ಪುನೀತ್​ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್

ಪುನೀತ್​ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್

TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 07, 2022 | 3:15 PM

ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್ ಧನ್ಯವಾದ ಹೇಳಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಅಪ್ಪು ಫ್ಯಾನ್ಸ್ ​ಖುಷಿಪಟ್ಟಿದ್ದಾರೆ.

ಪುನೀತ್​ ರಾಜ್​ಕುಮಾರ್​ ನಿಧನದ ನಂತರ ಇಡೀ ರಾಜ್ಯ ದುಃಖದಲ್ಲಿ ಮುಳುಗಿತ್ತು. ​ಅವರ ಅಂತಿಮ ದರ್ಶನ ಪಡೆಯೋಕೆ ಲಕ್ಷಾಂತರ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸಿದ್ದರು. ಒಂದು ಲೆಕ್ಕಾಚಾರದ ಪ್ರಕಾರ 25 ಲಕ್ಷಕ್ಕೂ ಅಧಿಕ ಮಂದಿ ಪುನೀತ್​ ಅಂತಿಮ ದರ್ಶನ ಪಡೆದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಯಾರೂ ಗಲಾಟೆ ಮಾಡಿಲ್ಲ. ತುಂಬಾನೇ ಶಾಂತರೀತಿಯಿಂದ ಅಂತಿಮ ದರ್ಶನ ಕಾರ್ಯಕ್ರಮವನ್ನು ನಡೆಸಿಕೊಡಲಾಗಿತ್ತು. ಇದಕ್ಕೆ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್ ಧನ್ಯವಾದ ಹೇಳಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಕೇಳಿ ಅಪ್ಪು ಫ್ಯಾನ್ಸ್ ​ಖುಷಿಪಟ್ಟಿದ್ದಾರೆ. ಪುನೀತ್​ ಅಕ್ಟೋಬರ್​ 29ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು.

ಇದನ್ನೂ ಓದಿ: ‘ಪುನೀತ್​ ಇಲ್ಲದೇ ‘ಜೇಮ್ಸ್​’ ಶೂಟಿಂಗ್​ ಮಾಡೋದು ಕಷ್ಟ ಆಗ್ತಿದೆ’: ನಟ ಅವಿನಾಶ್​ ಭಾವುಕ ನುಡಿ

ಪುನೀತ್​ಗೆ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಗೌರವ; ಮೊದಲ ದಿನವೇ ಅಪ್ಪು ಬಗ್ಗೆ ಮಾತು

Published on: Jan 07, 2022 03:15 PM