AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ, ಮಗು ಆದ್ಮೇಲೆ ಡೇಟಿಂಗ್​ ಆ್ಯಪ್​ನಲ್ಲಿ ಖಾತೆ ತೆರೆದ್ರಾ ಲಾರಾ ದತ್ತಾ? ಲೈವ್​ನಲ್ಲಿ ಸ್ಪಷ್ಟನೆ ನೀಡಿದ ನಟಿ

‘ಡೇಟಿಂಗ್​ ಆ್ಯಪ್​ಗಳ ಬಗ್ಗೆ ನನ್ನ ವಿರೋಧ ಏನೂ ಇಲ್ಲ. ಒಬ್ಬರಿಗೊಬ್ಬರು ಪರಿಚಯಗೊಂಡು ಭೇಟಿ ಆಗಲು ಅದು ಒಳ್ಳೆಯ ವೇದಿಕೆ’ ಎಂದು ಲಾರಾ ದತ್ತಾ ಹೇಳಿದ್ದಾರೆ.

ಮದುವೆ, ಮಗು ಆದ್ಮೇಲೆ ಡೇಟಿಂಗ್​ ಆ್ಯಪ್​ನಲ್ಲಿ ಖಾತೆ ತೆರೆದ್ರಾ ಲಾರಾ ದತ್ತಾ? ಲೈವ್​ನಲ್ಲಿ ಸ್ಪಷ್ಟನೆ ನೀಡಿದ ನಟಿ
ಲಾರಾ ದತ್ತಾ
TV9 Web
| Edited By: |

Updated on: Nov 08, 2021 | 4:12 PM

Share

ಸೆಲೆಬ್ರಿಟಿಗಳ ಬದುಕು ಎಂದಮೇಲೆ ಗಾಸಿಪ್​ ಸಹಜ. ಆದರೆ ಎಲ್ಲ ಗಾಸಿಪ್​ಗಳನ್ನು ಸಹಿಸಿಕೊಳ್ಳುವುದು ಕಷ್ಟ. ನಟಿ, ಮಾಡೆಲ್​ ಲಾರಾ ದತ್ತಾ ಅವರ ಬಗ್ಗೆಯೂ ಅಂಥದ್ದೇ ಒಂದು ವದಂತಿ ಈಗ ಹಬ್ಬಿದೆ. ಆ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದು ಅವರು ಸ್ಪಷ್ಟನೆ ನೀಡಿದ್ದಾರೆ. ವೃತ್ತಿ ಜೀವನದ ಬಗ್ಗೆ ಏನೇ ಗಾಸಿಪ್​ ಹಬ್ಬಿದ್ದರೂ ಲಾರಾ ದತ್ತಾ ನಿರ್ಲಕ್ಷ್ಯ ಮಾಡುತ್ತಿದ್ದರು ಎನಿಸುತ್ತದೆ. ಆದರೆ ಈ ಬಾರಿ ಗಾಳಿ ಸುದ್ದಿ ಕೇಳಿಬಂದಿದ್ದು ಅವರ ಖಾಸಗಿ ಜೀವನದ ಬಗ್ಗೆ. ಅದು ಸ್ವತಃ ಲಾರಾ ದತ್ತಾಗೆ ಅಚ್ಚರಿ ಮೂಡಿಸಿದೆ.

ಡೇಟಿಂಗ್​ ಆ್ಯಪ್​ಗಳ ಮೂಲಕ ಜನರು ತಮ್ಮ ಸಂಗಾತಿಗಳನ್ನು ಆರಿಸಿಕೊಳ್ಳುವುದು ಕಾಮನ್​. ಇಂಥ ಆ್ಯಪ್​ಗಳನ್ನು ಯುವ ಜನರು ಹೆಚ್ಚಾಗಿ ಬಳಸುತ್ತಾರೆ. ನಟಿ ಲಾರಾ ದತ್ತಾ ಕೂಡ ಡೇಟಿಂಗ್​ ಆ್ಯಪ್​ನಲ್ಲಿ ಖಾತೆ ತೆರೆದಿದ್ದಾರೆ ಎಂಬ ಸುದ್ದಿ ಹರಡಿದೆ. ಅಷ್ಟೇ ಅಲ್ಲ, ಅವರ ಹೆಸರಿನಲ್ಲಿ ಇರುವ ಖಾತೆಯ ಸ್ಕ್ರೀನ್​ ಶಾಟ್​ ಕೂಡ ಹರಿದಾಡುತ್ತಿದೆ. ಆದನ್ನು ನೋಡಿ ಬಹುತೇಕರಿಗೆ ಶಾಕ್​ ಆಗಿದೆ. ಯಾಕೆಂದರೆ, ಟೆನಿಸ್​ ಆಟಗಾರ ಮಹೇಶ್​ ಭೂಪತಿ ಜೊತೆ ಮದುವೆ ಆಗಿರುವ ಲಾರಾ ದತ್ತಾ ಅವರು ಒಂದು ಹೆಣ್ಣು ಮಗುವಿನ ತಾಯಿ. ಹೀಗೆ ಸುಖವಾಗಿ ಸಂಸಾರ ಮಾಡಿಕೊಂಡಿರುವ ಅವರಿಗೆ ಡೇಟಿಂಗ್ ಆ್ಯಪ್​ನಲ್ಲಿ ಖಾತೆ ತೆರೆದು, ಹೊಸ ಸಂಗಾತಿ ಹುಡುಕುವ ಅವಶ್ಯಕತೆ ಏನಿದೆ? ಈ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.

