ಐಸಿಯುನಲ್ಲಿ ತಂದೆ ಸಾವು; ಕೊವಿಡ್​ನಿಂದ ಹತ್ತಿರ ಹೋಗದ ಮಗ; ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ

ಐಸಿಯುನಲ್ಲಿ ತಂದೆ ಸಾವು; ಕೊವಿಡ್​ನಿಂದ ಹತ್ತಿರ ಹೋಗದ ಮಗ; ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ
ಮೋತಿ ದದ್ಲಾನಿ, ವಿಶಾಲ್ ದದ್ಲಾನಿ

ಕಳೆದ ಕೆಲವು ದಿನಗಳಿಂದ ವಿಶಾಲ್​ ದದ್ಲಾನಿ ಅವರ ತಂದೆ ಮೋತಿ ದದ್ಲಾನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

TV9kannada Web Team

| Edited By: Madan Kumar

Jan 08, 2022 | 1:19 PM

ಕೊರೊನಾ ವೈರಸ್​ ಕಾರಣದಿಂದ ಜನರು ಎದುರಿಸುತ್ತಿರುವ ಕಷ್ಟ ಒಂದೆರಡಲ್ಲ. ಎಲ್ಲರ ಬದುಕಿನಲ್ಲಿ ಅನಿಶ್ಚಿತತೆ ಆವರಿಸಿದೆ. ಮುಂದೇನು ಎಂಬ ಗೊಂದಲದಲ್ಲೇ ಕಾಲ ಕಳೆಯುವಂತಾಗಿದೆ. ಕೊವಿಡ್​ (Covid 19) ಸೋಂಕು ತಗುಲಿದರೆ ಆತ್ಮೀಯರಿಂದಲೂ ದೂರ ಇರಬೇಕಾದ ಪರಿಸ್ಥಿತಿ ಬಂದೊದಗುತ್ತಿದೆ. ಪ್ರೀತಿಪಾತ್ರರ ಅಂತಿಮ ಸಂಸ್ಕಾರದಲ್ಲೂ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಬಾಲಿವುಡ್​ನ (Bollywood) ಖ್ಯಾತ ಗಾಯಕ ವಿಶಾಲ್​ ದದ್ಲಾನಿ (Vishal Dadlani) ಅವರಿಗೆ ಅಕ್ಷರಶಃ ಇಂಥ ಸ್ಥಿತಿ ಬಂದಿದೆ. ಅವರ ತಂದೆ ಮೃತರಾಗಿದ್ದಾರೆ. ಆದರೆ ಕೊನೇ ಗಳಿಗೆಯಲ್ಲಿ ಅಪ್ಪನ ಜೊತೆ ಇರಲು ವಿಶಾಲ್​ ದದ್ಲಾನಿ ಅವರಿಗೆ ಸಾಧ್ಯವಾಗಿಲ್ಲ. ಕಳೆದ ಕೆಲವು ದಿನಗಳಿಂದ ಕೊವಿಡ್​ ಪಾಸಿಟಿವ್​ (Corona Positive) ಆಗಿರುವ ಅವರು ತಮ್ಮವರಿಂದಲೇ ದೂರ ಉಳಿದುಕೊಂಡು ನೋವು ಅನುಭವಿಸುತ್ತಿದ್ದಾರೆ. 

