Sooryavanshi: ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ‘ಸೂರ್ಯವಂಶಿ’; ದಿನದ 24 ಗಂಟೆಯೂ ಅಕ್ಷಯ್ ಕುಮಾರ್ ಚಿತ್ರ ಪ್ರದರ್ಶನ
Akshay Kumar: ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಸಿನಿಮಾ ತೆರೆಕಂಡು 4 ದಿನ ಕಳೆದ ಬಳಿಕ ಇದರ ಕ್ರೇಜ್ ಹೆಚ್ಚಿದೆ. ಅಭಿಮಾನಿಗಳಿಗಾಗಿ ಮಧ್ಯರಾತ್ರಿ ಕೂಡ ಹೆಚ್ಚುವರಿ ಶೋಗಳನ್ನು ಹಾಕಬೇಕಾದ ಸಂದರ್ಭ ಬಂದಿದೆ.
ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ಧೂಳೆಬ್ಬಿಸುತ್ತಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನ.5ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆ ಆಯಿತು. ಮೊದಲ ದಿನವೇ ಈ ಸಿನಿಮಾ 26 ಕೋಟಿ ರೂ. ಕಮಾಯಿ ಮಾಡುವಲ್ಲಿ ಯಶಸ್ವಿ ಆಯಿತು. ನಂತರದ ದಿನಗಳಲ್ಲಿ ವೀಕೆಂಡ್ ರಜೆ ಇದ್ದಿದ್ದರಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ರೋಹಿತ್ ಶೆಟ್ಟಿ ನಿರ್ದೇಶನದ ‘ಸೂರ್ಯವಂಶಿ’ ಕಂಡು ಜನರು ಮೆಚ್ಚಿಕೊಂಡಿದ್ದಾರೆ. ಹೆಚ್ಚಿನ ಶೋ ಏರ್ಪಡಿಸುವಂತೆ ಬೇಡಿಕೆ ಬಂದಿದೆ. ಅದರ ಪರಿಣಾಮವಾಗಿ ಮುಂಬೈ ನಗರದಲ್ಲಿ ದಿನದ 24 ಗಂಟೆಯೂ ‘ಸೂರ್ಯವಂಶಿ’ ಪ್ರದರ್ಶನ ಕಾಣುವಂತಾಗಿದೆ.
ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆದಾಗ ಮೊದಲ ದಿನ ಮುಂಜಾನೆ ಶೋ ಏರ್ಪಡಿಸುವುದು ಸಹಜ. ಕೆಲವೊಮ್ಮೆ ಮಧ್ಯರಾತ್ರಿ ಸಹ ಪ್ರದರ್ಶನ ಇರುತ್ತದೆ. ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಸಿನಿಮಾ ತೆರೆಕಂಡು 4 ದಿನ ಕಳೆದ ಬಳಿಕ ಇದರ ಕ್ರೇಜ್ ಹೆಚ್ಚಿದೆ. ಅಭಿಮಾನಿಗಳು ಹುಚ್ಚೆದ್ದು ಸಿನಿಮಾ ನೋಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಎಲ್ಲ ಪ್ರದರ್ಶನದ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ. ಹಾಗಾಗಿ ಮಧ್ಯರಾತ್ರಿ ಕೂಡ ಹೆಚ್ಚುವರಿ ಶೋಗಳನ್ನು ಹಾಕಬೇಕಾದ ಸಂದರ್ಭ ಬಂದಿದೆ. ಆ ಮೂಲಕ ‘ಸೂರ್ಯವಂಶಿ’ ಈ ವರ್ಷದ ಅತಿ ದೊಡ್ಡ ಹಿಟ್ ಸಿನಿಮಾ ಎಂಬ ಖ್ಯಾತಿಗೆ ಒಳಗಾಗುತ್ತಿದೆ.
ಕೆಲವು ಚಿತ್ರಮಂದಿರಗಳಲ್ಲಿ ರಾತ್ರಿ 11.45ಕ್ಕೆ ಹೆಚ್ಚುವರಿ ಶೋ ಏರ್ಪಡಿಸಲಾಗಿದೆ. ಅದೂ ಸಾಲದೆಂಬಂತೆ ಮಧ್ಯರಾತ್ರಿ 12.30, 2 ಗಂಟೆ, ನಸುಕಿನ 4.30, 5.30 ಹಾಗೂ ಮುಂಜಾನೆ 6 ಗಂಟೆಗೆ ‘ಸೂರ್ಯವಂಶಿ’ ಪ್ರದರ್ಶನ ನಡೆಸಲಾಗಿದೆ. ಈ ಪರಿ ಕ್ರೇಜ್ ಕಂಡು ಎಲ್ಲರೂ ಬೆರಗಾಗಿದ್ದಾರೆ. ಭಾರಿ ಉತ್ಸಾಹದಿಂದ ಸಿನಿಮಾ ನೋಡಲು ಬಂದಿರುವ ಅಭಿಮಾನಿಗಳು ಟಿಕೆಟ್ ಸಿಗದೇ ಹಿಂದಿರುಗಬಾರದು ಎಂಬ ಕಾರಣಕ್ಕೆ ಚಿತ್ರಮಂದಿರಗಳ ಮಾಲೀಕರು ಹೆಚ್ಚಿನ ಶೋ ವ್ಯವಸ್ಥೆ ಮಾಡಿದ್ದಾರೆ.
ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಲು ಹಲವು ಕಾರಣಗಳಿದ್ದವು. ಅಕ್ಷಯ್ಕುಮಾರ್, ಕತ್ರಿನಾ ಕೈಫ್ ಮುಖ್ಯ ಪಾತ್ರ ನಿಭಾಯಿಸಿದ್ದು, ಅಜಯ್ ದೇವಗನ್ ಹಾಗೂ ರಣವೀರ್ ಸಿಂಗ್ ಕೂಡ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸ್ವಮೇಕ್ ಕಥೆಯನ್ನು ರೋಹಿತ್ ಶೆಟ್ಟಿ ತೆರೆಗೆ ತಂದಿದ್ದಾರೆ. ಇಡೀ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದೆ. ಆ್ಯಕ್ಷನ್ ದೃಶ್ಯಗಳು ಅಭಿಮಾನಿಗಳಿಗೆ ಸಖತ್ ಇಷ್ಟ ಆಗುತ್ತಿದೆ.
ಇದನ್ನೂ ಓದಿ:
2 ಬಾರಿ ಅಕ್ಷಯ್ ಕುಮಾರ್ ಕೆನ್ನೆಗೆ ಬಾರಿಸಿದ ಕತ್ರಿನಾ ಕೈಫ್; ಇದನ್ನೆಲ್ಲ ಅಕ್ಕಿ ಸಹಿಸಿಕೊಂಡಿದ್ದೇಕೆ?
ಅಕ್ಷಯ್ ಕುಮಾರ್ಗೂ ಆಗಿತ್ತು ಲೈಂಗಿಕ ಕಿರುಕುಳ; ಲಿಫ್ಟ್ನಲ್ಲಿ ನಡೆದ ಕರಾಳ ಘಟನೆ ಬಗ್ಗೆ ಅಕ್ಕಿ ಮಾತು
Published On - 9:58 am, Mon, 8 November 21