ಧಾರವಾಡದ ಎಪಿಎಮ್​ಸಿ ಮಾರ್ಕೆಟ್​ನಲ್ಲಿ ಜನರ ಮುಖದ ಮೇಲೆ ಮಾಸ್ಕ್ ಇಲ್ಲ, ದೈಹಿಕ ಅಂತರವಂತೂ ಇಲ್ಲವೇ ಇಲ್ಲ!!

ಲಸಿಕೆ ಹಾಕಿಸಿಕೊಂಡರೂ ಸೋಂಕು ತಾಕುತ್ತದೆ, ಆದರೆ ಅದರ ತೀವ್ರತೆ ಕಮ್ಮಿಯಿರುತ್ತೆ ಎಂದು ತಜ್ಞರು ಪದೇಪದೆ ಹೇಳುತ್ತಿರುವದನ್ನು ನಮ್ಮ ಅನುಕೂಲಕ್ಕಾಗಿ ಮರೆತು ಬಿಡುವುದು ಅಥವಾ ಮರೆತಂತೆ ಮಾಡುವುದು ಮೂರ್ಖತನವಲ್ಲದೆ ಮತ್ತೇನೂ ಅಲ್ಲ.

ಕರ್ನಾಟಕ ಮತ್ತು ದೇಶದ ಎಲ್ಲ ಭಾಗಗಳಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಜನರ ದಿವ್ಯ ನಿರ್ಲಕ್ಷ್ಯ ಸೋಂಕು ಶರವೇಗದಲ್ಲಿ ಹಬ್ಬಲು ನೆರವಾಗುತ್ತಿದೆ. ಧಾರವಾಡದ ಟಿವಿ9 ವರದಿಗಾರ ನರಸಿಂಹಮೂರ್ತಿ ಪ್ಯಾಟಿ ಅವರು ಅಲ್ಲಿನ ಒಕ್ಕಲುತನ ಹುಟ್ಟುವಳಿ ಮಾರ್ಕೆಟ್ (ಎ ಪಿ ಎಮ್ ಸಿ) ಹೊಸ ಕಟ್ಟಡದ ಬಳಿ ಜನ ಕೊರೋನಾ ವೈರಸ್​ಗೆ ಬಂದು ನಮ್ಮ ದೇಹವನ್ನು ಸೇರಿಕೋ ಎಂಬಂತೆ ಬಹಿರಂಗ ಆಹ್ವಾನ ನೀಡುತ್ತಿರುವ ಕುರಿತು ಒಂದು ವರದಿಯನ್ನು ಕಳಿಸಿದ್ದಾರೆ. ನೀವೊಮ್ಮೆ ಈ ವಿಡಿಯೋವನ್ನು ಗಮನವಿಟ್ಟು ನೋಡಿ ಮಾರಾಯ್ರೇ. ಮಾರ್ಕೆಟ್​ನಲ್ಲಿ ಜನ ಜಾತ್ರೆಯಂತೆ ಸೇರಿದ್ದಾರೆ ಆದರೆ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಮಾಸ್ಕ್ ಧರಿಸಿದ್ದಾರೆ. ದೈಹಿಕ ಅಂತರ ಕಾಯ್ದುಕೊಳ್ಳುವ ಮಾತಂತೂ ದೂರವೇ ಉಳೀತು. ಜನ ಯಾಕೆ ಹೀಗೆ ಅಡುತ್ತಾರೆ ಅನ್ನೋದು ಅರ್ಥವಾಗುವುದಿಲ್ಲ ಮಾರಾಯ್ರೇ.

ಎರಡನೇ ಅಲೆಯಲ್ಲಿ ಜನ ಹೇಗೆ ಸಂಕಟಪಟ್ಟರು, ಆಕ್ಸಿಜನ್ ಸಿಗದೆ ರಸ್ತೆಗಳಲ್ಲಿ ಜನ ಕುಸಿದು ಬಿದ್ದು ಮಹಾಮಾರಿಗೆ ಬಲಿಯಾದ ಬಗ್ಗೆ ಗೊತ್ತಿದ್ದರೂ ಜನರಲ್ಲಿ ಅರಿವು ಮೂಡಿಲ್ಲ. ಲಸಿಕೆ ಹಾಕಿಸಿಕೊಂಡಾಗಿದೆ, ಕೊರೋನಾ ವೈರಸ್ ನಮಗೇನೂ ಮಾಡದು ಎಂಬ ಉಡಾಫೆ ಧೋರಣೆ ಜನರಲ್ಲಿದೆ. ಅಮೇರಿಕನಲ್ಲಿ ಪ್ರತಿದಿನ ಹತ್ತು ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲೂ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.

ಲಸಿಕೆ ಹಾಕಿಸಿಕೊಂಡರೂ ಸೋಂಕು ತಾಕುತ್ತದೆ, ಆದರೆ ಅದರ ತೀವ್ರತೆ ಕಮ್ಮಿಯಿರುತ್ತೆ ಎಂದು ತಜ್ಞರು ಪದೇಪದೆ ಹೇಳುತ್ತಿರುವದನ್ನು ನಮ್ಮ ಅನುಕೂಲಕ್ಕಾಗಿ ಮರೆತು ಬಿಡುವುದು ಅಥವಾ ಮರೆತಂತೆ ಮಾಡುವುದು ಮೂರ್ಖತನವಲ್ಲದೆ ಮತ್ತೇನೂ ಅಲ್ಲ ಮಾರಾಯ್ರೇ.

ಧಾರವಾಡದ ಜನ ಬುದ್ಧಿವಂತರು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅದರೆ ಕೋವಿಡ್ ಪಿಡುಗು ನಿಯಂತ್ರಣ ವಿಷಯದಲ್ಲಿ ಅವರು ಯಾಕೆ ಹೀಗಾಡುತ್ತಿದ್ದಾರೋ? ಜನರೆಲ್ಲ ಬಹಳ ಎಚ್ಚರದಿಂದಿರಬೇಕು, ಮಾಸ್ಕ್ ಮತ್ತು ವಿವೇಕವನ್ನು ಮನೆಯಲ್ಲಿಟ್ಟು ಹೊರಗೆ ಹೋಗುವುದು ಬೇಡ.

ಇದನ್ನೂ ಓದಿ:   ರಂಗುರಂಗಿನ ದಿರಿಸಿನಲ್ಲಿ ಜೆನಿಲಿಯಾ ಡಿಸೋಜ ಚೆಂಗುಲಾಬಿಯಂತೆ ಕಾಣುತ್ತಾರೆ, ವಿಡಿಯೋ ನೋಡಿ ಮರುಳಾಗ್ತೀರಾ!!

Published On - 6:31 pm, Tue, 11 January 22

Click on your DTH Provider to Add TV9 Kannada