‘ದಯವಿಟ್ಟು ಹುಷಾರಾಗಿರಿ’; 3ನೇ ಬಾರಿ ಕೊವಿಡ್​ ಪಾಸಿಟಿವ್ ಆದ ಖ್ಯಾತ ನಿರ್ಮಾಪಕನ ಮನವಿ​

ಬಂಡ್ಲ ಗಣೇಶ್​ ಅವರಿಗೆ ಕೊವಿಡ್ ಅಂಟಿದೆ. ‘ದಯವಿಟ್ಟು ಹುಷಾರಾಗಿರಿ. ಪ್ರಯಾಣ ಮಾಡುವುದಕ್ಕಿಂತ ಮುನ್ನ ಯೋಚಿಸಿ’ ಎಂದು ಅವರು​ ಟ್ವೀಟ್ ಮಾಡಿದ್ದಾರೆ.

‘ದಯವಿಟ್ಟು ಹುಷಾರಾಗಿರಿ’; 3ನೇ ಬಾರಿ ಕೊವಿಡ್​ ಪಾಸಿಟಿವ್ ಆದ ಖ್ಯಾತ ನಿರ್ಮಾಪಕನ ಮನವಿ​
ಬಂಡ್ಲ ಗಣೇಶ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 10, 2022 | 9:43 AM

ಕೊರೊನಾ ವೈರಸ್​ (Coronavirus) ಹಾವಳಿ ಮತ್ತೆ ಶುರುವಾಗಿದೆ. ದೇಶಾದ್ಯಂತ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ (Omicron Cases in India) ಹೆಚ್ಚುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣ ಆಗಿದೆ. ಮೂರನೇ ಅಲೆಯಲ್ಲಿ ಮತ್ತೆ ಜನರ ಜೀವನ ಅಸ್ತವ್ಯಸ್ತ ಆಗಬಹುದೆಂಬ ಭಯ ಆವರಿಸಿದೆ. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ಪಾಸಿಟಿವ್​ (Corona Positive) ಆಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ಬಂಡ್ಲ ಗಣೇಶ್​ (Bandla Ganesh) ಅವರಿಗೆ ಕೊರೊನಾ ಸೋಂಕು ತಗುಲಿದೆ. ಮೂರನೇ ಬಾರಿಗೆ ಅವರು ಕೊವಿಡ್​ 19 ಪಾಸಿಟಿವ್​ ಆಗಿದ್ದಾರೆ. ಹಾಗಾಗಿ ಅವರು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಎಲ್ಲರೂ ಜಾಗೃತವಾಗಿರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ತಮಗೆ ಕೊರೊನಾ ಪಾಸಿಟಿವ್​ ಆಗಿರುವ ಕುರಿತು ಬಂಡ್ಲ ಗಣೇಶ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ನಾನು ದೆಹಲಿಯಲ್ಲಿದ್ದೆ. ಇಂದು ಸಂಜೆ ಕೊವಿಡ್​ ಪಾಸಿಟಿವ್​ ಆಗಿರುವ ವರದಿ ಬಂದಿದೆ. ನನಗೆ ಸಣ್ಣ-ಪುಟ್ಟ ಲಕ್ಷಣಗಳಿವೆ. ನನ್ನ ಕುಟುಂಬದವರಿಗೆ ನೆಗೆಟಿವ್​ ವರದಿ ಬಂದಿದೆ. ದಯವಿಟ್ಟು ಹುಷಾರಾಗಿರಿ. ಪ್ರಯಾಣ ಮಾಡುವುದಕ್ಕಿಂತ ಮುನ್ನ ಯೋಚಿಸಿ. ನಾನು ಐಸೋಲೇಟ್​ ಆಗಿದ್ದೇನೆ’ ಎಂದು ಬಂಡ್ಲ ಗಣೇಶ್​ ಟ್ವೀಟ್ ಮಾಡಿದ್ದಾರೆ.

ಮೊದಲ ಬಾರಿಗೆ ಬಂಡ್ಲ ಗಣೇಶ್​ ಅವರಿಗೆ ಕೊರೊನಾ ಸೋಂಕು ತಗುಲಿದಾಗ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಚೇತರಿಸಿಕೊಂಡಿದ್ದರು. ನಂತರ ಎರಡನೇ ಅಲೆ ಸಂದರ್ಭದಲ್ಲಿ ಅವರಿಗೆ ಮತ್ತೆ ಕೊವಿಡ್​ ಪಾಸಿಟಿವ್​ ಆಗಿತ್ತು. ಈಗ ಮೂರನೇ ಬಾರಿಗೆ ಅವರಿಗೆ ಸೋಂಕು ತಗುಲಿದೆ. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳಿಗೆ ಕೊವಿಡ್​ ಅಂಟಿದೆ. ನಟ ಮಹೇಶ್​ ಬಾಬು, ಗಾಯಕ ವಿಶಾಲ್​ ದದ್ಲಾನಿ, ನಿರ್ಮಾಪಕಿ ಏಕ್ತಾ ಕಪೂರ್​ ಸೇರಿದಂತೆ ಹಲವು ಸೆಲೆಬ್ರಿಟಿಗಳು ತಮಗೆ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಟ್ವೀಟ್​ ಮಾಡಿದ್ದ ಮಹೇಶ್​ ಬಾಬು ಅವರು, ‘ನನ್ನ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ಈ ಪತ್ರ. ಎಲ್ಲಾ ರೀತಿಯ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಸಹ, ನನಗೆ ಕೊವಿಡ್​ 19 ಅಂಟಿದೆ. ನಾನು ಮನೆಯಲ್ಲಿ ಕ್ವಾರಂಟೈನ್​ ಆಗಿದ್ದೇನೆ. ವೈದ್ಯರ ಸೂಚನೆ ಹಾಗೂ ಮಾರ್ಗದರ್ಶನವನ್ನು ಅನುಸರಿಸುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲರನ್ನೂ ಕೊವಿಡ್​ ಪರೀಕ್ಷೆಗೆ ಒಳಪಡಲು ವಿನಂತಿಸಿಕೊಳ್ಳುತ್ತಿದ್ದೇನೆ. ಕೊವಿಡ್​ ಲಸಿಕೆಯನ್ನು ತೆಗೆದುಕೊಳ್ಳದ ಪ್ರತಿಯೊಬ್ಬರು ತಕ್ಷಣವೇ ಲಸಿಕೆ ತೆಗೆದುಕೊಳ್ಳುವಂತೆ ನಾನು ಮನವಿ ಮಾಡುತ್ತೇನೆ. ಕೊರೊನಾ ಲಸಿಕೆ ಅಪಾಯವನ್ನು ಕಡಿಮೆ ಮಾಡುತ್ತದೆ. ದಯವಿಟ್ಟು ಕೊವಿಡ್​ ನಿಯಮಗಳನ್ನು ಅನುಸರಿಸಿ ಮತ್ತು ಸುರಕ್ಷಿತವಾಗಿರಿ’ ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:

ಐಸಿಯುನಲ್ಲಿ ತಂದೆ ಸಾವು; ಕೊವಿಡ್​ನಿಂದ ಹತ್ತಿರ ಹೋಗದ ಮಗ; ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ

ಕೊವಿಡ್​ ಇದ್ದರೂ ಅಣ್ಣನ ಅಂತ್ಯಸಂಸ್ಕಾರಕ್ಕೆ ಹೋದರಾ ಮಹೇಶ್​ ಬಾಬು? ವೈರಲ್​ ಆದ ಫೋಟೋದ ಅಸಲಿಯತ್ತೇನು?  

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