Niveditha Gowda: ಹೃದಯ ಮಗುವಾಗಿದೆ ಎಂದು ಸಮುದ್ರ ದಂಡೆಯಲ್ಲಿ ಕುಣಿದ ನಿವೇದಿತಾ ಗೌಡ
ನಿವೇದಿತಾ ಗೌಡಗೋಸ್ಕರ ಚಂದನ್ ಶೆಟ್ಟಿ ಹಾಡೊಂದನ್ನು ಕಂಪೋಸ್ ಮಾಡಿ ಹಾಡಿದ್ದರು. ‘ನೀನು ನನ್ನವಳೆ..’ ಎಂಬುದು ಹಾಡಿನ ಹೆಸರು. ಸಂಗೀತ ಸಂಯೋಜನೆ, ಸಾಹಿತ್ಯ, ಗಾಯನ ಎಲ್ಲವೂ ಚಂದನ್ ಶೆಟ್ಟಿ ಅವರದ್ದೇ.
ನಿವೇದಿತಾ ಗೌಡ () ಅವರು ಬಿಗ್ ಬಾಸ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಚಂದನ್ ಶೆಟ್ಟಿ ಅವರನ್ನು ಮದುವೆ ಆದ ನಂತರವಂತೂ ನಿವೇದಿತಾ ತುಂಬಾನೇ ಖ್ಯಾತಿ ಗಳಿಸಿಕೊಂಡರು. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 14 ಲಕ್ಷ ಹಿಂಬಾಲಕರಿದ್ದಾರೆ. ಅವರು ಪೋಸ್ಟ್ ಮಾಡುವ ಪೋಟೋ ಹಾಗೂ ವಿಡಿಯೋಗಳನ್ನು ಸಾವಿರಾರು ಮಂದಿ ಲೈಕ್ ಮಾಡುತ್ತಾರೆ. ಸಾಕಷ್ಟು ರೀಲ್ಸ್ಗಳನ್ನು ಮಾಡಿ ಅವರು ಪೋಸ್ಟ್ ಮಾಡುತ್ತಾರೆ. ಪತಿ ಚಂದನ್ ಶೆಟ್ಟಿ ಜತೆ ಜತೆ ಸಾಕಷ್ಟು ರೀಲ್ಸ್ ಮಾಡಿ ಅವರು ಹಾಕಿದ್ದಾರೆ. ಈ ಮೂಲಕವೂ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ನಿವೇದಿತಾ ಏನೇ ಮಾಡಿದರೂ ಬೆನ್ನುತಟ್ಟುವ ಅಭಿಮಾನಿಗಳು ಅವರಿಗೆ ಇದ್ದಾರೆ. ಈಗ ಅವರು ಹೊಸ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಇದು ಫ್ಯಾನ್ಪೇಜ್ನಲ್ಲಿ ವೈರಲ್ ಆಗಿದೆ. ಇದಕ್ಕೆ ಅವರು ವಿಶೇಷ ಸಾಂಗ್ ಒಂದನ್ನು ಹಾಕಿದ್ದು, ಈ ಹಾಡು ಅವರಿಗೆ ತುಂಬಾನೇ ಇಷ್ಟವಾಗಿದೆ. ಇದಕ್ಕೆ ಕಾರಣವೂ ಇದೆ.
ನಿವೇದಿತಾ ಗೌಡಗೋಸ್ಕರ ಚಂದನ್ ಶೆಟ್ಟಿ ಹಾಡೊಂದನ್ನು ಕಂಪೋಸ್ ಮಾಡಿ ಹಾಡಿದ್ದರು. ‘ನೀನು ನನ್ನವಳೆ..’ ಎಂಬುದು ಹಾಡಿನ ಹೆಸರು. ಸಂಗೀತ ಸಂಯೋಜನೆ, ಸಾಹಿತ್ಯ, ಗಾಯನ ಎಲ್ಲವೂ ಚಂದನ್ ಶೆಟ್ಟಿ ಅವರದ್ದೇ. ಕಲರ್ಸ್ ಕನ್ನಡದ ರಿಯಾಲಿಟಿ ಶೋ ‘ರಾಜಾ ರಾಣಿ’ಯಲ್ಲಿ ಈ ಹಾಡನ್ನು ಚಂದನ್ ಹಾಡಿದ್ದರು. ಆಗ ನಿವೇದಿತಾ ಕಣ್ಣೀರು ಹಾಕಿದ್ದರು. ಈ ಹಾಡು ಅವರಿಗೆ ತುಂಬಾನೇ ಹತ್ತಿರವಾಗಿತ್ತು. ಈಗ ಈ ಹಾಡನ್ನು ಹಾಕಿ ರೀಲ್ಸ್ ಪೋಸ್ಟ್ ಮಾಡಿದ್ದಾರೆ.
View this post on Instagram
ಬೀಚ್ನಲ್ಲಿ ಓಡುತ್ತಿರುವ ಫೋಟೋವನ್ನು ನಿವೇದಿತಾ ಪೋಸ್ಟ್ ಮಾಡಿದ್ದಾರೆ. ‘ಹಗುರಾಗಿದೆ.. ಹೃದಯಾ ಮಗುವಾಗಿದೆ..’ ಎಂಬ ಸಾಲುಗಳು ಹಾಡಿನಲ್ಲಿ ಬರುತ್ತವೆ. ನಿವೇದಿತಾ ಕೂಡ ಚಿಕ್ಕ ಮಗುವಿನಂತೆ ವರ್ತಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಇದರ ಜತೆಗೆ ಮಲ್ಪೆ ಬೀಚ್ನಲ್ಲಿಯೂ ಅವರು ಫೋಟೋ ಪೋಸ್ಟ್ ಮಾಡಿದ್ದಾರೆ.
View this post on Instagram
ನಿವೇದಿತಾ ಚಂದನ್ ಶೆಟ್ಟಿ ಮಾತ್ರವಲ್ಲದೆ, ಅವರ ತಾಯಿಯ ಜತೆಯೂ ಕಾಣಿಸಿಕೊಳ್ಳುತ್ತಾರೆ. ಅಮ್ಮ-ಮಗಳ ಡ್ಯಾನ್ಸ್ ಕಂಡು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದುಂಟು. ಇತ್ತೀಚೆಗೆ ಅಮ್ಮ-ಮಗಳ ಜತೆಗೆ ಅಜ್ಜಿಯೂ ಸೇರಿಕೊಂಡಿದ್ದರು. ನಿವೇದಿತಾ ಗೌಡ ಕುಟುಂಬದ ಮೂರು ತಲೆಮಾರಿನವರು ಜತೆಯಾಗಿ ರೀಲ್ಸ್ ಮಾಡಿದ್ದರು. ಅದನ್ನು ಕಂಡು ಅವರ ಫ್ಯಾನ್ಸ್ ಕಣ್ಣರಳಿಸಿದ್ದರು.
ಇದನ್ನೂ ಓದಿ: ಅಮ್ಮ ಮತ್ತು ಅಜ್ಜಿ ಜತೆ ನಿವೇದಿತಾ ಗೌಡ ರೀಲ್ಸ್; ಕಮೆಂಟ್ ಮೂಲಕ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್
ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್ ಆನಂದ್ ಪುತ್ರಿಯ ಮಸ್ತ್ ಮಾತುಕತೆ
Published On - 8:58 pm, Fri, 7 January 22