ಬಾಲಿವುಡ್​ನಲ್ಲಿ ನೂರಾರು ಗೀತೆಗಳನ್ನು ಹಾಡಿ ಫೇಮಸ್​ ಆಗಿದ್ದಾರೆ ವಿಶಾಲ್​ ದದ್ಲಾನಿ. ಶುಕ್ರವಾರ (ಜ.7) ಅವರಿಗೆ ಕೊರೊನಾ ಪಾಸಿಟಿವ್​ ಆಗಿತ್ತು. ಆ ಕಾರಣದಿಂದ ಅವರು ಎಲ್ಲರಿಂದ ಐಸೋಲೇಟ್​ ಆಗಿದ್ದರು. ಕಳೆದ ಕೆಲವು ದಿನಗಳಿಂದ ಅವರ ತಂದೆ ಮೋತಿ ದದ್ಲಾನಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಮೋತಿ ದದ್ಲಾನಿ ನಿಧನರಾಗಿದ್ದಾರೆ. ಅಪ್ಪನ ಕೊನೇ ಕ್ಷಣಗಳಲ್ಲಿ ಜೊತೆಗಿರಲು ವಿಶಾಲ್​ಗೆ ಸಾಧ್ಯವಾಗಿಲ್ಲ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಕಳೆದ ರಾತ್ರಿ ಅತ್ಯುತ್ತಮ ವ್ಯಕ್ತಿಯನ್ನು ಕಳೆದುಕೊಂಡೆ. ಬದುಕಿನಲ್ಲಿ ಇವರಿಗಿಂತ ಒಳ್ಳೆಯ ತಂದೆಯನ್ನು, ಒಳ್ಳೆಯ ಗುರುವನ್ನು ನಾನು ಬಯಸಲು ಸಾಧ್ಯವಿಲ್ಲ. ನನ್ನಲ್ಲಿ ಇರುವ ಎಲ್ಲ ಒಳ್ಳೆಯತನಗಳು ಅವರ ಪ್ರತಿಬಿಂಬವೇ ಆಗಿದೆ. ಕಳೆದ 3-4 ದಿನಗಳಿಂದ ಅವರು ಐಸಿಯುನಲ್ಲಿ ಇದ್ದರು. ಕೊವಿಡ್​ ಕಾರಣದಿಂದ ನಾನು ನಿನ್ನೆಯಿಂದ ಅವರ ಬಳಿ ಹೋಗಲು ಆಗಿರಲಿಲ್ಲ. ನನ್ನ ತಾಯಿಯ ಅತಿ ಕಷ್ಟದ ಸಂದರ್ಭದಲ್ಲಿ ನಾನು ಅವರೊಂದಿಗೆ ಇರಲಾಗಲಿಲ್ಲ. ಇದು ನ್ಯಾಯವಲ್ಲ. ಅಪ್ಪ ಇಲ್ಲದೇ ಈ ಪ್ರಪಂಚದಲ್ಲಿ ಹೇಗೆ ಬದುಕಬೇಕೋ ತಿಳಿದಿಲ್ಲ. ನಾನು ಸಂಪೂರ್ಣವಾಗಿ ಕಳೆದುಹೋಗಿದ್ದೇನೆ’ ಎಂದು ವಿಶಾಲ್​ ದದ್ಲಾನಿ ಪೋಸ್ಟ್​ ಮಾಡಿದ್ದಾರೆ.

ಖ್ಯಾತ ಗಾಯಕನ ಕರುಣಾಜನಕ ಸ್ಥಿತಿ ಕಂಡು ಎಲ್ಲರೂ ಮರುಕು ವ್ಯಕ್ತಪಡಿಸಿದ್ದಾರೆ. ಅಗಲಿದ ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಮೆಂಟ್​ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳ ವಲಯದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿದೆ. ಕಳೆದ ಕೆಲವು ದಿನಗಳಿಂದ ಬಾಲಿವುಡ್​ನ ಅನೇಕರಿಗೆ ಕೊವಿಡ್​ ಪಾಸಿಟಿವ್​ ಆಗಿದೆ.

View this post on Instagram

A post shared by VISHAL (@vishaldadlani)

ದೇಶಾದ್ಯಂತ ಕೊರೊನಾ ಮೂರನೇ ಅಲೆ ಶುರುವಾಗಿದೆ. ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅನೇಕ ಕಡೆಗಳಲ್ಲಿ ಕಠಿಣ ನಿಯಮಗಳನ್ನು ಹೇರಲಾಗಿದೆ. ವೀಕೆಂಡ್​ ಕರ್ಫ್ಯೂ ಮತ್ತು ನೈಟ್​ ಕರ್ಫ್ಯೂ ಸಹ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ:

ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಪಾರ್ಟಿ ಶುರು ಮಾಡಿಕೊಂಡ ಕರೀನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​

Mahesh Babu: ಟಾಲಿವುಡ್​ ನಟ ಮಹೇಶ್​ ಬಾಬುಗೆ ಕೊವಿಡ್​ ಪಾಸಿಟಿವ್​

Follow us on

Related Stories

Most Read Stories

Click on your DTH Provider to Add TV9 Kannada