edited By: Madan Kumar

Jan 08, 2022 | 7:43 AM

ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಕಿರುಚಿತ್ರಗಳು ಸಹಾಯಕ ಆಗುತ್ತವೆ. ಅಂಥವರಿಗೆ ಸ್ಟಾರ್​ ಕಲಾವಿದರ ಬೆಂಬಲ ಸಿಕ್ಕರೆ ಹುರುಪು ಇನ್ನಷ್ಟು ಹೆಚ್ಚುತ್ತದೆ. ‘ಕೋಟಿಗೊಬ್ಬ 3’ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ರಘುಕುಮಾರ್ ಒ.ಆರ್.​​ ಅವರು ‘ದಿ ಬೆಲ್​’ ಶೀರ್ಷಿಕೆಯ ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ. ಈಗ ಅದರ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಖ್ಯಾತ ನಟ ಪ್ರಜ್ವಲ್​ ದೇವರಾಜ್ (Prajwal Devaraj)​ ಅವರು ಈ ಪೋಸ್ಟರ್​ ಲಾಂಚ್​ ಮಾಡಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಅವರು ಸೋಶಿಯಲ್​ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ. ಈ ಎಲ್ಲ ಕಾರಣಗಳಿಂದ ‘ದಿ ಬೆಲ್​’ ಕಿರುಚಿತ್ರ ಗಮನ ಸೆಳೆಯುತ್ತಿದೆ.

ಈ ಕಿರುಚಿತ್ರಕ್ಕೆ ರಿಷಿಕೇಶ್​ ಛಾಯಾಗ್ರಹಣ ಮಾಡಿದ್ದಾರೆ. ಶೈಲೇಶ್​ ರಾಜ್​ ಸಂಭಾಷಣೆ ಬರೆದಿದ್ದಾರೆ. ಉಮೇಶ್​ ಆರ್​.ಬಿ. ಸಂಕಲನ, ಪ್ರದ್ಯೋತನ್​ ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಕೇಶ್​ ರಾಖಿ ಈ ಪೋಸ್ಟರ್​ ವಿನ್ಯಾಸ ಮಾಡಿದ್ದು, ಪ್ರಜ್ವಲ್​ ದೇವರಾಜ್​ ಅವರಿಂದ ಮೆಚ್ಚುಗೆ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಬಾಲಿವುಡ್​ ನಟ ಅಫ್ತಾಬ್​ ಶಿವದಾಸನಿ, ನಿರ್ದೇಶಕ ಲೋಹಿತ್​, ನಟಿ ಶ್ರದ್ಧಾ ದಾಸ್​ ಮುಂತಾದವರು ಆಲ್​ ದಿ ಬೆಸ್ಟ್​ ಎಂದಿದ್ದಾರೆ.

ತಿಮ್ಮರಾಜ್​ ಎಸ್​.ಎಚ್​​, ಲಕ್ಷ್ಮೀಕಾಂತ್​ ಒ.ಆರ್​. ಹಾಗೂ ರಘುಕುಮಾರ್​ ಒ.ಆರ್​. ಅವರು ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ಆಶಾ ರಾಣಿ, ಭವಾನಿ ಪ್ರಕಾಶ್​, ರಮ್ಯಾ ಕೃಷ್ಣ, ಅಶ್ವಿನಿ ಹಾಸನ್​, ಮನೋಜ್​ ಪುತ್ತೂರ್​, ಅಶ್ವಿನ್​ ಹಾಸನ್​, ಎಚ್​​ಎಂಟಿ ವಿಜಯ್​ ಮುಂತಾದವರು ‘ದಿ ಬೆಲ್​’ ಕಿರುಚಿತ್ರದಲ್ಲಿ ನಟಿಸಿದ್ದಾರೆ.

‘ಕರ್ಮ ಸಿದ್ಧಾಂತದ ಥೀಮ್​ ಇಟ್ಟುಕೊಂಡು ಈ ಕಿರುಚಿತ್ರ ಸಿದ್ಧವಾಗಿದೆ. ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಲು ಇದನ್ನು ಮಾಡಿದ್ದೇನೆ. ಫೆಬ್ರವರಿ ಮೊದಲ ವಾರದಲ್ಲಿ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡುತ್ತೇವೆ. ಹೆಚ್ಚು ಜನರನ್ನು ತಲುಪಬೇಕು ಎಂಬುದು ನಮ್ಮ ಗುರಿ’ ಎಂದಿದ್ದಾರೆ ನಿರ್ದೇಶಕ ರಘುಕುಮಾರ್​.

‘ಒನ್​ ರೈಟ್​ ಕಿಕ್​’ ಕಿರುಚಿತ್ರಕ್ಕೆ 12 ಅಂತಾರಾಷ್ಟ್ರೀಯ ಪ್ರಶಸ್ತಿ; ನಟಿ ಸಿಂಹಿಕಾ ಬಿಚ್ಚಿಟ್ಟ ರಹಸ್ಯ

ಪುನೀತ್​ ಸಮಾಧಿ ಎದುರು ‘ರೈತ’ ಕಿರುಚಿತ್ರದ ಸಾಂಗ್​ ಬಿಡುಗಡೆ; ಅಪ್ಪುಗಾಗಿ ವಿಶೇಷ ಹಾಡು

Follow us on

Related Stories

Most Read Stories

Click on your DTH Provider to Add TV9 Kannada