ಇತರರಿಗೆ ಕೊವಿಡ್​ ಹರಡುವಂತೆ ವರ್ತಿಸಿದ ಕಂಗನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್: ನಟಿ ಮಾಡಿದ ತಪ್ಪೇನು?​

ಇತರರಿಗೆ ಕೊವಿಡ್​ ಹರಡುವಂತೆ ವರ್ತಿಸಿದ ಕಂಗನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಕ್ಲಾಸ್: ನಟಿ ಮಾಡಿದ ತಪ್ಪೇನು?​
ಕಂಗನಾ ರಣಾವತ್

ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು. ಆದರೆ ಕಂಗನಾ ರಣಾವತ್​ ಮಾತ್ರ ಇದರ ಪರಿವೇ ಇಲ್ಲದಂತೆ ವರ್ತಿಸಿದ್ದಾರೆ.

TV9kannada Web Team

| Edited By: Madan Kumar

Jan 08, 2022 | 3:56 PM

ಸದಾ ವಿವಾದಗಳಿಂದಲೇ ಸದ್ದು ಮಾಡುತ್ತಾರೆ ನಟಿ ಕಂಗನಾ ರಣಾವತ್. ಕೆಲವೊಮ್ಮೆ ಬೇಕಂತಲೇ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇನ್ನೂ ಕೆಲವೊಮ್ಮೆ ವಿವಾದಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಒಟ್ಟಿನಲ್ಲಿ ಅವರಿಗೂ ಕಾಂಟ್ರವರ್ಸಿಗೂ ಎಲ್ಲಿಲ್ಲದ ನಂಟು.​ ಕಂಡವರ ತಪ್ಪನ್ನು ಎತ್ತಿ ಹೇಳುವಲ್ಲಿ ಕಂಗನಾ (Kangana Ranaut) ಸದಾ ಮುಂದಿರುತ್ತಾರೆ. ತಮಗೆ ಸಂಬಂಧ ಇಲ್ಲದಿರುವ ವಿಷಯದಲ್ಲೂ ತಲೆ ಹಾಕಿ ಕಿರಿಕ್ (Kangana Ranaut Controversy)​ ಮಾಡಿಕೊಳ್ಳುತ್ತಾರೆ. ಆದರೆ ಈಗ ಅವರೇ ಒಂದು ತಪ್ಪು ಮಾಡಿ ಪೇಚಿಗೆ ಸಿಲುಕಿದ್ದಾರೆ. ಕೊವಿಡ್​ (Coronavirus) ಹರಡುತ್ತಿರುವ ಈ ಸಂದರ್ಭದಲ್ಲಿ ಕಂಗನಾ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ.

ದೇಶದಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ರೂಪಾಂತರಿಯ ಕಾಟ ಅತಿಯಾಗುತ್ತಿದೆ. ಇಂಥ ವೈರಸ್​ ಹರಡದಂತೆ ತಡೆಯಲು ಅನೇಕ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಚಾಲ್ತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು. ಆದರೆ ಕಂಗನಾ ಮಾತ್ರ ಇದರ ಪರಿವೇ ಇಲ್ಲದಂತೆ ವರ್ತಿಸಿದ್ದಾರೆ.

ಇತ್ತೀಚೆಗೆ ಕಂಗನಾ ಅವರು ಒಂದು ರೆಸ್ಟೋರೆಂಟ್​ಗೆ ತೆರಳಿದ್ದಾರೆ. ಅಲ್ಲಿ ಹಲವು ಕೇಕ್​ ಪೀಸ್​ಗಳನ್ನು ಇರಿಸಲಾಗಿತ್ತು. ಆ ಪೈಕಿ ಒಂದು ಕೇಕ್​ ಪೀಸ್​ ಎತ್ತಿಕೊಂಡ ಅವರು ಬಾಯಿಯ ಹತ್ತಿರಕ್ಕೆ ತಂದು ತಿನ್ನುವಂತೆ ನಟಿಸಿದ್ದಾರೆ. ನಂತರ ಅದೇ ಕೇಕ್​ ಅನ್ನು ವಾಪಸ್​ ಇಟ್ಟಿದ್ದಾರೆ. ಅವರು ಇಷ್ಟೆಲ್ಲ ಮಾಡಿರುವುದು ಪಾಪರಾಜಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ವಿಡಿಯೋ ಕಂಡು ಜನರು ಕೆಂಡಾಮಂಡಲ ಆಗಿದ್ದಾರೆ. ಕೇಕ್​ ಅನ್ನು ಬಾಯಿಯ ಹತ್ತಿರಕ್ಕೆ ತಂದು, ತಿನ್ನುವಂತೆ ನಟಿಸಿದ ಬಳಿಕ ವಾಪಸ್​ ಇಟ್ಟಿರುವುದರಿಂದ ವೈರಸ್​ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಂಗನಾ ಈ ರೀತಿ ಮಾಡಿದ್ದು ತಪ್ಪು ಎಂದು ನೆಟ್ಟಿಗರು ಖಾರವಾಗಿ ಕಮೆಂಟ್​ ಮಾಡುತ್ತಿದ್ದಾರೆ. ‘ಮೊದಲನೆಯದಾಗಿ ಅವರು ಆ ಕೇಕ್​ ಅನ್ನು ಮುಟ್ಟಿದರು. ನಂತರ ಬಾಯಿಯ ಬಳಿ ತೆಗೆದುಕೊಂಡು ಹೋಗಿ ಉಸಿರು ತಾಗಿಸಿದರು. ನಂತರ ಅದನನ್ನು ವಾಪಸ್​ ಇಟ್ಟರು. ಇದು ಸರಿಯಾದ ವರ್ತನೆ ಅಲ್ಲ. ಕೊವಿಡ್​ ಹರಡುತ್ತಿರುವ ಈ ಸಂದರ್ಭದಲ್ಲಿ ಹೀಗೆ ಮಾಡಿದ್ದು ಸರಿಯಲ್ಲ. ಖಂಡಿತವಾಗಿ ಅವರು ವೈರಸ್​ ಹರಡುತ್ತಿದ್ದಾರೆ’ ಎಂದು ಅನೇಕರು ಕಟು ಟೀಕೆ ಮಾಡಿದ್ದಾರೆ. ಸದ್ಯ ಈ ಕುರಿತು ಕಂಗನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಯಾವ ರೀತಿ ಪ್ರತಿಕ್ರಿಯಿಸಬಹುದು ಎಂಬುದನ್ನು ತಿಳಿಯಲು ನೆಟ್ಟಿಗರು ಕಾದಿದ್ದಾರೆ.

ಇದನ್ನೂ ಓದಿ:

‘2022ರಲ್ಲಿ ಕಡಿಮೆ ಎಫ್ಐರ್ ಬೀಳಲಿ, ಹೆಚ್ಚು ಪ್ರೇಮ ಪತ್ರಗಳು ಬರಲಿ’; ದೇವರಲ್ಲಿ ಕಂಗನಾ ವಿಶೇಷ ಪ್ರಾರ್ಥನೆ

ಪೊಲೀಸ್​ ಠಾಣೆಯಲ್ಲಿ ಕಂಗನಾ ಬಿಂಕ ನೋಡಿ ಅಚ್ಚರಿ ಪಟ್ಟ ಪೊಲೀಸರು; ಹೈಲೈಟ್​ ಆಯ್ತು ಮುತ್ತಿನ ನೆಕ್ಲೆಸ್​

Follow us on

Related Stories

Most Read Stories

Click on your DTH Provider to Add TV9 Kannada