ನಂದಕಿಶೋರ್​, ಧರ್ಮ ಕೀರ್ತಿರಾಜ್​ ಫ್ರೆಂಡ್​ಶಿಪ್​ ಮೆಲುಕು; ಗೆಳೆಯನ ಚಿತ್ರಕ್ಕೆ ‘ಪೊಗರು’ ಡೈರೆಕ್ಟರ್​ ಸಾಥ್​

ಧರ್ಮ ಕೀರ್ತಿರಾಜ್​ ಮತ್ತು ನಂದಕಿಶೋರ್​ ಅವರು ಬಾಲ್ಯದ ಗೆಳೆಯರು. ಇಬ್ಬರದ್ದು ಹಲವು ವರ್ಷಗಳ ಫ್ರೆಂಡ್​ಶಿಪ್​. ಹಾಗಾಗಿ ಸ್ನೇಹಿತನ ಚಿತ್ರಕ್ಕೆ ನಂದಕಿಶೋರ್​ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

‘ನವಗ್ರಹ’ ಸಿನಿಮಾ ಖ್ಯಾತಿಯ ನಟ ಧರ್ಮ ಕೀರ್ತಿರಾಜ್​ (Dharma Keerthiraj) ಅವರು ಈಗ ‘ಸುಮನ್​’ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ‘ಪೊಗರು’ ನಿರ್ದೇಶಕ ನಂದಕಿಶೋರ್​ (Nanda Kishore) ಅವರು ಅತಿಥಿಯಾಗಿ ಆಗಮಿಸಿದ್ದರು. ಧರ್ಮ ಕೀರ್ತಿರಾಜ್​ ಮತ್ತು ನಂದಕಿಶೋರ್​ ಅವರು ಬಾಲ್ಯದ ಗೆಳೆಯರು. ಇಬ್ಬರದ್ದು ಹಲವು ವರ್ಷಗಳ ಫ್ರೆಂಡ್​ಶಿಪ್​. ಹಾಗಾಗಿ ಸ್ನೇಹಿತನ ಚಿತ್ರಕ್ಕೆ ನಂದಕಿಶೋರ್​ ಆಲ್​ ದಿ ಬೆಸ್ಟ್​ ಹೇಳಿದ್ದಾರೆ. ‘ನಮ್ಮ ತಂದೆ (ಸುಧೀರ್​) ಮತ್ತು ಧರ್ಮ ಅವರ ತಂದೆ (ಕೀರ್ತಿರಾಜ್​) ಫ್ರೆಂಡ್ಸ್​ ಆಗಿದ್ದರು. ಅವರ ಮಕ್ಕಳಾದ ನಾವು ಕೂಡ ಬಾಲ್ಯದ ಸ್ನೇಹಿತರು. ತುಂಬ ಕಷ್ಟಪಟ್ಟು ಮೇಲೆ ಬಂದ ಹುಡುಗ ಧರ್ಮ. ಅವರನ್ನು ಚಾಕೊಲೇಟ್​ ಹೀರೋ ಎನ್ನಬಹುದು. ಕೊವಿಡ್​ ಸಂದರ್ಭದಲ್ಲಿ ಸಿನಿಮಾ ನಿರ್ಮಾಣ ಮಾಡಿ ಹಲವು ಕಲಾವಿದರಿಗೆ ಕೆಲಸ ಕೊಟ್ಟಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು’ ಎಂದಿದ್ದಾರೆ ನಂದಕಿಶೋರ್​. ಈ ಚಿತ್ರಕ್ಕೆ ರವಿ ಸಾಗರ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್​

50 ದಿನ ಪೂರೈಸಿದ ಪೊಗರು! ಧ್ರುವ ಸರ್ಜಾ ನಟನೆಯ ಈ ಚಿತ್ರ ಮಾಡಿದ ಕಲೆಕ್ಷನ್​ ಎಷ್ಟು?

Click on your DTH Provider to Add TV9 Kannada