ಅನೇಕರು ಲಾರಾ ದತ್ತಾಗೆ ನೇರವಾಗಿ ಮೆಸೇಜ್​ ಮಾಡಿ ಇದನ್ನೇ ಕೇಳುತ್ತಿದ್ದಾರೆ. ‘ಡೇಟಿಂಗ್​ ಆ್ಯಪ್​ನಲ್ಲಿ ಇರುವುದು ನನ್ನ ಖಾತೆ ಅಲ್ಲ’ ಎಂದು ಪ್ರತಿಯೊಬ್ಬರಿಗೂ ಉತ್ತರಿಸಿ ಲಾರಾ ದತ್ತಾಗೆ ಸಾಕಾಗಿದೆ. ಅದಕ್ಕೆ ಅವರು ಇನ್​ಸ್ಟಾಗ್ರಾಮ್​ನಲ್ಲಿ ಲೈವ್​ ಬಂದು ಸ್ಪಷ್ಟನೆ ನೀಡಿದ್ದಾರೆ. ‘ನಾನು ಡೇಟಿಂಗ್​ ಆ್ಯಪ್​ ಬಳಸುತ್ತಿಲ್ಲ. ಅದರಲ್ಲಿ ಈ ಹಿಂದೆ ಕೂಡ ನನ್ನ ಖಾತೆ ಇರಲೇ ಇಲ್ಲ’ ಎಂದು ಹೇಳಿದ್ದಾರೆ.

‘ಡೇಟಿಂಗ್​ ಆ್ಯಪ್​ಗಳ ಬಗ್ಗೆ ನನ್ನ ವಿರೋಧ ಏನೂ ಇಲ್ಲ. ಒಬ್ಬರಿಗೊಬ್ಬರು ಪರಿಚಯಗೊಂಡು ಭೇಟಿ ಆಗಲು ಅದು ಒಳ್ಳೆಯ ವೇದಿಕೆ. ಆದರೆ ನಾನು ಇಂಥ ಆ್ಯಪ್​ ಬಳಸುವುದಿಲ್ಲ’ ಎಂದು ಲಾರಾ ದತ್ತಾ ಹೇಳಿದ್ದಾರೆ. ಬಾಲಿವುಡ್​ನಲ್ಲಿ ಅವರಿಗೆ ಭಾರಿ ಬೇಡಿಕೆ ಇದೆ. ಈ ವರ್ಷ ತೆರೆಕಂಡ ‘ಬೆಲ್​ ಬಾಟಂ’ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರಕ್ಕೆ ಲಾರಾ ದತ್ತಾ ಬಣ್ಣ ಹಚ್ಚಿದ್ದರು. ಆ ಬಳಿಕ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ. ರೂಪದರ್ಶಿಯಾಗಿಯೂ ಅವರು ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

Prabhas: ಡೇಟಿಂಗ್​ ವಿಚಾರಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಭಾಸ್​ ಸುದ್ದಿ; ಇದೆಲ್ಲ ಯಾರ ಜೊತೆ, ಏನು ಕಥೆ?

ಲಿಯಾಂಡರ್​ ಪೇಸ್​ ಜೊತೆ ‘ಮಗಧೀರ’ ಚೆಲುವೆ ಡೇಟಿಂಗ್​; ಮಾಜಿ ಬಾಯ್​ಫ್ರೆಂಡ್​ ಹೇಳಿದ್ದೇನು?

Follow Us
TV9 Web
TV9 Web

TV9 Kannada

Read More
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
‘ಇಷ್ಟು ಗಲೀಜು ಆಟ ಆಡಬೇಡಿ’; ಕಾವ್ಯಾಗೆ ನೇರವಾಗಿ ಹೇಳಿದ ಗಾನವಿ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ
ಎಸ್​ಐಆರ್​ನಲ್ಲಿ 1.7 ಕೋಟಿ ಹೆಸರು ತೆಗೆದಿದ್ದಾರೆ: ಸಚಿವ ರಿಜ್ವಾನ್ ಆರೋಪ