ಲಾಂಚ್ ಆಯ್ತು ಬಹುನಿರೀಕ್ಷಿತ ಒನ್ಪ್ಲಸ್ 10 ಪ್ರೋ ಸ್ಮಾರ್ಟ್ಫೋನ್; ಇದರ ವಿಶೇಷವೇನು ಗೊತ್ತಾ?
OnePlus 10 Pro: ವನ್ಪ್ಲಸ್ 10 ಪ್ರೋ ಫೀಚರ್ಗಳ ಬಗ್ಗೆ ಮಾತಾಡುವುದಾದರೆ, ಫೋನಿನ ಹಿಂಬದಿಯಲ್ಲಿ ತ್ರಿವಳಿ ಕೆಮೆರಾ ಸೆಟಪ್ ಇದ್ದು ಅದು 48-ಮೆಗಾ ಪಿಕ್ಸೆಲ್ ಪ್ರೈಮರಿ ಕೆಮೆರಾ, 50-ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು 8-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಒಳಗೊಂಡಿದೆ.
ಮಂಗಳವಾರ ಅಂದರೆ ಜನವರಿ 11 ರಂದು ಚೀನಾನಲ್ಲಿ ವನ್ ಪ್ಲಸ್ 10 ಪ್ರೋ ಪೋನ್ ಲಾಂಚ್ ಆಗಿದೆ. ನಿಮಗೆ ನೆನಪಿರಬಹುದು. ವನ್ ಪ್ಲಸ್ ಸಂಸ್ಥೆಯು ತನ್ನ ಈ ಹೊಸ ಫೋನಿನ ಬಗ್ಗೆ ಮಾಹಿತಿಯನ್ನು ಜನೆವರಿ ತಿಂಗಳಲ್ಲಿ ಕ್ರಮೇಣವಾಗಿ ಬಹಿರಂಗಗೊಳಿಸುವುದಾಗಿ ಹೇಳಿತ್ತು. ವಾರದ ಆರಂಭದಲ್ಲಿ ನಡೆದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋನಿಂದ (ಸಿಇಎಸ್) ಕಂಪನಿಯು ಮಾಹಿತಿಯನ್ನು ಶೇರ್ ಮಾಡಲಾರಂಭಿಸಿದೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ, ಇಂಟರ್ನೆಟ್ ನಲ್ಲಿ ವನ್ಪಲ್ಸ್ 10 ಪ್ರೋ ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿ ಹರಿದು ಬರುತ್ತಲೇ ಇದೆ. ವೀಬೋ ನೀಡಿರುವ ಒಂದು ಮಾಹಿತಿಯ ಪ್ರಕಾರ ಹೊಸ, ಕೇಳಲು ವಿಚಿತ್ರವೆನಿಸುವ ಮತ್ತು ಟಿಯುವಿ ಆಯೋಜಿಸಲ್ಪಡುತ್ತಿರುವ ಪ್ಲೂಯೆನ್ಸಿ ಪ್ರಮಾಣೀಕರಣ ಟೆಸ್ಟ್ ಅನ್ನು ಪಾಸ್ ಮಾಡಿರುವ ಮೊದಲ ಸ್ಮಾರ್ಟ್ಫೋನ್ಗಳಲ್ಲಿ ವನ್ಪ್ಲಸ್ 10 ಪ್ರೋ ಒಂದಾಗಿದೆ.
ಪೋನಿನಲ್ಲಿ ಅಳವಡಿಸಲಾಗಿರುವ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ಗಳ ವಿವಿಧ ಆಯಾಮಗಳನ್ನು ಈ ಪ್ರಮಾಣೀಕರಣ ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ಸ್ಮಾರ್ಟ್ ಫೋನ್ ಖರೀದಿಸಿದ ಮೂರು ವರ್ಷಗಳವರೆಗೆ ಯಾವುದೇ ಅಡಚಣೆ, ಸಮಸ್ಯೆಯಿಲ್ಲದೆ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸುತ್ತದೆ. ಆಗಲೇ ಹೇಳಿದಂತೆ ವನ್ಪ್ಲಸ್ 10 ಪ್ರೋ ಮಂಗಳವಾರ ಚೀನಾನಲ್ಲಿ ಮಾರ್ಕೆಟ್ ಬಿಡುಗಡೆ ಆಗಿದ್ದು, ಬಿಡುಗಡೆ ಕಾರ್ಯಕ್ರಮವು ಕಂಪನಿಯ ವೆಬ್ ಸೈಟ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿತ್ತು.
ವನ್ಪ್ಲಸ್ 10 ಪ್ರೋ ಫೀಚರ್ಗಳ ಬಗ್ಗೆ ಮಾತಾಡುವುದಾದರೆ, ಫೋನಿನ ಹಿಂಬದಿಯಲ್ಲಿ ತ್ರಿವಳಿ ಕೆಮೆರಾ ಸೆಟಪ್ ಇದ್ದು ಅದು 48-ಮೆಗಾ ಪಿಕ್ಸೆಲ್ ಪ್ರೈಮರಿ ಕೆಮೆರಾ, 50-ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು 8-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಒಳಗೊಂಡಿದೆ. ಎಲ್ಲಾ ಮೂರು ಕೆಮೆರಾಗಳು ಎರಡನೇ ತಲೆಮಾರಿನ ಹ್ಯಾಸೆಲ್ಬ್ಲಾಡ್ ಪ್ರೋ ಮೋಡ್ ನ ಸಪೋರ್ಟ್ ಹೊಂದಿವೆ. ಇದು ಹ್ಯಾಸೆಲ್ಬ್ಲಾಡ್ ನ್ಯಾಚುರಲ್ ಕಲರ್ ಸಲೂಶನ್ ನೊಂದಿಗೆ ಪ್ರತಿಯೊಂದು ಕೆಮೆರಾಗೂ 12-ಬಿಟ್ ಆರ್ ಎ ಡಬ್ಲ್ಯೂ ಫೋಟೋ ಸೆರೆಹಿಡಿಯಲು ನೆರವಾಗುತ್ತದೆ.
ಆರಂಭಿಕ ಹಂತದಲ್ಲಿ ವನ್ಪ್ಲಸ್ ಪ್ರೋ 5 ಬಣ್ಣಗಳಲ್ಲಿ ಲಭ್ಯವಿದೆ. ಅವು ಯಾವೆಂದರೆ; ವೊಲ್ಕ್ಯಾನಿಕ್ ಬ್ಲ್ಯಾಕ್, ಎಮರಾಲ್ಡ್ ಫಾರೆಸ್ಟ್, ಸಿಲ್ವರ್, ಲೈಟ್ ಬ್ಲ್ಯೂ ಮತ್ತು ಬಿಳಿ.
ಇದನ್ನೂ ಓದಿ: ಎದುರಾಳಿ ಬ್ಯಾಟರ್ಗಳನ್ನು ಮೋಡಿಗೆ ಸಿಲುಕಿಸುವ ಯುಜ್ವೇಂದ್ರ ಚಹಲ್, ಧನಶ್ರೀ ಮೋಡಿಗೆ ಸಿಲುಕಿದ್ದು ಆಶ್ಚರ್ಯವಿಲ್ಲ! ವಿಡಿಯೋ ನೋಡಿ