Yash Birthday: 36ನೇ ವಸಂತಕ್ಕೆ ಕಾಲಿಟ್ಟ ಯಶ್; ಜನ್ಮದಿನಕ್ಕೆ ‘ಕೆಜಿಎಫ್ 2’ ಕಡೆಯಿಂದ ಸಿಗುತ್ತಿರುವ ಗಿಫ್ಟ್ ಏನು?
Happy Birthday Yash: ಯಶ್ಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಯಶ್ ಹೆಸರು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಯಶ್ ಅವರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ ಯಶ್ (Yash) ಅವರು ಇಂದು (ಜ.8) 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಯಶ್ ಜನ್ಮದಿನಕ್ಕೆ (Yash Birthday) ಕೇವಲ ಕರ್ನಾಟಕದ ಫ್ಯಾನ್ಸ್ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳು ನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅವರ ಬರ್ತ್ಡೇ ಅಂಗವಾಗಿ ಟ್ವಿಟರ್ನಲ್ಲಿ ಶುಭಾಶಯಗಳ ಮಳೆ ಸುರಿಯುತ್ತಿದೆ. ಈ ಕಾರಣಕ್ಕೆ ಯಶ್ ಹೆಸರು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಕೂಡ ಯಶ್ಗೆ ಶುಭಾಶಯ ತಿಳಿಸುತ್ತಿದ್ದಾರೆ.
ಅಭಿಮಾನಿಗಳ ಜತೆ ಸೇರಿ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರು ಇತ್ತೀಚೆಗೆ ಮಾಹಿತಿ ಹಂಚಿಕೊಂಡಿದ್ದರು. ‘ಈ ಬಾರಿ ಮತ್ತೆ ಕೊವಿಡ್ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳು ಬಂದು ಬರ್ತ್ಡೇ ಆಚರಣೆ ಮಾಡುವುದು ಸರಿಯಲ್ಲ ಅನಿಸುತ್ತದೆ. ಎಲ್ಲರೂ ಎಲ್ಲಿದ್ದೀರೋ ಅಲ್ಲಿಂದಲೇ ವಿಶ್ ಮಾಡಿ ಸಾಕು’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಆದಾಗ್ಯೂ ಯಶ್ ಮನೆ ಬಳಿ ತೆರಳೋಣ ಎಂದರೆ ಅದು ಸಾಧ್ಯವಿಲ್ಲ. ಯಶ್ ಜನ್ಮದಿನ ಶನಿವಾರ. ಕರ್ನಾಟಕದಲ್ಲಿ ವಾರಾಂತ್ಯದ ಕರ್ಫ್ಯೂ ಇದೆ. ಈ ಕಾರಣಕ್ಕೆ ಯಶ್ ಮನೆ ಸಮೀಪ ತೆರಳೋಕೆ ಯಾರಿಗೂ ಸಾಧ್ಯವಾಗುತ್ತಿಲ್ಲ.
ಸಾಮಾನ್ಯವಾಗಿ ಸ್ಟಾರ್ ನಟರ ಜನ್ಮದಿನ ಎಂದರೆ, ಸಿನಿಮಾ ತಂಡದಿಂದ ಹೊಸ ಅಪ್ಡೇಟ್ ಸಿಗುತ್ತದೆ. ‘ಕೆಜಿಎಫ್ 2’ ಚಿತ್ರದ ಕಡೆಯಿಂದ ಟೀಸರ್ ರಿಲೀಸ್ ಆಗುವುದಿಲ್ಲ ಎಂದು ಯಶ್ ಈ ಮೊದಲೇ ಹೇಳಿದ್ದಾರೆ. ಟ್ರೇಲರ್ ರಿಲೀಸ್ ಮಾಡೋದಕ್ಕಂತೂ ಸಾಧ್ಯವಿಲ್ಲ. ಈ ಕಾರಣಕ್ಕೆ ಇಂದು ಹೊಸ ಪೋಸ್ಟರ್ ರಿಲೀಸ್ ಆಗಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರ. ಯಶ್ ಹಾಗೂ ನಿರ್ದೇಶಕ ನರ್ತನ್ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆಯೇ ಎನ್ನುವ ಕುತೂಹಲ ಇದೆ.
He wanted to be No. 1 hero in Gandhinagar but fate made him to become biggest superstar of south india ?@TheNameIsYash Pride of Indian Cinema ?#KGFChapter2 #YashBoss#HBDRockingStarYASH pic.twitter.com/sxCBEJl32n
— Bellary Yash FC ® (@BellaryYashFc) January 7, 2022
ಯಶ್ಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಯಶ್ ಹೆಸರು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಯಶ್ ಅವರ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ದೊಡ್ಡದೊಡ್ಡ ಸೆಲೆಬ್ರಿಟಿಗಳು ಕೂಡ ಯಶ್ ಬರ್ತ್ಡೇಗೆ ಶುಭಾಶಯ ತಿಳಿಸುತ್ತಿದ್ದಾರೆ.
ಇದನ್ನೂ ಓದಿ:
‘ಕೆಜಿಎಫ್ 2’ ಎದುರು ಸ್ಪರ್ಧೆಗೆ ಇಳಿದ ತಮಿಳು ಸ್ಟಾರ್ ನಟನ ಸಿನಿಮಾ; ಗೆಲ್ಲೋದು ಯಶ್ ಎಂದ ಫ್ಯಾನ್ಸ್
‘ಯಶ್ ಬರ್ತ್ಡೇ ಮಾಡಲು ರಜೆ ಕೊಡಿ’; ಪತ್ರ ಬರೆದು ಪ್ರಾಂಶುಪಾಲರಿಗೆ ಮನವಿ ಮಾಡಿದ ವಿದ್ಯಾರ್ಥಿ
Published On - 6:00 am, Sat, 8 January 22