Ravindra Jadeja: ‘ಪುಷ್ಪ ಅಂದ್ರೆ ಹೂವಲ್ಲ; ಬೆಂಕಿ!’; ಮಾಸ್ ಅವತಾರದಲ್ಲಿ ಕಾಣಿಸಿಕೊಂಡು ಮಸ್ತ್ ಡೈಲಾಗ್ ಹೇಳಿದ ಜಡೇಜಾ
Allu Arjun | Pushpa: ಭಾರತ ಕ್ರಿಕೆಟ್ ತಾರೆ ರವೀಂದ್ರ ಜಡೇಜಾ ‘ಪುಷ್ಪ’ ಆಗಿ ಕಾಣಿಸಿಕೊಂಡಿದ್ದಾರೆ! ಅವರ ಲುಕ್ ನೋಡಿದ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ. ಕಾರಣ, ಅಲ್ಲು ಅರ್ಜುನ್ ಗೆಟಪ್ಗೂ ಜಡ್ಡು ಗೆಟಪ್ಗೂ ಅಂಥಾ ವ್ಯತ್ಯಾಸ ಕಾಣುವುದೇ ಇಲ್ಲ!
ಅಲ್ಲು ಅರ್ಜುನ್ (Allu Arjun) ಸದ್ಯ ‘ಪುಷ್ಪ: ದಿ ರೈಸ್’ (Pushpa: The Rise) ಯಶಸ್ಸಿನಲ್ಲಿದ್ದಾರೆ. ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿರುವ ಚಿತ್ರ ಹಿಂದಿಯಲ್ಲೇ ಸುಮಾರು ₹ 80 ಕೋಟಿಗೂ ಅಧಿಕ ಮೊತ್ತ ಬಾಚಿಕೊಂಡಿದೆ. ‘ಪುಷ್ಪ’ದ ಒಟ್ಟಾರೆ ಕಲೆಕ್ಷನ್ ₹ 325 ಕೋಟಿ ದಾಟಿದೆ ಎನ್ನುತ್ತವೆ ಬಾಕ್ಸಾಫೀಸ್ ವರದಿಗಳು. ಇದೇ ಸಂತಸದಲ್ಲಿ ‘ಪುಷ್ಪ’ದ ಎರಡನೇ ಭಾಗಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ಏಪ್ರಿಲ್ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಸುದ್ದಿಯೂ ಚಿತ್ರತಂಡದಿಂದ ಬಂದಿದೆ. ಇದೀಗ ಅಖಾಡಕ್ಕೆ ಹೊಸ ‘ಪುಷ್ಪ’ ಗ್ರಾಂಡ್ ಎಂಟ್ರಿ ನೀಡಿದ್ದಾನೆ. ಹೌದು. ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ರವೀಂದ್ರ ಜಡೇಜಾ (Ravindra Jadeja) ‘ಪುಷ್ಪ’ ಲುಕ್ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಇದಕ್ಕೆ ಸ್ವತಃ ಅಲ್ಲು ಅರ್ಜುನ್ ಆಶ್ಚರ್ಯ ಹೊರಹಾಕಿದ್ದಾರೆ.
ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಇದೀಗ ಅವರು ಸ್ವತಃ ಅಲ್ಲು ಅರ್ಜುನ್ ಪುಷ್ಪ ಚಿತ್ರದ ಗೆಟಪ್ನ್ನು ಅನುಕರಿಸುವ ಪ್ರಯತ್ನ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಚಿತ್ರ ಹಂಚಿಕೊಂಡಿರುವ ಜಡ್ಡು, ಅಲ್ಲು ಅರ್ಜುನ್ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಅದನ್ನು ನೋಡಿರುವ ನೆಟ್ಟಿಗರಿಗೆ ಎರಡಲ್ಲೂ ಅಂತಹ ವ್ಯತ್ಯಾಸವೇನೂ ಕಂಡಿಲ್ಲ. ಜತೆಗೆ ಜಡ್ಡು ಸ್ಟೈಲ್ಗೆ ಮಾರು ಹೋಗಿದ್ದಾರೆ.
ಖಡಕ್ ಲುಕ್ ಶೇರ್ ಮಾಡಿರುವ ಜಡ್ಡು, ಫ್ಯಾನ್ಸ್ಗೆ ಎಚ್ಚರಿಕೆ ನೀಡುವುದನ್ನು ಮರೆತಿಲ್ಲ. ‘‘ಪುಷ್ಪ ಅಂದರೆ ಹೂವು ಎಂದುಕೊಂಡಿದ್ದೀರಾ? ಫೈರ್!’’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಜತೆಗೆ ‘‘ಇದು ಕೇವಲ ಸಾಂಕೇತಿಕ. ಸಿಗರೇಟ್, ಬೀಡಿ, ಟೊಬ್ಯಾಕೊ ಸಂಬಂಧಿತ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ. ಅದನ್ನು ಬಳಸಬೇಡಿ’’ ಎಂದು ಜಡೇಜಾ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲು ಅರ್ಜುನ್ ಜಡೇಜಾ ಪೋಸ್ಟ್ಗೆ ‘ತಗ್ಗೆದೆಲೆ’ ಎಂದು ಬರೆದು ‘ಫೈರ್’ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ.
View this post on Instagram
?????? Thaggede Le !
— Allu Arjun (@alluarjun) January 12, 2022
ಸುಕುಮಾರ್ ನಿರ್ದೇಶನದ ‘ಪುಷ್ಪ: ದಿ ರೈಸ್’ ಸದ್ಯ ಅಮೆಜಾನ್ ಪ್ರೈಮ್ನಲ್ಲೂ ಬಿತ್ತರವಾಗುತ್ತಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಫಹಾದ್ ಫಾಸಿಲ್, ಧನಂಜಯ ಮೊದಲಾದವರು ಕಾಣಿಸಿಕೊಂಡಿದ್ದಾರೆ. ನಟಿ ಸಮಂತಾ ವಿಶೇಷ ಐಟಂ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ.
ಇದನ್ನೂ ಓದಿ:
ಸೀಕ್ರೆಟ್ ಕ್ಯಾಮೆರಾದಲ್ಲಿ ಮಹಿಳಾ ಫ್ಯಾನ್ಸ್ ಫೋಟೋ ಸೆರೆ ಹಿಡಿಯುತ್ತಿದ್ದ ಸಲ್ಮಾನ್ ಖಾನ್; ಕಾರಣ ಏನು?
ಅಕ್ಷಯ್ ಕುಮಾರ್ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್